ಉಜ್ಜೀವನ್‌ ಬ್ಯಾಂಕ್‌ನಲ್ಲಿ ಎಫ್‌ಡಿ ಮತ್ತು ಉಳಿತಾಯ ಖಾತೆಗಳ ಮೇಲೆ ಬಡ್ಡಿ ಪರಿಷ್ಕರಣೆ..ಹಾಗಾದರೆ ಈಗಿನ ಬಡ್ಡಿ ದರದ ಮೊತ್ತವೆಷ್ಟು..?

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಈಗ ತನ್ನ ಎಫ್‌ಡಿ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಿದೆ. ಅಂದರೆ ಇದು ಪರಿಷ್ಕರಣೆ ಮಾಡಿರುವ ಬಡ್ಡಿದರಗಳ ಠೇವಣಿ ಮೊತ್ತ, ಕೋಟಿ ರೂ.ಗಿಂತ ಕಡಿಮೆ ಇರುವವ ಠೇವಣಿಗಳದ್ದು. ಈ ಪರಿಷ್ಕೃತ ಬಡ್ಡಿ ದರಗಳು ನಿನ್ನೆ ಅಂದ್ರೆ, ಫೆಬ್ರವರಿ 21ರಿಂದ ಜಾರಿಗೆ ಬಂದಿದೆ. ಸ್ಥಿರ ಆದಾಯವನ್ನು ಬಯಸುವ ಜನರಿಗಾಗಿಯೇ ಈ ಸ್ಥಿರ ಠೇವಣಿಗಳು..ಅಂದ್ರೆ, ಎಫ್‌ಡಿ ಸುರಕ್ಷಿತ ಮತ್ತು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆಯಲ್ಲಿ ಒಂದಾಗಿದೆ ಅಂದ್ರೂ ತಪ್ಪಾಗದು.

ಎಫ್‌ಡಿ ಮತ್ತು ಉಳಿತಾಯ ಖಾತೆಗಳ ಮೇಲೆ ಬಡ್ಡಿ ಪರಿಷ್ಕರಣೆ

ಇನ್ನು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪರಿಷ್ಕರಿಸಿರುವ ಬಡ್ಡಿಯಲ್ಲಿ, ಅತ್ಯಧಿಕ ಬಡ್ಡಿ ದರ ಯಾವುದು, ಅವು ಹಿರಿಯ ನಾಗರಿಕರಿಗೆ ಹೇಗೆ ಪ್ರಯೋಜನ, ಇತ್ತೀಚಿನ ಉಜ್ಜೀವನ್ SFB FD ಬಡ್ಡಿದರಗಳು ಯಾವ್ಯಾವು ಎಂಬುದೆಲ್ಲದರ ಕುರಿತು ಮಾಹಿತಿ ತಿಳಿಯೋಣ ಬನ್ನಿ.

ಅತ್ಯಧಿಕ ಬಡ್ಡಿ ದರ

ಈ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ..ಅಂದ್ರೆ ಹಿರಿಯ ನಾಗರಿಕರಲ್ಲದೇ ಸಾಮಾನ್ಯರಿಗೆ, 18 ತಿಂಗಳ ಅವಧಿವರೆಗೆ 8.25% ಅತ್ಯಧಿಕ FD ಬಡ್ಡಿದರವನ್ನು ನೀಡುತ್ತದೆ. ಆದರೆ ಹಿರಿಯ ನಾಗರಿಕರಿಗೆ ಮಾತ್ರ ಅದೇ ಅವಧಿಗೆ 8.75% ನಷ್ಟು ಬಡ್ಡಿ ನೀಡುತ್ತದೆ. ಅಂದರೆ ಇಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಹೆಚ್ಚು. ಬಡ್ಡಿ ದರ ಪರಿಷ್ಕರಣೆಗೂ ಮುನ್ನ 12 ತಿಂಗಳ ಅವಧಿಗೆ 8.25% ಅತ್ಯಧಿಕ ಬಡ್ಡಿದರವನ್ನು ನೀಡಲಾಗುತ್ತಿತ್ತು.


ಹಿರಿಯ ನಾಗರಿಕರಿಗೆ ಹೆಚ್ಚುವರಿ ಪ್ರಯೋಜನಗಳೇನು..?

ಎಲ್ಲಾ ಅವಧಿಗಳ ಮೇಲೂ ಹಿರಿಯ ನಾಗರಿಕರು ಹೆಚ್ಚುವರಿಯಾಗಿ, 0.50% ಬಡ್ಡಿಯನ್ನು ಪಡೆಯಬಹುದು. ಇದು ಅವರ ಸ್ಥಿರ ಠೇವಣಿಗಳನ್ನು ಇನ್ನಷ್ಟು ಆಕರ್ಷಕ ಹೂಡಿಕೆ ಆಯ್ಕೆಯನ್ನಾಗಿಸುತ್ತದೆ. ಅಲ್ಲದೇ ಹಿರಿಯ ನಾಗರಿಕರಿಗೆ 18 ತಿಂಗಳ ಅವಧಿಗೆ 8.75% ಬಡ್ಡಿದರವು ಈ 0.5% ಹೆಚ್ಚುವರಿ ಬಡ್ಡಿಯನ್ನು ಒಳಗೊಂಡಿದೆ.


ಇತ್ತೀಚಿನ ಉಜ್ಜೀವನ್‌ ಬ್ಯಾಂಕ್ ಎಫ್‌ಡಿ ಬಡ್ಡಿದರಗಳು:

ಉಜ್ಜೀವನ್ ಬ್ಯಾಂಕ್ ಸುಮಾರು 7 ರಿಂದ 29 ದಿನಗಳ ಅವಧಿಗೆ 3.75% ಬಡ್ಡಿ ನೀಡುತ್ತವೆ. 30 ರಿಂದ 89 ದಿನಗಳ ಅವಧಿಗೆ 4.25% ಬಡ್ಡಿ ನೀಡಿದರೆ, 90 ರಿಂದ 180 ದಿನಗಳ ಅವಧಿಗೆ 4.75% ಬಡ್ಡಿದರಗಳನ್ನು ನೀಡುತ್ತದೆ. ಹಾಗೆಯೇ ಉಜ್ಜೀವನ್‌ ಬ್ಯಾಂಕ್ 6 ತಿಂಗಳಿಂದ 12 ತಿಂಗಳಿಗಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳಿಗೆ 7.00% ಮತ್ತು 12 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ 8.10% ಬಡ್ಡಿದರವನ್ನು ನೀಡುತ್ತದೆ. 18 ತಿಂಗಳ ಅವಧಿಗೆ 8.25% ಅತ್ಯಧಿಕ ಬಡ್ಡಿದರವನ್ನು ನೀಡಲಾಗುತ್ತದೆ.
ಹಾಗೂ18 ತಿಂಗಳ ಮೊದಲ ದಿನ ಮತ್ತು 990 ದಿನಗಳ ನಡುವಿನ ಅವಧಿಯ FDಗಳಿಗೆ, 7.75% ಬಡ್ಡಿದರ ನೀಡಲಾಗುತ್ತದೆ. 991 ದಿನಗಳಿಂದ 60 ತಿಂಗಳವರೆಗಿನ ಅವಧಿಯ FDಗಳಿಗೆ 7.20% ಬಡ್ಡಿ ದರ ನೀಡಲಾಗುತ್ತದೆ. ಹಾಗೂ 60 ತಿಂಗಳು 1 ದಿನದಿಂದ 120 ತಿಂಗಳವರೆಗಿನ ದೀರ್ಘಾವಧಿಯ ಸ್ಥಿರ ಠೇವಣಿಗಳಿಗೆ, ಉಜ್ಜೀವನ್ ಬ್ಯಾಂಕ್ 6.50% ಬಡ್ಡಿ ದರವನ್ನು ನೀಡುತ್ತದೆ.

ಉಜ್ಜೀವನ್ ಉಳಿತಾಯ ಖಾತೆ ಬಡ್ಡಿ ದರ

ಉಜ್ಜೀವನ್‌ ಬ್ಯಾಂಕಿನ ಉಳಿತಾಯ ಖಾತೆಯ ಬಡ್ಡಿದರವು, ಆ ಖಾತೆಯಲ್ಲಿರುವ ಬ್ಯಾಲೆನ್ಸ್‌fನ ಅವಲಂಬಿಸಿರುತ್ತದೆ. ಒಂದು ವೇಳೆ ಖಾತೆಯಲ್ಲಿ 1 ಲಕ್ಷ ರೂ. ವರೆಗೆ ಇದ್ದರೆ, ನೀವು ವರ್ಷಕ್ಕೆ 3.25% ಬಡ್ಡಿಯನ್ನು ಗಳಿಸುತ್ತೀರಿ. ಆದರೆ 5 ಲಕ್ಷ ರೂ. ಗಿಂತ ಕಡಿಮೆ ಇದ್ದರೆ, ಬಡ್ಡಿದರವು ವರ್ಷಕ್ಕೆ 5.00% ಕ್ಕೆ ಹೆಚ್ಚಾಗುತ್ತದೆ. 5 ಲಕ್ಷ ರೂ. ನಿಂದ 25 ಲಕ್ಷ ರೂ. ವರೆಗಿನ ಬ್ಯಾಲೆನ್ಸ್‌ಗಳಿಗೆ, ನೀವು ವರ್ಷಕ್ಕೆ 7.25% ಬಡ್ಡಿಯನ್ನು ಪಡೆಯುತ್ತೀರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+