ಭಾರತದಲ್ಲಿ ಮರಣದ ನಂತರವು ಆಧಾರ್ ಕಾರ್ಡ್‌ಗಳು ಇನ್ನೂ ಸಕ್ರಿಯವಾಗಿವೆ..! ಹೌದು, ಸುಮಾರು 1.2 ಕೋಟಿ ಮೃತ ವ್ಯಕ್ತಿಗಳ ಆಧಾರ್ ಕಾರ್ಡ್‌ಗಳನ್ನು ಈಗಾಗಲೇ ರದ್ದು ಮಾಡಲಾಗಿದೆ. ಇನ್ನೂ ಸುಮಾರು ಲಕ್ಷದಷ್ಟು ಆಧಾರ್ ಕಾರ್ಡ್‌ಗಳು ಆಗಿಯೇ ಉಳಿದುಕೊಂಡಿವೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗ 12 ಅಂಕಿಗಳ ಆಧಾರ್ ಕಾರ್ಡ್ ದುರ್ಬಳಕೆಯನನ್ನು ತಡೆಯಲು ಒಂದು ಮಹತ್ವವಾದ ಕ್ರಮವನ್ನು ಕೈಗೊಂಡಿದೆ.ಈಗಾಗಲೇ ಮರಣ ಹೊಂದಿದ ವ್ಯಕ್ತಿ ಆಧಾರ್ ಕಾರ್ಡ್ ನ್ನು ಸುಮಾರು 1.2 ಕೋಟಿ ಕಾರ್ಡ್‌ಗಳನ್ನು ರದ್ದುಗೊಳಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭಾರತದ ರಿಜಿಸ್ಟ್ರಾರ್ ಜನರಲ್ ಮೂಲಕ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾಗರಿಕ ನೋಂದಣಿ ವ್ಯವಸ್ಥೆಯಿಂದ (CRS) ಸುಮಾರು 1.6 ಕೋಟಿ ಮರಣ ಹೊಂದಿರುವವರ ಮಾಹಿತಿಯನ್ನು ಕಲೆ ಹಾಕಿದೆ. ಅಧಿಕೃತ ಮಾಹಿತಿಯ ಪ್ರಕಾರ, "ಸಂಪೂರ್ಣ ಪರಿಶೀಲನೆ ಮಾಡಿದ ನಂತರ, ಸುಮಾರು 1.17 ಕೋಟಿ ಮರಣ ಹೊಂದಿರುವರ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಸಿಆರ್ಎಸ್‌ನಲ್ಲಿ ಇಲ್ಲದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ 6.7 ಲಕ್ಷ ಸಾವುಗಳ ಮಾಹಿತಿಯನ್ನು ಪಡೆದಿದ್ದು, ರದ್ದುಪಡಿಸುವ ಕೆಲಸಗಳು ನಡೆಯುತ್ತೀವೆ ಎಂದು ಮಾಹಿತಿ ತಿಳಿದುಬಂದಿದೆ.
ಕುಟುಂಬ ಸದಸ್ಯರಿಗೆ ಹೊಸ ಸೌಲಭ್ಯ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗ 24 CRS ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ 'ನನ್ನ ಆಧಾರ್ ಪೋರ್ಟಲ್‌ನಲ್ಲಿ ಕುಟುಂಬ ಸದಸ್ಯರ ಸಾವಿನ ವರದಿ' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದರ ಬಗ್ಗೆ ಮಾಹಿತಿ ನೀಡಿದ ಸಂಸ್ಥೆ, "ಕುಟುಂಬದವರು, ಅವರೇ ಖಚಿತಪಡಿಸಿಕೊಂಡು, ಆಧಾರ್ ಸಂಖ್ಯೆ ಮತ್ತು ಮರಣ ನೋಂದಣಿ ಸಂಖ್ಯೆಯನ್ನು ಮೃತ ವ್ಯಕ್ತಿಯ ಇತರ ವಿವರಗಳೊಂದಿಗೆ ಪೋರ್ಟಲ್‌ಗೆ ಮಾಹಿತಿಯನ್ನು ತಿಳಿಸಬೇಕು.
ಕುಟುಂಬದವರು ಸಲ್ಲಿಸಿದ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿದ ನಂತರ, ಮೃತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲಾಗುತ್ತದೆ ಅಥವಾ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ. ಬ್ಯಾಂಕ್‌ಗಳು ಮತ್ತು ಇತರ ಆಧಾರ್ ಸಂಬಂಧಿತ ಸಂಸ್ಥೆಗಳಿಂದ ಸಾವಿನ ದಾಖಲೆಗಳನ್ನು ಪಡೆಯುವ ಸಾಧ್ಯತೆಯನ್ನೂ UIDAI ಪರಿಶೀಲಿಸುತ್ತಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮರಣ ಹೊಂದಿರುವವರ ಆಧಾರ್ ಸಂಖ್ಯೆಗಳನ್ನು ಪತ್ತೆ ಹೆಚ್ಚಲು ರಾಜ್ಯ ಸರ್ಕಾರದಿಂದಲ್ಲೂ ಸಹಾಯವನ್ನು ಪಡೆದುಕೊಳ್ಳುತ್ತಿದೆ. ಪ್ರಾಯೋಗಿಕವಾಗಿ, ಆಧಾರ್ ಹೊಂದಿರುವ ವ್ಯಕ್ತಿಗಳು ಬದುಕಿದ್ದಾರೆಯೇ ಎಂದು ತಿಳಿಯಲು, 100 ವರ್ಷಕ್ಕಿಂತ ಮೇಲ್ಪಟ್ಟವರ ಆಧಾರ್ ಮಾಹಿತಿಯನ್ನು ರಾಜ್ಯ ಸರ್ಕಾರದೊಂದಿಗೆ ಮಾಹಿತಿಯನ್ನು ಪಡೆದುಕೊರ್ಲಳುತ್ತಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ನೀಡಿರುವ ಮಾಹಿತಿಯ ಪ್ರಕಾರ ಪರಿಶೀಲನಾ ವರದಿ ಬಂದ ನಂತರ, ಆ ಆಧಾರ್ ಸಂಖ್ಯೆಯನ್ನು ರದ್ದುಪಡಿಸುವ ಮೊದಲು ಅಗತ್ಯವಿರುವ ಪರಿಶೀಲನೆ ಮಾಡಲಾಗುತ್ತದೆ.
ಇದು ಆಧಾರ್ ಕಾರ್ಡ್‌ಗಳ ದುರ್ಬಳಕೆಯನ್ನ ತಡೆಯಲು UIDAI ತೆಗೆದುಕೊಂಡಿರುವ ದೊಡ್ಡ ನಿರ್ಧಾರ. ಇದರಿಂದ ಸಾರ್ವಜನಿಕರಿಗೆ ತಮ್ಮ ಕುಟುಂಬದ ಸದಸ್ಯರು ಮರಣಹೊಂದಿದ ನಂತರ, ಅವರ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ರದ್ದುಪಡಿಸಲು ಹೆಚ್ಚಿನ ಸಹಾಯಗವಾಹಿತ್ತದೆ.


Click it and Unblock the Notifications