ಬೆಂಗಳೂರು, ನವೆಂಬರ್ 04: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೇಮಕಾತಿ ಅಧಿಸೂಚನೆಯೊಂದನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಡಿಸೆಂಬರ್ 24 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಸಲ್ಲಿಸಬೇಕಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ನಿಯಮಗಳ ಅನ್ವಯ ವೇತನವನ್ನು ನಿಗದಿ ಮಾಡಲಾಗಿದೆ.
ಯುಐಡಿಎಐ ಹೆಚ್ಚುವರಿ ನಿರ್ದೇಶಕ ಮತ್ತು ಸೀನಿಯರ್ ಅಕೌಂಟ್ ಆಫೀಸರ್ ಮಟ್ಟದ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಸಲ್ಲಿಸಬಹುದಾಗಿದೆ ಎಂದು ನೇಮಕಾತಿ ಆದೇಶ ಹೇಳಿದೆ.

ಹೆಚ್ಚುವರಿ ನಿರ್ದೇಶಕ: ಹೆಚ್ಚುವರಿ ನಿರ್ದೇಶಕ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರು ಕಡ್ಡಾಯವಾಗಿ ಕೇಂದ್ರ ಸರ್ಕಾರಿ ನೌಕರನಾಗಿರಬೇಕು. 7ನೇ ವೇತನ ಆಯೋಗದ ನಿಯಮದಂತೆ ಮೂರು ವರ್ಷಗಳಿಂದ ಪೇ ಮ್ಯಾಟ್ರಿಕ್ಸ್ 10 ಕೆಡರ್/ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರಬೇಕು (ವೇತನ 56,100- 1,77,500 ರೂ.).
ಅಥವ ಅರ್ಜಿ ಸಲ್ಲಿಸುವವರು ಐದು ವರ್ಷದ ರೆಗ್ಯುಲರ್ ಸರ್ವೀಸ್ ವೇತನ ಶ್ರೇಣಿ ಹಂತ 9 (53,100- 1,67,800 ರೂ.)ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರಬೇಕು ಅಥವ 6 ವರ್ಷದ ಸೇವೆಯನ್ನು ವೇತನ ಶ್ರಣಿ ಹಂತ 8 (47,600- 1,51,100 ರೂ.)ರಲ್ಲಿ ಇರಬೇಕು.
ಇದಕ್ಕೆ ಪರ್ಯಾಯವಾಗಿ ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯುಗಳು) ಅಥವಾ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳಾಗಿರಬಹುದು, ಅಗತ್ಯವಿರುವ ಅನುಭವದೊಂದಿಗೆ ಸಮಾನ ಶ್ರೇಣಿಗಳಲ್ಲಿ ನಿಯಮಿತ ಹುದ್ದೆಗಳನ್ನು ಹೊಂದಿರಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ನಿಗದಿ ಪಡಿಸಿ ಕೊನೆಯ ದಿನಾಂಕದೊಗೆ 56 ವರ್ಷ ಮೀರಿರಬಾರದು.
ಆಡಳಿತ, ಕಾನೂನು, ನಿರ್ವಹಣೆ, ಸ್ಥಾಪನೆ, ಮಾನವ ಸಂಪನ್ಮೂಲ, ಹಣಕಾಸು, ಆರ್ಥಿಕತೆ, ಕಣ್ಗಾವಲು, ಯೋಜನೆ ಮತ್ತು ನೀತಿ, ಯೋಜನೆ ನಿರ್ವಹಣೆ, ಇ-ಆಡಳಿತದಲ್ಲಿ ಅನುಭವ ಹೊಂದಿರಬೇಕು. ಕಂಪ್ಯೂಟರ್‌ನಲ್ಲಿ ಕಛೇರಿಯಲ್ಲಿ ಕೆಲಸ ಮಾಡುವ ಮೂಲ ಅನುಭವ ಹೊಂದಿರಬೇಕು.
ಸೀನಿಯರ್ ಅಕೌಂಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೇಂದ್ರ ಸರ್ಕಾರಿ ನೌಕರ ಅಥವ ತತ್ಸಮಾನ ಕೆಡರ್/ ಇಲಾಖೆ ಅಥವ 7ವೇ ವೇತನ ಆಯೋಗದ ನಿಯಮದಂತೆ ವೇತನ ಶ್ರೇಣಿ 9 (53,100- 1,67,800 ರೂ.) ಹುದ್ದೆಯಲ್ಲಿರಬೇಕು ಅಥವ ಐದು ವರ್ಷದ ಸಾಮಾನ್ಯ ಸೇವೆಯನ್ನು ವೇತನ ಶ್ರೇಣಿ 8 (47,600- 1,51,100 ರೂ. ನಲ್ಲಿ) ಇರಬೇಕು.
ಇದಲ್ಲದೇ ಅಭ್ಯರ್ಥಿಗಳು ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯುಗಳು) ಅಥವಾ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳಾಗಿರಬಹುದು, ಅಗತ್ಯವಿರುವ ಅನುಭವದೊಂದಿಗೆ ಸಮಾನ ಶ್ರೇಣಿಗಳಲ್ಲಿ ನಿಯಮಿತ ಹುದ್ದೆಗಳನ್ನು ಹೊಂದಿರಬಹುದು. ಅಭ್ಯರ್ಥಿಗಳಿಗೆ ಫೈನಾನ್ಸ್, ಅಕೌಂಟ್ಸ್, ಬಜೆಟಿಂಗ್, ಕಂಪ್ಯೂಟರ್ ನಿರ್ವಹಣೆಯ ಮೂಲ ಅನುಭವ ಇರಬೇಕು.
ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಮಾಸಿಕ 67,700 ರಿಂದ 2,08,700 ರೂ. ಮತ್ತು ಸೀನಿಯರ್ ಅಕೌಂಟ್ ಆಫೀಸರ್ ಹುದ್ದೆಗೆ 56,100 ರಿಂದ 1,77,500 ರೂ. ವೇತನ ನಿಗದಿ ಮಾಡಲಾಗಿದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು. ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಲು ವಿಳಾಸ Director (HR), Unique Identification Authority of India (UIDAI), Regional Office, 6th Floor, East Block, Swarna Jayanti Complex, Near Mathruvanam,
Ameerpet, Hyderabad-500038.
ಅನುಭವ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಾರಣ ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


Click it and Unblock the Notifications