ಅನಧಿಕೃತ ಬೆಳೆ ಅಂತಲೇ ಒಂದಷ್ಟು ನೀತಿ ನಿರ್ಬಂಧಗಳ ಅಡಿಯಲ್ಲಿ ಬೆಳೆಯಲಾಗುವ ಬೆಳೆ ತಂಬಾಕು..ಬೆಳೆ ಬೆಳೆಯಲು ನೋಂದಾಯಿಸಿದ ರೈತರು ಬೆಳೆದ ತಂಬಾಕು ಮಾರಾಟಕ್ಕೆ ಅರ್ಹ ಎಂದು ಗುರುತಿಸಲಾಗುತ್ತದೆ. ಆದರೆ ಈ ಬಾರಿ ಕರ್ನಾಟಕ ಸರ್ಕಾರವು..ಅಂದರೆ, 2024-25ರಲ್ಲಿ ನೋಂದಾಯಿತ ಮತ್ತು ನೋಂದಾಯಿಸಿದ ಕೃಷಿಕರು ಉತ್ಪಾದಿಸಿರುವ ತಂಬಾಕು ಬೆಳೆಗೆ ಮಾರಾಟಕ್ಕ ಅನುಮತಿ ನೀಡಿದೆ. ಇದರಿಂದ ಸುಮಾರು 12 ಸಾವಿರ ರೈತರಿಗೆ ಲಾಭ ಮಾಡಿಕೊಟ್ಟಂತಾಗಿದೆ. ಮೊದಲೆಲ್ಲ ನೋಂದಾಯಿಸದ ರೈತರು ತಂಬಾಕು ಬೆಳೆದರೆ ಅದನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ ಅನಧಿಕೃತ ತಂಬಾಕು ಮಾರಾಟಕ್ಕೂ ಅನುಮತಿ ಸಿಕ್ಕಿದೆ.
ಈ ವಾರ ನಡೆದ ಗೆಜೆಟ್ ಅಧಿಸೂಚನೆ ಮೂಲಕ ತಂಬಾಕು ಮಂಡಳಿಗೆ, ವಾಣಿಜ್ಯ ಸಚಿವಾಲಯ ಈ ಬಗ್ಗೆ ತಿಳಿಸಿದೆ. ನೋಂದಾಯಿತ ರೈತರು ಉತ್ಪಾದಿಸಿರುವ ಫ್ಲೂ ಕ್ಯೂರ್ಡ್ ವರ್ಜೀನಿಯಾ ತಂಬಾಕು ಮತ್ತು ನೋಂದಾಯಿಸದ ರೈತರು ಉತ್ಪಾದಿಸಿರುವ ಅನಧಿಕೃತ ತಂಬಾಕು ಖರೀದಿಸಲು ನೋಂದಾಯಿತ ವ್ಯಾಪಾರಿಗಳು ಮತ್ತು ಡೀಲರ್‌ಗಳಿಗೆ ಹರಾಜು ವೇದಿಕೆಗಳಲ್ಲಿ ಅವಕಾಶ ನೀಡುವಂತೆ ತಿಳಿಸಿದೆ. ಆದರೆ ವ್ಯಾಪಾರಿಗಳು ಇದಕ್ಕಾಗಿ ಸರ್ಕಾರಿ ನಿಗದಿತ ಸೇವಾ ಶುಲ್ಕ ವಿಧಿಸಬೇಕಾಗಿದೆ.

ಇನ್ನು ಫೆಡರೇಷನ್ ಆಫ್ ಕರ್ನಾಟಕ ವರ್ಜೀನಿಯಾ ತಂಬಾಕು ಕೃಷಿಕರ ಸಂಘದ ಕಾರ್ಯದರ್ಶಿಯಾದ, ವಿಕ್ರಮ್ ಉರ್ಸ್ ಈ ಬಗ್ಗೆ ಮಾತನಾಡಿದ್ದಾರೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಅಂದಾಜು 12,000ಕ್ಕೂ ಹೆಚ್ಚು ಕೃಷಿಕರು ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಪ್ರಸ್ತುತ ಹಾರಜು ಪ್ರಕ್ರಿಯೆಯಲ್ಲಿ ತಂಬಾಕು ಬೆಳೆಗಾರರು ಒಂದು ಕೆ.ಜಿಗೆ ಸುಮಾರು ₹267.72 ಗಳಿಸಿದ್ದಾರೆ. ಹಿಂದಿನ ವರ್ಷ ಈ ದರ ₹256.15 ಆಗಿತ್ತು. ಇನ್ನು ಈ ವರ್ಷದವರೆಗೆ ಸುಮಾರು 60 ಮಿಲಿಯನ್ ಕಿಲೋಗ್ರಾಂ ತಂಬಾಕು ಮಾರಾಟವಾಗಿದ್ದು, ಕಳೆದ ವರ್ಷ 84 ಮಿಲಿಯನ್ ಕಿಲೋಗ್ರಾಂ ಮಾರಾಟವಾಗಿತ್ತು ಎಂದು ತಿಳಿಸಿದ್ದಾರೆ.
