ಕೇಂದ್ರ ಸರ್ಕಾರವು ರಾಷ್ಟ್ರೀಯ ನಿವೃತ್ತಿ ಯೋಜನೆ (NPS) ಅಡಿಯಲ್ಲಿ ಏಕೀಕೃತ ನಿವೃತ್ತಿ ಯೋಜನೆಯನ್ನು (UPS) ಪರಿಚಯಿಸಿದೆ. ಕೇಂದ್ರ ಸರ್ಕಾರಿ ನೌಕರರು ಜೂನ್ 2025 ಒಳಗೆ ರಾಷ್ಟ್ರೀಯ ನಿವೃತ್ತಿ ಯೋಜನೆ (NPS) ಮತ್ತು ಹೊಸ ಏಕೀಕೃತ ನಿವೃತ್ತಿ ಯೋಜನೆಗಳಲ್ಲಿ (UPS) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಆದರೆ ಇದೀಗ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸೇರಲು ಹಣಕಾಸು ಸಚಿವಾಲಯವು ಕೊನೆಯ ದಿನಾಂಕವನ್ನು ವಿಸ್ತರಣೆಯನ್ನು ಮಾಡಿದೆ.
ಹೌದು, ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸೇರಲು ಹಣಕಾಸು ಸಚಿವಾಲಯವು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಣೆಯನ್ನು ಮಾಡಿದೆ. ಒಬ್ಬ ನೌಕರ ಏಕೀಕೃತ ನಿವೃತ್ತಿ ಯೋಜನೆಗೆ ಸೇರಿದ ಬಳಿಕ, ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ.

ಹಣಕಾಸು ಸಚಿವಾಲಯ ಈ ಕುರಿತು ಜೂನ್ 23 ರಂದು ಯುಪಿಎಸ್ ಅಡಿಯಲ್ಲಿ ಪಿಂಚಣಿ ಆಯ್ಕೆಯನ್ನು ಚಲಾಯಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2025 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಹೆಚ್ಚುವರಿ ಸಮಯವನ್ನು ಕೋರಿ ಹಲವಾರು ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ ಎಂದು ಅಧೀಕೃತವಾಗಿ ಮಾಹಿತಿಯನ್ನು ತಿಳಿಸಿದೆ.
ಜನವರಿ 24, 2025 ರಂದು ಸರ್ಕಾರದಿಂದ ಅಧಿಸೂಚನೆಗೊಂಡ ಯುಪಿಎಸ್, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಒಂದು ಆಯ್ಕೆಯಾಗಿದ್ದು, ಇದು ಹಳೆಯ ಪಿಂಚಣಿ ಯೋಜನೆ (ಒಪಿಎಸ್) ನಂತಹ ಖಚಿತ ಪಿಂಚಣಿ ಆದಾಯವನ್ನು ಒದಗಿಸುತ್ತದೆ. ಈ ಯೋಜನೆ ಏಪ್ರಿಲ್ 1, 2025 ರಿಂದ ಜಾರಿಗೆ ಬಂದಿದೆ.ಯುಪಿಎಸ್ ಸೇರಲು ಕೊನೆಯ ದಿನಾಂಕ ವಿಸ್ತರಣೆ NPS ಅಡಿಯಲ್ಲಿ UPS ಅನ್ನು ಆಯ್ಕೆಯಾಗಿ ಸೂಚಿಸಲಾಗಿದೆ. ನಿಯಮಗಳ ಪ್ರಕಾರ, ಅರ್ಹ ಅಸ್ತಿತ್ವದಲ್ಲಿರುವ ಉದ್ಯೋಗಿಗಳು, ಮಾಜಿ ನಿವೃತ್ತ ಉದ್ಯೋಗಿಗಳು ಮತ್ತು ಮೃತ ಮಾಜಿ ನಿವೃತ್ತ ಉದ್ಯೋಗಿಗಳ ಕಾನೂನುಬದ್ಧವಾಗಿ ವಿವಾಹಿತ ಸಂಗಾತಿಗಳು ಈ ಯೋಜನೆಯಡಿಯಲ್ಲಿ ತಮ್ಮ ಆಯ್ಕೆಯನ್ನು ಚಲಾಯಿಸಲು ಮೂರು ತಿಂಗಳುಗಳು ಅಂದರೆ ಜೂನ್ 30, 2025 ರವರೆಗೆ ಕಾಲಾವಕಾಶ ನೀಡಲಾಯಿತು. ಈಗ, ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ಮೂರು ತಿಂಗಳು ವಿಸ್ತರಿಸಲಾಗಿದೆ.
ಕೊನೆಯ ದಿನಾಂಕವನ್ನು ವಿಸ್ತರಿಸಲು ಕಾರಣವೇನು..?
ವಿವಿಧ ