For Quick Alerts
ALLOW NOTIFICATIONS  
For Daily Alerts

UMANG APP: ಇಪಿಎಫ್‌ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ

|

ಆಧುನಿಕ ಡಿಜಿಟಲ್ ಯುಗದಲ್ಲಿ ಮೊಬೈಲ್‌ನಲ್ಲೇ ಇಡೀ ವಿಶ್ವವನ್ನೇ ಒಂದು ಸುತ್ತು ಹಾಕಬಹುದಾಗಿದೆ. ಯಾವುದೇ ಕೆಲಸಗಳಿರಲಿ ಮನೆಯಲ್ಲೇ ಕುಳಿತು ಮಾಡಿ ಮುಗಿಸಬಹುದಾಗಿದೆ. ಅದ್ರಲ್ಲೂ ಸರ್ಕಾರಿ ಕೆಲಸಗಳಿಗೆ ಕಚೇರಿಗೆ ಹೋಗಬೇಕೆಂದಿಲ್ಲ. ಕೆಲವೊಂದು ಅಪ್ಲಿಕೇಶನ್‌ಗಳ (App) ಮೂಲಕ ಕೆಲಸಗಳು ಬಹಳ ಸುಲಭವಾಗಿ ನಡೆದುಹೋಗುತ್ತದೆ.

ಇದೇ ರೀತಿಯಲ್ಲಿ ಇಪಿಎಫ್‌ ಗ್ರಾಹಕರು ಈಗ ಮನೆಯಲ್ಲೇ ಕುಳಿತ ಇಪಿಎಫ್‌ ಸೇವೆಯನ್ನು ಪಡೆಯಬಹುದಾಗಿದೆ. ಇಪಿಎಫ್‌ಗೆ ಸಂಬಂಧಿಸಿದ 16 ಸೇವೆಗಳು ಉಮಾಂಗ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.

ಉಮಾಂಗ್ ಅಪ್ಲಿಕೇಶನ್

ಉಮಾಂಗ್ ಅಪ್ಲಿಕೇಶನ್

ಉಮಾಂಗ್ ಅಪ್ಲಿಕೇಶನ್ (Unified Mobile Application For New-Age Governance). ಈ ಅಪ್ಲಿಕೇಶನ್‌ನಲ್ಲಿ, ಹೆಲ್ತ್ ಕೇರ್, ಹಣಕಾಸು ಮತ್ತು ವಸತಿಗಳಿಗೆ ಸಂಬಂಧಿಸಿದ ಮಾಹಿತಿಗಳು ಸಿಗುತ್ತವೆ. ಇದಲ್ಲದೆ, ಪಿಎಫ್‌ಗೆ (EPF)ಸಂಬಂಧಿಸಿದ ಮಾಹಿತಿಯೂ ಇಲ್ಲಿ ಲಭ್ಯವಿರುತ್ತದೆ. ಅಷ್ಟು ಮಾತ್ರವಲ್ಲ ಸರ್ಕಾರದಿಂದ ಸಿಗುವ ಹಣಕಾಸಿನ ನೆರವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯೂ ಈ ಒಂದು ಅಪ್ಲಿಕೇಶನ್‌ನಲ್ಲಿ ಸಿಗುತ್ತದೆ.

ಇಪಿಎಫ್‌ನ ಖಾತೆ ಪರೀಕ್ಷಿಸಬಹುದು

ಇಪಿಎಫ್‌ನ ಖಾತೆ ಪರೀಕ್ಷಿಸಬಹುದು

ಪ್ರತಿ ತಿಂಗಳು ನೀವು ಕೆಲಸ ಮಾಡುವ ಕಂಪನಿ/ಕಾರ್ಖಾನೆ/ಕಚೇರಿಯಲ್ಲಿ ವೇತನದ ಒಂದು ಭಾಗವನ್ನು ಇಪಿಎಫ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ನಿಮ್ಮ ಇಪಿಎಫ್‌ ಖಾತೆಯಲ್ಲಿ ಎಷ್ಟು ಹಣ ಜಮಾವಣೆಯಾಗಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಜೊತೆಗೆ ಹೊಸ ಸೇವೆಯ ಪರಿಚಯದೊಂದಿಗೆ, ಇಪಿಎಸ್ (ನೌಕರರ ಪಿಂಚಣಿ ಯೋಜನೆ) ಸದಸ್ಯರು ಉಮಾಂಗ್ ಅಪ್ಲಿಕೇಶನ್‌ನಿಂದ ನೌಕರರ ಪಿಂಚಣಿ ಯೋಜನೆ 1995 ರ ಅಡಿಯಲ್ಲಿ ಸ್ಕೀಮ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಈ ಸೇವೆಯನ್ನು ಸೇರಿಸುವುದರಿಂದ, ಇಪಿಎಫ್ ಖಾತೆದಾರರು ತಮ್ಮ ಸದಸ್ಯತ್ವವನ್ನು ಕೊನೆಗೊಳಿಸದೆ ಇಪಿಎಸ್ ಕೊಡುಗೆಯನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

ಯಾವುದೇ ಸದಸ್ಯನು ಕನಿಷ್ಟ 10 ವರ್ಷಗಳ ಕಾಲ ನೌಕರರ ಪಿಂಚಣಿ ಯೋಜನೆ (ಇಪಿಎಸ್), 1995 ರ ಸದಸ್ಯನಾಗಿದ್ದರೆ ಮಾತ್ರ ಅವನ ಪಿಂಚಣಿ ಪಡೆಯಬಹುದು

 

ಹಿಂದಿನ ಕಂಪನಿ/ಕಚೇರಿಯ ಪಿಂಚಣಿ ಕೊಡುಗೆಯನ್ನು ಪರೀಕ್ಷಿಸಬಹುದು

ಹಿಂದಿನ ಕಂಪನಿ/ಕಚೇರಿಯ ಪಿಂಚಣಿ ಕೊಡುಗೆಯನ್ನು ಪರೀಕ್ಷಿಸಬಹುದು

ನೀವು ಯಾವುದಾದರೂ ಹೊಸ ಕಂಪನಿ/ಕಚೇರಿಯಲ್ಲಿ ಕೆಲಸವನ್ನು ಪ್ರಾರಂಭಿಸಿದಾಗ, ಹಿಂದಿನ ಕಂಪನಿಯೊಂದಿಗೆ ಪಿಂಚಣಿ ಪಡೆದ ಕೊಡುಗೆಯನ್ನು ಹೊಸ ಕಂಪನಿಯೊಂದಿಗೆ ಪಿಂಚಣಿ ಸೇವೆಯಲ್ಲಿ ಸೇರಿಸಲಾಗಿದೆಯೆ ಎಂದು ಈ ಪ್ರಮಾಣಪತ್ರವು ಖಚಿತಪಡಿಸುತ್ತದೆ. ಇದು ಪಿಂಚಣಿ ಪ್ರಯೋಜನಗಳನ್ನು ಹೆಚ್ಚಿಸುವುದಲ್ಲದೆ, ಕುಟುಂಬವು ಫಲಾನುಭವಿಯ ಸಾವಿನ ಮೇಲೆ ಪಿಂಚಣಿ ಪಡೆಯುತ್ತದೆ.

ಈ ಪ್ರಕ್ರಿಯೆಯಲ್ಲಿ UMANG ಅಪ್ಲಿಕೇಶನ್‌ನ ಪ್ರಯೋಜನವೆಂದರೆ ಅದನ್ನು ಈ ಸ್ಕೀಮ್ ಪ್ರಮಾಣಪತ್ರಕ್ಕಾಗಿ ಸುಲಭವಾಗಿ ಅನ್ವಯಿಸಬಹುದು. ಇದರಲ್ಲಿ, ಇಪಿಎಫ್‌ಒ ಕಚೇರಿಗೆ ನೀವು ಹೋಗಬೇಕಾಗಿಲ್ಲ ಅಥವಾ ಸಮಯ ವ್ಯರ್ಥವಾಗುವುದಿಲ್ಲ.

 

ಲಕ್ಷಾಂತರ ಜನರಿಗೆ ಅನುಕೂಲ

ಲಕ್ಷಾಂತರ ಜನರಿಗೆ ಅನುಕೂಲ

UMANG ಅಪ್ಲಿಕೇಶನ್‌ನ ಹೊಸ ಸೇವೆಯಿಂದ ಸುಮಾರು 5 ಕೋಟಿ ಜನರಿಗೆ ಲಾಭ ಸಿಗಲಿದೆ ಎಂದು ಇಪಿಎಫ್‌ಒ ಅಂದಾಜಿಸಿದೆ. ಉಮಾಂಗ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳ ಲಾಭ ಪಡೆಯಲು, ನೀವು ಸಕ್ರಿಯ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಮತ್ತು ಇಪಿಎಫ್‌ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಉಮಾಂಗ್ ಆ್ಯಪ್ ಭಾರತದ 13 ಭಾಷೆಗಳಲ್ಲಿ ಲಭ್ಯವಿದೆ.

Read more about: pf employee ಉದ್ಯೋಗಿ
English summary

Umang App Explained: Check Your EPF Balance, Withdrawal PF

All indian citizens can access Employees Provident Fund Organisation (EPFO) services via this app. To check all details related to your EPF account using the Umang app.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X