ಅಂದಹಾಗೆ ತಂಬಾಕು ಮಂಡಳಿಯು ಈ ಬಾರಿ 100 ಮಿಲಿಯನ್ ಗ್ರಾಂ ಬೆಳೆ ಗಾತ್ರವನ್ನು ಅನುಮೋದಿಸಿದೆ. ಮಂಡಳಿ ಪ್ರಕಾರ ಸುಮಾರು 40,136 ನೋಂದಾಯಿತ ಕೃಷಿಕರು ಅಧಿಕೃತವಾಗಿ 74.74 mkg ತಂಬಾಕು ಬೆಳೆದಿದ್ದಾರೆ. 13,457 ನೋಂದಾಯಿತ ಕೃಷಿಕರು ಅಂದಾಜು 7.32 mkg ಅತಿರಿಕ್ತವಾಗಿ ಬೆಳೆದಿದ್ದಾರೆ. 12,838 ನೋಂದಾಯಿಸದ ಕೃಷಿಕರು 11.04 mkg ಅನಧಿಕೃತವಾಗಿ ತಂಬಾಕು ಬೆಳೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಅನಧಿಕೃತ ತಂಬಾಕು ಬೆಳೆಯನ್ನು ಸೇರಿಸಿಕೊಂಡರೆ, ಕರ್ನಾಟಕದಲ್ಲಿ ಒಟ್ಟು 93.10 mkg ತಂಬಾಕು ಉತ್ಪಾದನೆಯಾಗಿರಬಹುದು ಎಂದು ಮಂಡಳಿ ಮಾಹಿತಿ ಹೇಳುತ್ತಿದೆ.
ಈ ತಂಬಾಕು ಬೆಳೆ ಒಂದು ವ್ಯಾಪಕವಾದ ವಾಣಿಜ್ಯ ಬೆಳೆಯಾಗಿದೆ. ಇದರಿಂದ ಬೀಡಿ, ಸಿಗರೇಟ್ ಹಾಗೂ ಅಗಿಯುವ ತಂಬಾಕು ಸೇರಿ ಇತರೆ ಉತ್ಪನ್ನಗಳನ್ನು ತಯಾರಿಸಬಹುದು. ಅಲ್ಲದೇ ಬಹು ಹಿಂದಿನ ಕಾಲದಿಂದ ಈ ತಂಬಾಕನ್ನು, ಮಹಿಳೆಯರು ಎಲೆ-ಅಡಿಕೆ ಜೊತೆ ಹೊಗೆಸೊಪ್ಪು, ಹೊಗೆಪುಡಿ ಎಂದು ಬಳಸುತ್ತಿದ್ದರು. ಇದು ನಮ್ಮ ದೇಶದ ನಿರ್ದಿಷ್ಟ ರಾಜ್ಯಗಳಲ್ಲಿ ಬೆಳೆಯುವ ಬೆಳೆಯಾಗಿದೆ. ಪ್ರಮುಖವಾಗಿ ಈ ಬೆಳೆಯನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಬೆಳೆಯುತ್ತಾರೆ.
ಇನ್ನು ಕರ್ನಾಟಕದಲ್ಲಿ ಬೆಳೆಯುವ ತಂಬಾಕು ಬೆಳೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಪ್ರಮುಖವಾಗಿ ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ.
ತಂಬಾಕು ಬೆಳೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ..?
ತಂಬಾಕು ಮಂಡಳಿಯಲ್ಲಿ ರೈತರು ಪ್ರತಿವರ್ಷ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಅಲ್ಲಿ ರೈತರಿಗೆ ಒಂದು ನಿರ್ದಿಷ್ಟ ಪ್ರಮಾಣದ ತಂಬಾಕು ಬೆಳೆಯರು ಅನುಮತಿ ನೀಡಲಾಗುತ್ತದೆ. ಮಂಡಳಿ ತಿಳಿಸಿದಂತೆ ನಿಗದಿತ ಗಾತ್ರದಲ್ಲಿ ತಂಬಾಕು ಬೆಳೆಯಬೇಕು. ಪ್ರಸ್ತುತ ವರ್ಷ..ಅಂದರೆ, 2024-25ರಲ್ಲಿ 100 ಮಿಲಿಯನ್ ಕೆ.ಜಿ. ತಂಬಾಕು ಬೆಳೆಗೆ ಅನುಮತಿ ನೀಡಲಾಗಿದೆ. ಇದರ ಅನುಸಾರ 40,136 ನೋಂದಾಯಿತ ರೈತರು ಒಟ್ಟಿಗೆ 74.74 ಮಿಲಿಯನ್ ಕಿಲೋಗ್ರಾಂ ತಂಬಾಕು ಬೆಳೆದಿದ್ದಾರೆ. ನೋಂದಾಯಿತ ರೈತರು ಅಧಿಕೃತವಾಗಿ ತಂಬಾಕು ಮಂಡಳಿಯ ನಿಯಂತ್ರಣದಲ್ಲಿರುವ, ಹರಾಜು ವೇದಿಕೆಗಳ ಮೂಲಕ ತಮ್ಮ ತಂಬಾಕು ಮಾರಾಟ ಮಾಡಬಹುದು.


Click it and Unblock the Notifications