ಬೆಂಗಳೂರಿನ ಮಹಿಳೆಯರಿಗೆ ಸಿಹಿಸುದ್ದಿಯೊಂದನ್ನು ಉಬರ್ ನೀಡಿದೆ. ಹೌದು, ಮಹಿಳೆಯರಿಗಾಗಿ ರೈಡ್ ಹೇಲಿಂಗ್ ಮೇಜರ್ ಉಬರ್ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯಾದ "ಮೋಟೋ ವುಮೆನ್" ಅನ್ನು ಆರಂಭಿಸಿದೆ.ಇನ್ನುಂದೆ 24 ಗಂಟೆಯೂ ಸೇವೆ ಬೈಕ್ ಟ್ಯಾಕ್ಸಿ ಸೇವೆ ಸಿಗಲಿದೆ.ಇದು ಮಹಿಳಾ ಚಾಲಕರಿಗೆ ಹೊಂದಿಕೊಳ್ಳುವ ಹಾಗೂ ಹಣಗಳಿಕೆಯ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಮಹಿಳಾ ಸವಾರರಿಗೆ ಸುರಕ್ಷತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಬೈಕ್ ಟ್ಯಾಕ್ಸಿಗಳು ಭಾರತದಲ್ಲಿ ಜನಪ್ರಿಯ ನಗರ ಸಾರಿಗೆಯ ಆಯ್ಕೆಯಾಗಿ ಬೆಳೆಯುತ್ತಿದೆ. ಬೈಕ್ ಟ್ಯಾಕ್ಸಿಗಳು ಮತ್ತು ಮೂರು ಚಕ್ರ ವಾಹನಗಳು ಗ್ರಾಹಕರಿಗೆ ಹೈಪರ್ಲೋಕಲ್ ಕೊನೆಯ ಮೈಲಿ ಸಂಪರ್ಕವನ್ನು ತಿಳಿಸಲು ಸಹಾಯಬಕವಾಗಿದೆ. ಅನೇಕ ಮಹಿಳಾ ಸವಾರರಿಗೆ ಈ ಸೇವೆಯ ಬಗ್ಗೆ ಕೇಳಿದಾಗ ಅವರು ಮಹಿಳಾ ಚಾಲಕರನ್ನು ಹೊಂದಿರುವುದರಿಂದ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಮತ್ತು ಬೈಕ್ ಟ್ಯಾಕ್ಸಿಗಳನ್ನು ಅಳವಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಸೇವೆಯೂ ಮಹಿಳಾ ಪ್ರಯಾಣಿಕರನ್ನು ಪ್ರಯಾಣದ ಸಮಯದಲ್ಲಿ ಮಹಿಳಾ ಚಾಲಕರೊಂದಿಗೆ ಸಂಪರ್ಕಿಸುತ್ತದೆ. ನಿಮಗೆ ಮಹಿಳಾ ಚಾಲಕರ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡಿತ್ತದೆ. ಮಹಿಳೆಯಾರಿಗಾಗಿಯೇ ಈ ಸೇವೆಯನ್ನು ಉಬರ್ 'ಮೋಟೋ ವುಮೆನ್' ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿದೆ.

ಬೈಕ್ ಟ್ಯಾಕ್ಸಿಗಳು ಭಾರತೀಯ ನಗರಗಳಲ್ಲಿ ಬಹುಬೇಗನೆ ಹೆಚ್ಚಿನ ಬೇಡಿಕೆಗಳನ್ನು ಕಂಡಿವೆ. ಕೈಗೆಟುಕುವ ಸಾರಿಗೆ ಬಳಸಿಕೊಂಡು ತಿಂಗಳಿಗೆ ಒಂದು ಮಿಲಿಯನ್ ಬೈಕ್ ಟ್ಯಾಕ್ಸಿ ರೈಡ್‌ಗಳನ್ನು ನೀಡುತ್ತಿವೆ. ಆದರಿಂದ ಬೆಂಗಳೂರು ಬೈಕ್ ಟ್ಯಾಕ್ಸಿ ಸೇವೆಗಳು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
KPMG ವರದಿಯ ಪ್ರಕಾರ ಶೇ.65 ರಿಂದ 70 ರಷ್ಟು ಬೈಕ್ ಟ್ಯಾಕ್ಸಿ ಟ್ರಿಪ್‌ಗಳು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕದ ಅಗತ್ಯಗಳನ್ನು ತಿಳಿಸುತ್ತದೆ.ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಪೂರಕವಾಗಿ ಅವರ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
Uber ಪ್ರಸ್ತುತ ಬೆಂಗಳೂರಿನಲ್ಲಿ 300 ಚಾಲಕರನ್ನು ಹೊಂದಿರುವ ಸೇವೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ ಮತ್ತು 2025 ರ Q1 ರ ವೇಳೆಗೆ ಈ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ.
ನಾವು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿರುವಾಗ, ಸೇವೆಯನ್ನು ಶೀಘ್ರದಲ್ಲೇ ಇತರ ನಗರಗಳಿಗೆ ವಿಸ್ತರಿಸಲಾಗುವುದು. ನಮ್ಮ ಮಹಿಳಾ ಚಾಲಕ ಪಾಲುದಾರರಿಗಾಗಿ ನಾವು ಎಲ್ಲಾ ಬಳಕೆದಾರರ ಸುರಕ್ಷತೆಯನ್ನು ಸಕ್ರಿಯಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಉಬರ್‌ನ ಮೋಟೋ ವುಮನ್ ಬೆಳಿಗ್ಗೆ 7.30 ರಿಂದ ರಾತ್ರಿ 8.30 ರವರೆಗೆ ಸೇವೆ ಸಲ್ಲಿಸುತ್ತದೆ ಮತ್ತು ಉಬರ್ ಮೋಟೋವು ದಿನ 24 ಗಂಟೆಯೂ ಲಭ್ಯವಿರುತ್ತದೆ. ಮಹಿಳಾ ಡ್ರೈವಿಂಗ್ ಪಾಲುದಾರರನ್ನು ಆಯ್ಕೆ ಮಾಡಲು ಈ ವೈಶಿಷ್ಟ್ಯವು ಪುರುಷ ಪ್ರಯಾಣಿಕರನ್ನು ನಿರ್ಬಂಧಿಸುವುದಿಲ್ಲ.
Uber ಭಾರತದಲ್ಲಿ ಚಾಲಕರಿಗೆ ತನ್ನ ಪ್ಲಾಟ್‌ಫಾರ್ಮ್‌ನ ಸುರಕ್ಷತೆ ಮತ್ತು ಸುಲಭತೆಯನ್ನು ಸುಧಾರಿಸಲು ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಇದರಲ್ಲಿ ಮಹಿಳಾ ಚಾಲಕರು ಮಹಿಳಾ ಪ್ರಯಾಣಿಕರನ್ನು ಮಾತ್ರ ಆಯ್ಕೆ ಮಾಡಲು ಮತ್ತು ಮುಂಗಡ ಚಾಲಕ ಟಿಪ್ಪಿಂಗ್ ಆಯ್ಕೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. Uber ತನ್ನ ಪ್ರತಿಸ್ಪರ್ಧಿಗಳಾದ ನಮ್ಮ ಯಾತ್ರಿ ಮತ್ತು ರೆಪಿಡೋನಂತಹ ಟಿಪ್ಪಿಂಗ್ ವೈಶಿಷ್ಟ್ಯಗಳನ್ನು ಸಹ ಘೋಷಣೆ ಮಾಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications