ಇನ್ನು ಮುಂದೆ ಐದು ವರ್ಷದ ಅವಧಿಗೆ ಸಿಗಲಿದೆ ಯುಎಇ ಪ್ರವಾಸಿಗರ ವೀಸಾ

ಗಲ್ಫ್ ರಾಷ್ಟ್ರಗಳಿಗೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪ್ರವಾಸಿಗರ ವೀಸಾವನ್ನು ಐದು ವರ್ಷದ ಅವಧಿಗೆ ನೀಡಲು ಯುಎಇ ನಿರ್ಧರಿಸಿದೆ ಎಂದು ಪ್ರಧಾನಮಂತ್ರಿ ಶೇಖ್ ಮೊಹ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಟ್ವೀಟ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಮೂವತ್ತರಿಂದ ತೊಂಬತ್ತು ದಿನಗಳ ಅವಧಿಯ ವೀಸಾ ಮಾತ್ರ ದೊರೆಯುತ್ತಿತ್ತು.

ತೈಲ ರಫ್ತು ಮಾಡುವ ರಾಷ್ಟ್ರವಾಗಿ ಮಾತ್ರ ಗುರುತಿಸಿಕೊಂಡಿರುವ ಕಾರಣಕ್ಕೆ ಆ ಹಣೆಪಟ್ಟಿ ಕಳಚಿಕೊಂಡು, ಹೊಸ ಸಾಧ್ಯತೆ ಕಡೆಗೆ ಹೆಜ್ಜೆ ಇಡಲು ಈ ನಿರ್ಧಾರ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಆನ್ ಲೈನ್ ಮೂಲಕ ವೀಸಾಗೆ ಅರ್ಜಿ ಹಾಕಿಕೊಳ್ಳುವ ಅವಕಾಶ ನೀಡಿತ್ತು ಯುಎಇ. ಮೂರು ವರ್ಷಗಳ ಹಿಂದೆ ಕತಾರ್ ದೇಶವು ಎಂಬತ್ತು ರಾಷ್ಟ್ರಗಳ ನಾಗರಿಕರಿಗೆ ವೀಸಾ ನಿಯಮವನ್ನು ಹಿಂಪಡೆದಿದೆ.

ಇನ್ನು ಮುಂದೆ ಐದು ವರ್ಷದ ಅವಧಿಗೆ ಸಿಗಲಿದೆ ಯುಎಇ ಪ್ರವಾಸಿಗರ ವೀಸಾ

ಇತ್ತೀಚಿನ ವರ್ಷಗಳಲ್ಲಿ ಯು.ಎ.ಇಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದರಿಂದ ಮಧ್ಯಮ ಅವಧಿಯಲ್ಲಿ ಅನುಕೂಲ ಆಗಲಿದೆ ಎಂದು ಕೂಡ ಸೇರಿಸುತ್ತಾರೆ. ಆದರೆ ಈಚೆಗೆ ಅಮೆರಿಕ ದಾಳಿಯಲ್ಲಿ ಇರಾನ್ ನ ಪ್ರಮುಖ ಸೇನಾಧಿಕಾರಿ ಹತ್ಯೆಯಾದ ಮೇಲೆ ಯುಎಇ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+