ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಹೊಸ ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇನ್ಮುಂದೆ ಆಸ್ತಿ ಖರೀದಿ, ವ್ಯಾಪಾರ ಪರವಾನಗಿಯಿಲ್ಲದೆ ಭಾರತೀಯರಿಗೆ ಯುಎಇ ನಲ್ಲಿ 'ಗೋಲ್ಡನ್ ವೀಸಾ' ಸಿಗಲಿದೆ. ಈ ಹೊಸ ನಿಯಮವು ಭಾರತೀಯ ರಿಯಲ್ ಎಸ್ಟೇಟ್ ಖರೀದಿದಾರರ ಹೂಡಿಕೆ ಮಾದರಿಗಳನ್ನು ಹೇಗೆ ಬದಲಾವಣೆಯಾಗುಬಹುದು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೌದು, ಇನ್ಮುಂದೆ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಯಾವುದೇ ಹೂಡಿಕೆ ಇಲ್ಲ, ಯಾವುದೇ ಆಸ್ತಿ ಇಲ್ಲ ಕೇವಲ ಅವಕಾಶಗಳು ಮಾತ್ರ. ಯುಎಇಯ ಹೊಸ ಗೋಲ್ಡನ್ ವೀಸಾವು ನಾಮನಿರ್ದೇಶನದ ಮೂಲಕ ಭಾರತೀಯರಿಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಶಾಶ್ವತವಾಗಿ ವಾಸಿಸುವಂತಹ ಅವಕಾಶವನ್ನು ನೀಡಿದೆ.
ಯುಎಇ ಗೋಲ್ಡನ್ ವೀಸಾ ಹೊಸ ನಿಯಮದ ಪ್ರಕಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತನ್ನ ಪ್ರತಿಷ್ಠಿತ ಗೋಲ್ಡನ್ ವೀಸಾವನ್ನು ಕೆಲವೊಂದು ಷರತ್ತುಗಳ ಮೇಲೆ ಬದಲಾಯಿಸಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತದ ವೃತ್ತಿಪರರು, ಡಿಜಿಟಲ್ ಕ್ರಿಯೇಟರ್‌ಗಳು, ಆರೋಗ್ಯ ಕಾರ್ಯಕರ್ತರು ಮತ್ತು ಇತರ ನುರಿತ ವ್ಯಕ್ತಿಗಳಿಗೆ ಇದು ಹೆಚ್ಚು ಲಭ್ಯವಾಗುವಂತೆ ಮಾಡಿದೆ. ಗೋಲ್ಡನ್ ವೀಸಾ ಅರ್ಹ ವ್ಯಕ್ತಿಗಳು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡದೆಯೇ, ವ್ಯಾಪಾರ ಪರವಾನಗಿ ಹೊಂದಿರದೆಯೇ ಅಥವಾ ಪ್ರಾಯೋಜಕತ್ವವನ್ನು ಪಡೆಯದೆಯೇ ಒಂದು ಬಾರಿ ಶುಲ್ಕ ಮತ್ತು ಯಶಸ್ವಿ ನಾಮನಿರ್ದೇಶನದ ಮೂಲಕ ಯುಎಇಯಲ್ಲಿ ದೀರ್ಘಾಕಾಲದವರಗೂ ಅಲ್ಲಿ ಜೀವನವನ್ನು ಕಳೆಯಬಹುದು.
ಹೊಸ ಗೋಲ್ಡನ್ ವೀಸಾ ನಿಯಮಗಳು ಯುಎಇಯಲ್ಲಿನ ಭಾರತೀಯ ರಿಯಲ್ ಎಸ್ಟೇಟ್ ಖರೀದಿದಾರರ ಹೂಡಿಕೆ ಮಾದರಿಗಳ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.
ಏನು ಬದಲಾಗಿದೆ?
