ಉಬರ್ 'ಏರ್ ಟ್ಯಾಕ್ಸಿ' ಯೋಜನೆಗೆ ಹ್ಯುಂಡೈ ಸಾಥ್

ಅಮೆರಿಕಾ ಮೂಲದ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಉಬರ್ ಹಾರುವ ಕಾರು ಅಥವಾ ಏರ್ ಟ್ಯಾಕ್ಸಿ ಎಂಬ ಕನಸಿನ ಯೋಜನೆಗೆ ಖ್ಯಾತ ಕಾರು ತಯಾರಿಕಾ ಕಂಪನಿ ಹ್ಯುಂಡೈಕೈ ಜೋಡಿಸಿದೆ.

2023ರ ಹೊತ್ತಿಗೆ ಏರ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲು ಉಬರ್ ಯೋಜನೆ ಹಾಕಿಕೊಂಡಿದೆ. ನಗರಗಳಲ್ಲಿ ಹೆಚ್ಚಿರುವ ವಾಹನ ದಟ್ಟಣೆಯನ್ನು ಸರಾಗಗೊಳಿಸಲು, ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಉಬರ್ ಈ ಕನಸಿನ ಯೋಜನೆ ಕೈಗೆತ್ತಿಕೊಂಡಿದ್ದು, ಈಗಾಗಲೇ 8 ಕಂಪನಿಗಳು ಇದರ ಕೈ ಜೋಡಿಸಿವೆ. ಇದರ ಜೊತಗೆ ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹ್ಯುಂಡೈ ಕೈ ಜೋಡಿಸಿದೆ.

ಉಬರ್ 'ಏರ್ ಟ್ಯಾಕ್ಸಿ' ಯೋಜನೆಗೆ ಹ್ಯುಂಡೈ ಸಾಥ್

''2023ರ ವೇಳೆಗೆ ಉಬರ್ ಏರ್ ಟ್ಯಾಕ್ಸಿ ಅನ್ನು ಪ್ರಾರಂಭಿಸುವ ಗುರಿಯತ್ತ ಸ್ಥಿರ ಪ್ರಗತಿಯನ್ನು ಸಾಧಿಸುತ್ತಿದ್ದೇವೆ'' ಎಂದು ಎಲಿವೇಟ್ ವಿಭಾಗದ ಮುಖ್ಯಸ್ಥ ಎರಿಕ್ ಅಲಿಸನ್ ಹೇಳಿದ್ದಾರೆ. ಲಾಸ್ ವೆಗಾಸ್‌ನಲ್ಲಿ ಇತ್ತೀಚೆಗೆ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ (ಸಿಎಎಸ್) ಸಮಾರಂಭದಲ್ಲಿ ಎರಿಕ್ ಈ ವಿಚಾರವನ್ನು ತಿಳಿಸಿದರು.

ಉಬರ್ ಏರ್ ಟ್ಯಾಕ್ಸಿ ಯೋಜನೆಗೆ ಸೇರ್ಪಡೆಯಾದ ಮೊದಲ ಕಾರು ತಯಾರಕ ಕಂಪನಿ ಹ್ಯುಂಡೈ ಆಗಿದ್ದು, ಅದಕ್ಕೆ ಅನುಗುಣವಾಗಿ ವಾಹನಗಳನ್ನು ಉತ್ಪಾದಿಸುತ್ತದೆ ಮತ್ತು ನಿಯೋಜಿಸುತ್ತದೆ. ಏರ್ ಟ್ಯಾಕ್ಸಿಗಳು ಹಲವಾರು ಆಕಾರ ಮತ್ತು ಗಾತ್ರಗಳನ್ನು ಹೊಂದಿರಲಿವೆ. ಎಲೆಕ್ಟ್ರಾನಿಕ್ ಮೋಟಾರ್ ಬದಲಿಗೆ ಜೆಟ್ ಎಂಜಿನ್‌ಗಳನ್ನು ಅಳವಡಿಸಲಾಗುತ್ತದೆ ಮತ್ತು ವಿಮಾನಗಳಲ್ಲಿ ಬಳಸುವ ರೆಕ್ಕೆಗಳನ್ನು ಹೊಂದಿರುತ್ತವೆ. ಉಬರ್ ಟ್ಯಾಕ್ಸಿ ಮಾದರಿಯಲ್ಲಿ ಏರ್ ಟ್ಯಾಕ್ಸಿ ವೈಮಾನಿಕ ಸವಾರಿ ಸೇವೆಗಳನ್ನು ಒದಗಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+