ಬಿ.ಆರ್. ಶೆಟ್ಟಿಗೆ ಸೇರಿದ Finablr 1 USDಗೆ ಮಾರಾಟ; ಇಸ್ರೇಲ್- ಯುಎಇ ಜಂಟಿ ಬಿಜಿನೆಸ್
News
oi-Srinivasa Mata
By ಅನಿಲ್ ಆಚಾರ್
ಯುಎಇಯಲ್ಲಿ ತನ್ನ ವ್ಯವಹಾರ ಸಾಮ್ರಾಜ್ಯ ಸ್ಥಾಪಿಸಿರುವ ಭಾರತೀಯ ಶತಕೋಟ್ಯಧಿಪತಿ ಬಿ.ಆರ್. ಶೆಟ್ಟಿಗೆ ಸೇರಿದ Finablr Plcಯನ್ನು ಇಸ್ರೇಲಿ- ಯುಎಇ ಒಕ್ಕೂಟಕ್ಕೆ 1 ಯುಎಸ್ ಡಾಲರ್ ಗೆ (ರುಪಾಯಿ ಮೌಲ್ಯದಲ್ಲಿ 73.52) ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ 200 ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದ ಈ ವ್ಯವಹಾರ ಇನ್ನಷ್ಟು ಕುಸಿಯದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ವಿದೇಶಿ ವಿನಿಮಯ ಹಾಗೂ ಪಾವತಿ ವ್ಯವಹಾರ ನಡೆಸುವ Finablr Plc ಹಗರಣದಿಂದ ಸೊರಗಿದೆ. Finablr ಲಿಮಿಟೆಡ್ ಸಂಪೂರ್ಣ ಇಶ್ಯೂಡ್ ಷೇರು ಬಂಡವಾಳವನ್ನು ಮಾರಾಟ ಮಾಡಲು ಇಸ್ರೇಲ್ ನ ಗ್ಲೋಬಲ್ ಫಿನ್ ಟೆಕ್ ಇನ್ವೆಸ್ಟ್ ಮೆಂಟ್ಸ್ ಹೋಲ್ಡಿಂಗ್ಸ್ (GFIH) ಜತೆಗೆ "ನಿರ್ದಿಷ್ಟ ಒಂಡಂಬಡಿಕೆ"ಗೆ ಬರಲಾಗಿದೆ ಎಂದು ಘೋಷಿಸಲಾಗಿದೆ.
ಅಂದ ಹಾಗೆ GFIH ಎಂಬುದು ಇಸ್ರೇಲ್ ಮಾಜಿ ಪ್ರಧಾನಿ ಎಹುದ್ ಒಲ್ಮರ್ಟ್ ಗೆ ಸೇರಿದ ಪ್ರಿಸಂ ಗ್ರೂಪ್ ನ ಸಹವರ್ತಿ ಸಂಸ್ಥೆ. ಇದೀಗ ಆ ಸಂಸ್ಥೆಯು ಅಬುಧಾಬಿಯ ರಾಯಲ್ ಸ್ಟ್ರಾಟೆಜಿಕ್ ಪಾರ್ಟನರ್ಸ್ ಜತೆ (RSP) ಒಕ್ಕೂಟ ರಚಿಸಿಕೊಂಡು, ಈ ವ್ಯವಹಾರ ಮಾಡುತ್ತಿದ್ದಾರೆ.
Finablr Plc ಕಳೆದ ಡಿಸೆಂಬರ್ ನಲ್ಲಿ 200 ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು. ಈ ವರ್ಷದ ಏಪ್ರಿಲ್ ನಲ್ಲಿ ಅದರ ಬಹಿರಂಗಪಡಿಸದ 100 ಕೋಟಿ ಅಮೆರಿಕನ್ ಡಾಲರ್ ಸಾಲ ವರದಿ ಆಗಿತ್ತು.
ಯುಎಇ ಹಾಗೂ ಇಸ್ರೇಲ್ ಮಧ್ಯೆ ಈ ವರ್ಷ ಸಂಬಂಧ ಸುಧಾರಣೆ ಆದ ಮೇಲೆ ನಡೆಯುತ್ತಿರುವ ಅತಿ ಮಹತ್ವವಾದ ವಾಣಿಜ್ಯ ವ್ಯವಹಾರ ಇದಾಗಿದೆ. ಎರಡೂ ದೇಶಗಳು ಬ್ಯಾಂಕಿಂಗ್ ನಿಂದ ಮೊಬೈಲ್ ಫೋನ್ ಸೇವೆ ತನಕ ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ. ಎರಡು ದೇಶಗಳ ಮಧ್ಯೆ ವಾರ್ಷಿಕವಾಗಿ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರ 200 ಕೋಟಿ ಯುಎಸ್ ಡಿಯಿಂದ 650 ಕೋಟಿ ಯುಎಸ್ ಡಿ ತನಕ ಮಾಡಬಹುದು ಎಂದು ಇಸ್ರೇಲ್ ಹಣಕಾಸು ಸಚಿವಾಲಯ ಹೇಳಿದೆ.
Notifications
Settings
Clear Notifications
No New Notifications
Notifications
Use the toggle to switch on notifications
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options.
Click on the “Options ”, it opens up the settings page,
Here click on the “Privacy & Security” options listed on the left hand side of the page.
Scroll down the page to the “Permission” section .
Here click on the “Settings” tab of the Notification option.
A pop up will open with all listed sites, select the option “ALLOW“, for the respective site under the status head to allow the notification.
Once the changes is done, click on the “Save Changes” option to save the changes.