ಈ ಹಿಂದೆ, ಯುಎಇಯ 10 ವರ್ಷಗಳ ಗೋಲ್ಡನ್ ವೀಸಾಗೆ ಅರ್ಹತೆ ಪಡೆಯಲು, ವ್ಯಕ್ತಿಗಳು ಕನಿಷ್ಠ 2 ಮಿಲಿಯನ್ AED (ಸುಮಾರು 4.7 ಕೋಟಿ ರೂ.) ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಬೇಕಿತ್ತು.ಈ ಹೂಡಿಕೆ ಆಧಾರಿತ ಮಾದರಿಯು ಆಸ್ತಿ ಮಾರುಕಟ್ಟೆಯನ್ನು ವಿಶೇಷವಾಗಿ ದುಬೈ ಮತ್ತು ಅಬುಧಾಬಿಯಲ್ಲಿ ದೀರ್ಘಾವಧಿಯ ನಿವಾಸಕ್ಕೆ ಪ್ರಮುಖ ಪ್ರವೇಶ ಮಾರ್ಗವಾಗಿ ಇತ್ತು. ಇದು ಈಗ ಬದಲಾಗಿದೆ.
ಗೋಲ್ಡನ್ ವೀಸಾದ ಹೊಸ ನಿಯಮಗಳು
ನೀವು ನಿವಾಸವನ್ನು ಈಗ ಕೌಶಲ್ಯ ಆಧಾರಿತ ನಾಮನಿರ್ದೇಶನಗಳ ಮೂಲಕ ಪಡೆಯಬಹುದು.
ಆಸ್ತಿ ಹೂಡಿಕೆ ಅಥವಾ ವ್ಯಾಪಾರ ಪರವಾನಗಿ ಅಗತ್ಯವಿಲ್ಲ.
ಹೊಸ ಬಂಡವಾಳ ಹೂಡಿಕೆಯಿಂದ ಪ್ರತಿಭೆ ಮತ್ತು ನಾವೀನ್ಯತೆಯತ್ತ ಗಮನವನ್ನು ಬದಲಾವಣೆಯಾಗುತ್ತದೆ.
ಇದು ಮಧ್ಯಮ ಆದಾಯದ ವ್ಯಕ್ತಿಗಳಿಗೆ ಗೋಲ್ಡನ್ ವೀಸಾದ ಅರ್ಹತೆಯನ್ನು ಪಡೆಯಲು ಸಹಾಯಕವಾಗುತ್ತದೆ.
ಯಾರು ಅರ್ಹರು?
ಹೊಸ ಗೋಲ್ಡನ್ ವೀಸಾವು ಈಗ ವೃತ್ತಿಪರ ವಿಭಾಗಗಳನ್ನು ಒಳಗೊಂಡಿದೆ. ಅರ್ಹ ಅರ್ಜಿದಾರರಲ್ಲಿ ಆರೋಗ್ಯ ಕಾರ್ಯಕರ್ತರು ,ಶಿಕ್ಷಕರು ಮತ್ತು ಬೋಧನಾ ಸಿಬ್ಬಂದಿ, ಡಿಜಿಟಲ್ ಕ್ರಿಯೆಟರ್ ,ಯೂಟ್ಯೂಬರ್‌ಗಳು, ಪಾಡ್‌ಕಾಸ್ಟರ್‌ಗಳು, ಇ-ಸ್ಪೋರ್ಟ್ಸ್ ವೃತ್ತಿಪರರು, ಐಷಾರಾಮಿ ವಿಹಾರ ನೌಕೆ ಮಾಲೀಕರು ಮತ್ತು ಸಾಗರ ಕಾರ್ಯನಿರ್ವಾಹಕರು, ಉನ್ನತ ಶ್ರೇಣಿಯ ಜಾಗತಿಕ ವಿಶ್ವವಿದ್ಯಾಲಯಗಳ ಅತ್ಯುತ್ತಮ ವಿದ್ಯಾರ್ಥಿಗಳು ಮತ್ತು ಪದವೀಧರರು, 500,000 AED ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಉದ್ಯಮಿಗಳು ಅರ್ಜಿಸಲ್ಲಿಸಲು ಅರ್ಹರಾಗಿದ್ದಾರೆ.
