Whatsapp Uber Cab: ವಾಟ್ಸಾಪ್ ಮೂಲಕವೂ ಕ್ಯಾಬ್ ಬುಕ್ ಮಾಡಬಹುದು! ಇಲ್ಲಿದೆ ಸುಲಭ ಟ್ರಿಕ್

ತಂತ್ರಜ್ಞಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀವು, ಎಲ್ಲಿಗಾದರೂ ಹೋಗಲು ಕ್ಯಾಬ್ ಬುಕ್ ಮಾಡಲು ಬಯಸಿದರೆ,ಆಯಾ ಕ್ಯಾಬ್ ಮೊಬೈಲ್ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿರುತ್ತದೆ. ಅದರ ಮೂಲಕವೇ ನೀವು, ಕ್ಯಾಬ್ ಬುಕ್ ಮಾಡಬಹುದು. ಆದರೆ, ವಾಟ್ಸಾಪ್‌ (WhatsApp) ಮೂಲಕ ಉಬರ್ ಕ್ಯಾಪ್ ಬುಕ್ ಮಾಡಬಹುದು. ಈ ಸೌಲಭ್ಯವನ್ನು ವಾಟ್ಸಾಪ್ ತಂದಿದೆ. ಹಾಗಿದ್ರೆ, ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ ಮಾಡುವುದು ಹೇಗೆ? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.

ನಿಮ್ಮ ಫೋನಿನಲ್ಲಿ ಸ್ಟೋರೇಜ್ ಅಥವಾ ಇನ್ನಿತರ ಕಾರಣಗಳಿಂದ ಹೆಚ್ಚು ಆಪ್‌ಗಳನ್ನು ಬಳಸುಸುವುದು ತುಸ ಕಷ್ಟ. ಅಂತಹ ಸಂದರ್ಭಗಳಲ್ಲಿ, ಕ್ಯಾಬ್ ಬುಕ್ ಮಾಡಲು ಪ್ರತಿ ಬಾರಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ಕಿರಿಕಿರಿ ಅನಿಸುತ್ತದೆ. ಆದರೆ, ನಿಮ್ಮ ಫೋನ್‌ನಲ್ಲಿ ಕ್ಯಾಬ್ ಸೇವೆಗಾಗಿ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡುವ ಅಗತ್ಯವಿಲ್ಲ. ಅದು ಹೇಗೆ ಎಂಬ ಟ್ರಿಕ್ ಇಲ್ಲಿದೆ. ಹೌದು, ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ ಮಾಡಬಹುದು. ಇದಕ್ಕಾಗಿ ನೀವು ವಾಟ್ಸಾಪ್‌ ಮೂಲಕ ಒಂದು ನಂಬರ್‌ಗೆ ಮೆಸೇಜ್‌ (ಸಂದೇಶ) ಕಳುಹಿಸಬೇಕು. ವಾಟ್ಸಾಪ್‌ ಮೂಲಕ ಕ್ಯಾಬ್ ಬುಕ್ (Whatsapp Uber Cab Booking) ಮಾಡುವ ಈ ಟ್ರಿಕ್ ತಿಳಿಯಲು ಮುಂದೆ ಓದಿ.

Whatsapp: ವಾಟ್ಸಾಪ್ ಮೂಲಕವೂ ಕ್ಯಾಬ್ ಬುಕ್ ಮಾಡಬಹುದು! ಹೇಗೆ ಗೊತ್ತಾ?

ವಾಟ್ಸಾಪ್ ಮೂಲಕ ಉಬರ್ ಕ್ಯಾಬ್‌ ಬುಕ್ ಮಾಡುವ ಸರಳ ವಿಧಾನ

ನೀವು ವಾಟ್ಸಾಪ್ ಮೂಲಕ ಎಲ್ಲಿ ಬೇಕಾದರೂ ಕ್ಯಾಬ್ ಬುಕ್ ಮಾಡಬಹುದು. ನೀವು ಇದಕ್ಕಾಗಿ ನಿಮ್ಮ ಫೋನಿನಲ್ಲಿ 7292000002 ನಂಬರ್‌ ಸೇವ್ ಮಾಡಬೇಕು.

