100 ಕೋಟಿಗೆ 2 ಅಪಾರ್ಟ್ ಮೆಂಟ್ ಖರೀದಿ; ನೋಂದಣಿಯೇ 5 ಕೋಟಿ

ವಾಹನಗಳ ಬಿಡಿಭಾಗ ತಯಾರಿಸುವ ಎಂಡ್ಯುರೆನ್ಸ್ ಟೆಕ್ನಾಲಜೀಸ್ ಕಾರ್ಯ ನಿರ್ವಾಹಕ ನಿರ್ದೇಶಕರಾದ ಅನುರಾಗ್ ಜೈನ್ ಖರೀದಿ ಮಾಡಿರುವ ಎರಡು ಅಪಾರ್ಟ್ ಮೆಂಟ್ ವ್ಯವಹಾರ ಈಗ ಭಾರೀ ಸುದ್ದಿ ಮಾಡುತ್ತಿದೆ. ದಕ್ಷಿಣ ಮುಂಬೈನ Carmichael ರೆಸಿಡೆನ್ಸಸ್ ನಲ್ಲಿ ಎರಡು ಅಪಾರ್ಟ್ ಮೆಂಟ್ ಗಳನ್ನು 100 ಕೋಟಿ ರುಪಾಯಿಗೆ ಅವರು ಖರೀದಿಸಿದ್ದು, 2020ನೇ ಇಸವಿಯಲ್ಲಿ ಈವರೆಗೆ ನಡೆದಿರುವ ಅತಿ ದೊಡ್ಡ ಮೊತ್ತದ ವಸತಿ ವ್ಯವಹಾರ ಇದಾಗಿದೆ.

ಇದೇ ಅನುರಾಗ್ ಜೈನ್ ಗೆ ಸಂಬಂಧಿಯಾದ- ಶತಕೋಟ್ಯಧಿಪತಿ ರಾಹುಲ್ ಬಜಾಜ್ ಅವರು ಈ ಅಪಾರ್ಟ್ ಮೆಂಟ್ ಬಳಿಯಲ್ಲೇ ತಾವು ಕೂಡ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ. 19ನೇ ಅಂತಸ್ತಿನಲ್ಲಿ 6,370 ಚದರಡಿಯಷ್ಟು ವಿಶಾಲವಾಗಿ, ವಿಲಾಸಿಯಾಗಿದೆ ಆ ಅಪಾರ್ಟ್ ಮೆಂಟ್.

ನೋಂದಣಿ ಶುಲ್ಕವೇ 5 ಕೋಟಿ ರುಪಾಯಿ

ನೋಂದಣಿ ಶುಲ್ಕವೇ 5 ಕೋಟಿ ರುಪಾಯಿ

ಜೈನ್ ಅವರ ವ್ಯವಹಾರಕ್ಕೆ ನೋಂದಣಿ ಶುಲ್ಕವೇ 5 ಕೋಟಿ ರುಪಾಯಿ ಆಗಿದ್ದು, ಗುರುವಾರ ನೋಂದಣಿ ಆಗಿದೆ. ಈ ಬಗ್ಗೆ ಸ್ವತಃ ಅನುರಾಗ್ ಖಾತ್ರಿ ಪಡಿಸಿದ್ದಾರೆ. ಚದರಡಿಗೆ ಕೊಟ್ಟಿರುವ ಈ ಮೊತ್ತ ದೇಶದಲ್ಲೇ ಅತಿ ಹೆಚ್ಚು ಎಂಬ ದಾಖಲೆ ಕೂಡ ಬರೆದಿದೆ. ಈ ಎರಡು ಅಪಾರ್ಟ್ ಮೆಂಟ್ ಗಳು ತಲಾ 3185 ಚದರಡಿಗಳು ಇದ್ದು, ಒಂದು ಚದರಡಿಗೆ 1.57 ಲಕ್ಷದಂತೆ ನೀಡಲಾಗಿದೆ. ಜೈನ್ ಅವರಿಗೆ ಎಂಟು ಕಾರು ಪಾರ್ಕಿಂಗ್ ಲಾಟ್ ಸಿಗಲಿದೆ. ಫೋರ್ಬ್ಸ್ ಇಂಡಿಯಾದ 2019ನೇ ಇಸವಿಯ ಶ್ರೀಮಂತರ ಪಟ್ಟಿಯಲ್ಲಿ ಅನುರಾಗ್ ಜೈನ್ ಗೆ 84ನೇ ಸ್ಥಾನ. ವಾಹನ ಬಿಡಿ ಭಾಗಗಳ ಸಂಸ್ಥೆಯಾದ ಎಂಡ್ಯುರೆನ್ಸ್ ಟೆಕ್ನಾಲಜೀಸ್ ಮತ್ತು ವರಾಕ್ ಎಂಜಿನಿಯರಿಂಗ್ ಎಂಬ ಎರಡು ಕಂಪೆನಿಗಳನ್ನು ನಡೆಸುತ್ತಾರೆ. ಎಂಡ್ಯುರೆನ್ಸ್ ಮಾರುಕಟ್ಟೆ ಬಂಡವಾಳ 12,500 ಕೋಟಿ ಇದೆ. ಈ ಕಂಪೆನಿಯು ಭಾರತದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಮತ್ತು ಯುರೋಪ್ ನಲ್ಲಿ ಕಾರುಗಳಿಗೆ ಬಿಡಿಭಾಗ ಪೂರೈಸುತ್ತದೆ.

ಈ ರಸ್ತೆಯಲ್ಲಿ ಇರುವುದೆಲ್ಲ ಶತಕೋಟ್ಯಧಿಪತಿಗಳ ನಿವಾಸಗಳು

ಈ ರಸ್ತೆಯಲ್ಲಿ ಇರುವುದೆಲ್ಲ ಶತಕೋಟ್ಯಧಿಪತಿಗಳ ನಿವಾಸಗಳು

ಜೈನ್ ಮತ್ತು ಕುಟುಂಬ ಒಳಗೊಂಡಂತೆ ಪ್ರವರ್ತಕರು ಕಂಪೆನಿಯಲ್ಲಿ ಶೇಕಡಾ 75ರಷ್ಟು ಪಾಲನ್ನು ಹೊಂದಿದ್ದಾರೆ. Carmichael ರೆಸಿಡೆನ್ಸಸ್ ಅರ್ಧ ಎಕರೆ ಜಾಗದಲ್ಲಿ ವ್ಯಾಪಿಸಿದೆ. ಅಲ್ಟಾಮೌಂಟ್ ರಸ್ತೆ- Carmichael ರಸ್ತೆಯಲ್ಲಿ ತಲೆ ಬರುತ್ತದೆ. ಈ ರಸ್ತೆಯಲ್ಲಿ ಇರುವುದೆಲ್ಲ ಶತಕೋಟ್ಯಧಿಪತಿಗಳ ನಿವಾಸಗಳೇ. ಮುಕೇಶ್ ಅಂಬಾನಿ, ಕುಮಾರ್ ಮಂಗಲಂ ಬಿರ್ಲಾ ನಿವಾಸಗಳು ಇರುವುದು ಇದೇ ರಸ್ತೆಯಲ್ಲೇ. Carmichael ರೆಸಿಡೆನ್ಸಸ್ ಅಭಿವೃದ್ಧಿ ಪಡಿಸಿರುವುದು ಆರ್.ಎ. ರಿಯಾಲ್ಟಿ ವೆಂಚರ್ಸ್. ಇಪ್ಪತ್ತೆರಡು ಅಂತಸ್ತುಗಳಿವೆ. ಕಳೆದ ಹತ್ತು ದಿನದಲ್ಲಿ ಇದು ಎರಡನೇ ಹೈ ಪ್ರೊಫೈಲ್ ವ್ಯವಹಾರ. ಇಂಡಸ್ ಇಂಡ್ ಬ್ಯಾಂಕ್ ನ ಮಾಜಿ ಎಂ.ಡಿ. ರಮೇಶ್ ಸೊಬ್ತಿ ಕೇಂದ್ರ ಮುಂಬೈನ ವೊರ್ಲಿ ಪ್ರದೇಶದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ 76.3 ಕೋಟಿ ಮೌಲ್ಯದ ಎರಡು ಅಪಾರ್ಟ್ ಮೆಂಟ್ ಗಳನ್ನು ಖರೀದಿಸಿದ್ದಾರೆ.

ದೊಡ್ಡ ಆಸ್ತಿ ವ್ಯವಹಾರ ಪದೇ ಪದೇ ನಡೆಯಲ್ಲ

ದೊಡ್ಡ ಆಸ್ತಿ ವ್ಯವಹಾರ ಪದೇ ಪದೇ ನಡೆಯಲ್ಲ

ಇಂಥ ದೊಡ್ಡ- ದೊಡ್ಡ ಆಸ್ತಿ ವ್ಯವಹಾರಗಳು ಪದೇಪದೇ ನಡೆಯುವುದಿಲ್ಲ. ಅದರಲ್ಲೂ ಕೊರೊನಾದ ಪ್ರಭಾವದಿಂದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದು, ವ್ಯವಹಾರಗಳೇ ನಡೆಯದ ಸಂದರ್ಭದಲ್ಲಿ ಇಂಥ ಬೆಳವಣಿಗೆ ಅಪರೂಪ. ಉಪನಗರಗಳಲ್ಲಿ ಮನೆಗಳ ಮಾರಾಟ ಪ್ರಮಾಣವು ಹೆಚ್ಚಾಗಿದೆ ಎಂಬುದನ್ನು ನೋಂದಣಿಯ ದತ್ತಾಂಶಗಳು ತಿಳಿಸುತ್ತವೆ. ದಕ್ಷಿಣ ಮುಂಬೈ ಭಾಗದಲ್ಲಿ ನಡೆದಿರುವ ಈ ವಿಲಾಸಿ ವ್ಯವಹಾರಗಳ ಬಗ್ಗೆ ಅಚ್ಚರಿ ಪಡುವ ಅಗತ್ಯ ಇಲ್ಲ. ಏಕೆಂದರೆ ಇದು ದೇಶದಲ್ಲೇ ಅತ್ಯಂತ ದುಬಾರಿಯಾದ ಆಸ್ತಿ ಮಾರುಕಟ್ಟೆ ಹೊಂದಿರುವ ಪ್ರದೇಶ. ಆದ್ದರಿಂದ ಕೋಟಿಗಳಲ್ಲೇ ಖರೀದಿ- ಮಾರಾಟ ನಡೆಯುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+