ಭಾರತೀಯ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಪ್ರಭಾವ ಬೀರುತ್ತಾ..?
ಹೊಸ ಗೋಲ್ಡನ್ ವೀಸಾ ಈ ನೀತಿ ಬದಲಾವಣೆಯು ಯುಎಇಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿನ ಭಾರತೀಯ ಹೂಡಿಕೆದಾರರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ರಿಯಲ್ ಎಸ್ಟೇಟ್‌ದಾರು ಅಭಿಪ್ರಾಯವನ್ನುನ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ, ಈ ಬದಲಾವಣೆಯು ಎರಡು ರೀತಿಯ ಪರಿಣಾಮನ್ನು ತರಬಹುದು. ದೀರ್ಘಾವಧಿಯ ನಿವಾಸವನ್ನು ಪಡೆಯಲು ಆಸ್ತಿ ಹೂಡಿಕೆಯು ಒಂದು ಮಾರ್ಗವಾಗಿತ್ತು.ಇದರಿಂದಾಗಿ ಬಂಡವಾಳ ಸಂರಕ್ಷಣೆ ಮತ್ತು ವಲಸೆ ಪ್ರಯೋಜನಗಳನ್ನು ಬಯಸುವ ಭಾರತೀಯ ಹೂಡಿಕೆದಾರರಿಂದ ಹೆಚ್ಚಿನ ಆಸಕ್ತಿಯನ್ನು ಇದು ಹುಟ್ಟು ಹಾಕಿತ್ತು. ಆದರೆ ಇದೀಗ ವೀಸಾ ಇದೀಗ ವಿಶಾಲವಾಗಿದೆ. ನಿವಾಸದ ಉದ್ದೇಶಕ್ಕಾಗಿ ಮಾತ್ರ ಹೂಡಿಕೆ ಮಾಡುವ ತುರ್ತು ಪರಿಸ್ಥಿತಿಯು ಕಡಿಮೆಯಾಗುವಂತಹ ಸಾಧ್ಯತೆಯಿದೆ.
ಮತ್ತೋಂದು ಪರಿಣಾಮನವೆಂದರೆ ಬಾಡಿಗೆ ಇಳುವರಿ ಕಡಿಮೆಯಾಗುತ್ತದೆ. ಹೂಡಿಕೆದಾರರು ಈಗ ಸ್ಥಳವನ್ನು ಡೆವಲಪರ್ ವಿಶ್ವಾಸಾರ್ಹತೆ ಮತ್ತು ದೀರ್ಘಕಾಲೀನ ಮೌಲ್ಯದಂತಹ ಮೂಲಭೂತ ಅಂಶಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ.ಹೊಸ ವೃತ್ತಿಪರ-ಕೇಂದ್ರಿತ ಮಾನದಂಡಗಳಿಂದ ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ.
ಕಡಿಮೆ ಮತ್ತು ಮಧ್ಯಮ-ಆದಾಯದ ಆಸ್ತಿ ವಿಭಾಗಗಳಲ್ಲಿ. ಯುಎಇ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬಾಡಿಗೆ ಆದಾಯ, ಬಂಡವಾಳ ಮೆಚ್ಚುಗೆ ಅಥವಾ ಜೀವನಶೈಲಿಯ ವಲಸೆಯನ್ನು ನೋಡುತ್ತಿರುವ ಭಾರತೀಯ ಎಚ್‌ಎನ್‌ಐಗಳು ಮತ್ತು ಹೂಡಿಕೆದಾರರಿಗೆ ಇನ್ನೂ ಆಕರ್ಷಕವಾಗಬಹುದು.
ಯುಎಇ ಗೋಲ್ಡನ್ ವೀಸಾ ಕಾರ್ಯಕ್ರಮದ ಈ ಬದಲಾವಣೆಯು ಭಾರತೀಯ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ತರಯುವಂತಹ ಅವಕಾಶವಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications