ದೇಶದ ಖ್ಯಾತ ಸಂಸ್ಥೆಯಾದ ಅದಾನಿ ಗ್ರೂಪ್ ಈಗ ಜನರ ಬಳಿಗೆ ಇನ್ನು ಹತ್ತಿರವಾಗಲು ತಯಾರಿ ನಡೆಸಿದೆ. ಈ ಮೂಲಕ ಈ ಸಂಸ್ಥೆ ದೊಡ್ಡ ಸಾಹಸಕ್ಕೆ ಕೈಹಾಕಿದೆ. ಭಾರತದ ಪ್ರವಾಸದಲ್ಲಿದ್ದ ಉಬರ್ ಸಿಇಒ ದಾರಾ ಖೋಸ್ರೋಶಾಹಿ ಅವರೊಂದಿಗೆ ಫೆಬ್ರವರಿ 24ರಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಸಂಸ್ಥೆಯಾಗಿರುವ ಅದಾನಿ ಗ್ರೂಪ್, ಟ್ಯಾಕ್ಸಿ ಸೇವಾ ಪೂರೈಕೆದಾರ ಉಬರ್ ಜೊತೆ ಕೈ ಜೋಡಿಸಲು ಸಿದ್ಧತೆ ನಡೆಸಿದೆ.
ಗೌತಮ್ ಅದಾನಿ ದಾರಾ ಖೋಸ್ರೋಶಾಹಿ ಅವರೊಂದಿಗಿನ ಭೇಟಿಯ ಕೆಲವು ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

2022ರಲ್ಲಿ ಅದಾನಿ ಗ್ರೂಪ್ ಅದಾನಿ ಒನ್ ಸೇವೆಯನ್ನು ಆರಂಭಿಸಿತು. ಈ ಸೇವೆಗಳನ್ನು ಉಬರ್ ಜೊತೆ ಸೇರಿಸಲು ಅದಾನಿ ಗ್ರೂಪ್ ಮುಂದಾಗಿದೆ. ಅದಾನಿ ಒನ್ ಅಡಿ, ವಿಮಾನ ಟಿಕೆಟ್ ಬುಕ್ಕಿಂಗ್, ಹಾಲಿಡೇ ಪ್ಯಾಕೇಜ್‌ಗಳು, ಕ್ಯಾಬ್ ಬುಕ್ಕಿಂಗ್ಸ್ ಸೇರಿದಂತೆ ಇತರ ಸೇವೆಗಳನ್ನು ಒದಗಿಸುವ ಸೇವೆ ಇದಾಗಿದೆ.
Uber ನ ಸೇವೆಗಳನ್ನು ಅದಾನಿ ಒನ್ ಅಪ್ಲಿಕೇಶನ್ ಅಡಿಯಲ್ಲಿ ತರುವ ಯೋಜನೆ ಇದೆ. ಅದಾನಿ ಒನ್ ಅನ್ನು 2022 ರಲ್ಲಿ ಪ್ರಾರಂಭಿಸಲಾಯಿತು. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಉಬರ್ ಸಿಇಒ ದಾರಾ ಖೋಸ್ರೋಶಾಹಿ ಫೆಬ್ರವರಿ 24 ರಂದು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಎರಡು ಕಂಪನಿಗಳ ನಡುವಿನ ಪಾಲುದಾರಿಕೆ ಕುರಿತು ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.
ಅದಾನಿ ಗ್ರೂಪ್ ತನ್ನ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳನ್ನು ಉಬರ್ ಅಪ್ಲಿಕೇಶನ್‌ನಲ್ಲಿ ಪರಿಚಯಿಸಲು ಮತ್ತು ಗುಂಪಿನ ಸೂಪರ್ ಅಪ್ಲಿಕೇಶನ್ ಅದಾನಿ ಒನ್ ಅನ್ನು ಬಲಪಡಿಸಲು ಈ ಪಾಲುದಾರಿಕೆಗೆ ಪ್ರವೇಶಿಸುತ್ತಿದೆ.

ವಿಶೇಷವಾಗಿ ಭಾರತೀಯ ಚಾಲಕರ ಪ್ರಗತಿಗೆ ಅವರ ಬದ್ಧತೆ, ಭವಿಷ್ಯದಲ್ಲಿ ಉಬರ್ ಇಂಡಿಯಾ ಜೊತೆ ಪಾಲುದಾರರಾಗಲು ನಾನು ಉತ್ಸುಕನಾಗಿದ್ದೇನೆ ಎಂದು ಅಂದಾನಿ ತಿಳಿಸಿದ್ದಾರೆ.
ಅದಾನಿ ಗ್ರೂಪ್ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪ್ರವೇಶಿಸಲು ಯೋಜಿಸುತ್ತಿದೆ. ಅದಾನಿ ಗ್ರೂಪ್ ಈಗಾಗಲೇ ಬಸ್‌ಗಳು, ಕೋಚ್‌ಗಳು ಮತ್ತು ಟ್ರಕ್‌ಗಳಂತಹ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಲ್ಲಿ ಅಸ್ತಿತ್ವವನ್ನು ಹೊಂದಿದೆ.
ಅದಾನಿ ಗ್ರೂಪ್ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳನ್ನು ತಯಾರಿಸುವುದಿಲ್ಲ. ಬದಲಾಗಿ ಅದಾನಿ ಕಾರುಗಳನ್ನು ಖರೀದಿಸಿ, ಬ್ರ್ಯಾಂಡ್ ಮಾಡಿ ಉಬರ್ ನೆಟ್ ವರ್ಕ್ ಗೆ ಸೇರಿಸುತ್ತದೆ. ಅದಾನಿ ಗುಂಪು ಇತ್ತೀಚೆಗೆ 3,600 ಎಲೆಕ್ಟ್ರಿಕ್ ಬಸ್‌ಗಳಿಗೆ ಸರ್ಕಾರಿ ಟೆಂಡರ್‌ಗಳಿಗೆ ಬಿಡ್‌ಗಳನ್ನು ಸಲ್ಲಿಸಿದೆ.
ಅದಾನಿ-ಉಬರ್ ಪಾಲುದಾರಿಕೆಯು ಭಾರತದಲ್ಲಿ ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನಗಳನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ, ತಯಾರಕರು ಆರ್ಥಿಕವಾಗಿ ಬಲಶಾಲಿಯಾಗಲು ದೊಡ್ಡ ಪ್ರಮಾಣದ ವಾಣಿಜ್ಯ ಅಪ್ಲಿಕೇಶನ್‌ಗಳನ್ನು ಹುಡುಕುತ್ತಿದ್ದಾರೆ. ಎರಡು ಕಂಪನಿಗಳ ನಡುವಿನ ಈ ಪಾಲುದಾರಿಕೆಯು ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಫ್ಲೀಟ್ ಪಾಲುದಾರಿಕೆಗಳಲ್ಲಿ ಒಂದಾಗಬಹುದು.


Click it and Unblock the Notifications