ಈ ನಂಬರ್ ಸೇವ್‌ ಮಾಡಿದ ಬಳಿಕ, ನಿಮ್ಮ ಫೋನಿನಲ್ಲಿ ವಾಟ್ಸಾಪ್‌ ಅನ್ನು ಓಪನ್ ಮಾಡಿ. ಮತ್ತು ರಿಫ್ರೆಶ್ ಮಾಡಿ. ಹೊಸದಾಗಿ ಸೇವ್ ಮಾಡಿದ ನಂಬರ್‌ ನಿಮಗೆ ಇಲ್ಲಿ ಕಾಣುತ್ತದೆ. ಇದರ ನಂತರ, ಚಾಟ್ ವಿಭಾಗವನ್ನು ತೆರೆಯಿರಿ ಮತ್ತು ಚಾಟ್‌ನಲ್ಲಿ ಹಾಯ್ ಎಂದು ಮೆಸೇಜ್ ಕಳುಹಿಸಿ.

ಆಗ ಭಾಷೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳುತ್ತದೆ. ನಿಮ್ಮ ಭಾಷೆಯನ್ನು ನೀವು ಹಿಂದಿ ಅಥವಾ ಇಂಗ್ಲಿಷ್ ಅನ್ನು ಆಯ್ಕೆ ಮಾಡಬಹುದು. ಇದರ ನಂತರ ನಿಮ್ಮ ಸ್ಥಳವನ್ನು ನಮೂದಿಸಿ. ಪಿಕಪ್ ಸ್ಥಳವನ್ನು ಆಯ್ಕೆಮಾಡಿ. ಇದರ ನಂತರ ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಲಾಗುತ್ತದೆ.

ನಿಮ್ಮ ವಾಟ್ಸಾಪ್‌ನಲ್ಲಿ ಚಾಲಕರ ವಿವರಗಳು ಬರುತ್ತವೆ. ಇದು ಶೇರ್ ಪಿನ್, ಕಾಂಟಾಕ್ಟ್‌ ನಂಬರ್ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ. ಚಾಲಕನಿಗೆ ಪಿನ್ ಹೇಳುವ ಮೂಲಕ ನಿಮ್ಮ ಪ್ರಯಾಣವನ್ನು ನೀವು ಪ್ರಾರಂಭಿಸಬಹುದು.

ಈ ವಿಧಾನದ ಮೂಲಕವೂ ಬುಕ್ ಮಾಡಬಹುದು!

ನೀವು ಹಾಯ್ ಎಂಬ ಮೆಸೇಜ್ ಕಳುಹಿಸಿದ ನಂತರ, ಯಾವುದೇ ಉತ್ತರವನ್ನು ಪಡೆಯದಿದ್ದರೆ ಚಿಂತಿಸಬೇಡಿ. ಈ ಸೇವೆಯು ವಿವಿಧ ಫೋನ್‌ಗಳಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತದೆ. ನಿಮಗೆ ಲಾಗಿನ್ ಮಾಡುವ ಆಯ್ಕೆ ಇರುತ್ತದೆ. ನೀವು ಲಾಗಿನ್ ಅನ್ನು ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನಮೂದಿಸಿ. ನಿಮ್ಮ ನೋಂದಾಯಿತ ಸಂಖ್ಯೆಗೆ ಒಟಿಪಿ (OTP) ಕಳುಹಿಸಲಾಗುತ್ತದೆ. ಒಟಿಪಿ ಅನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಇದರ ನಂತರ ನೀವು ಹೊಸದಾಗಿ ಕ್ಯಾಬ್ ಬುಕ್ ಮಾಡಬಹುದು.

ಒಟ್ಟಾರೆ, ತಂತ್ರಜ್ಞಾನ ಮುಂದುವರಿದಂತೆ ನೀವು ಕುಳಿತಲ್ಲಿಯೇ ಅದರ ಲಾಭ ಪಡೆಯಬಹುದು. ಇದು ಪ್ರಯೋಜನದಂತೆಯೇ ಕೆಲವು ಅಪಾಯಗಳನ್ನು ಉಂಟು ಮಾಡಬಹುದು. ಹೀಗಾಗಿ, ನೀವು ಎಚ್ಚರಿಕೆಯಿಂದ ಈ ಆಪ್‌ಗಳನ್ನು ಬಳಸಬೇಕಾಗುತ್ತದೆ. ನೀವು ಸಹ ಒಮ್ಮೆ ವಾಟ್ಸಾಪ್ ಮೂಲಕವೂ ಉಬರ್ ಕ್ಯಾಬ್ ಬುಕ್ ಮಾಡಿ. ಇದರ ಅನುಭವದ ಬಗ್ಗೆ ನಿಮ್ಮ ಆಪ್ತರ ಬಳಿ ಹಂಚಿಕೊಳ್ಳಿ.

ವಾಟ್ಸಾಪ್​ ಪೇ ಇನ್ನುಂದೆ ಶುರು

ವಾಟ್ಸಾಪ್​ ಪೇ ಆರಂಭದಲ್ಲಿ ಸೀಮಿತ ಬಳಕೆದಾರರನ್ನು ತಲುಪಲು ಅನುಮತಿಸಲಾಗಿದೆ. ವ್ಯವಸ್ಥೆಯ ಭದ್ರತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಸರಿಯಾಗಿ ಪರೀಕ್ಷಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ನಂತರ, NPCI ಹಂತ ಹಂತವಾಗಿ WhatsApp ಬಳಕೆದಾರರ ಮಿತಿಯನ್ನು ಹೆಚ್ಚಿಸಿತು. ಈಗ WhatsApp ನ ಪ್ರತಿಯೊಬ್ಬ ಬಳಕೆದಾರರು WhatsApp Pay UPI ನ ಸಂಪೂರ್ಣ ಸೌಲಭ್ಯವನ್ನು ಪಡೆಯಹುದು.

UPI ಬಳಕೆ ಅತಿ ಹೆಚ್ಚು

UPI ಬಳಕೆ ಅತಿ ಹೆಚ್ಚು ವಾಟ್ಸಾಪ್​ನ ಇಂಟರ್ಫೇಸ್ ಈಗಾಗಲೇ ಬಳಕೆದಾರರಿಗೆ ಸುಲಭ ಸಾಧನವಾಗಿದೆ. ಜನರು ಈಗ ಯಾವುದೇ ತೊಂದರೆಯಿಲ್ಲದೆ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರ ಮಾಡಬಹುದು. ವಾಟ್ಸಾಪ್​ನ ಎಲ್ಲಾ ಬಳಕೆದಾರರು ಸುಲಭವಾಗಿ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಏಕೆಂದರೆ ಇದು UPI ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಸಂಖ್ಯೆಯನ್ನು ಮತ್ತಷ್ಟು ವೇಗವಾಗಿ ಹೆಚ್ಚಾಗುತ್ತದೆ.

ನಗದುರಹಿತ ವ್ಯವಸ್ಥೆ

ಗೂಗಲ್ ಪೇ, ಫೋನ್ ಪೇ ನಂತಹ ದೊಡ್ಡ ಕಂಪನಿಗಳಿಗೆ ವಾಟ್ಸಾಪ್​ ಪೇ ಇದೀಗ ಪೈಪೋಟಿ ನೀಡುತ್ತದೆ.ಇದರಿಂದ ಭಾರತದ ನಗದು ರಹಿತ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಾಟ್ಸಾಪ್ ಮೂಲಕ ಪಾವತಿ ಮಾಡುವುದುಇನ್ನಷ್ಟು ಸುಲಭವಾಗುತ್ತದೆ. ಇದು ಭಾರತದಲ್ಲಿ ಆನ್‌ಲೈನ್ ಪಾವತಿಗಳ ಬಳಕೆಯನ್ನು ಹೆಚ್ಚಿಸುತ್ತದೆ. ಜನರಲ್ಲಿ ನಗದು ರಹಿತ ವಹಿವಾಟು ಸಹ ಹೆಚ್ಚಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+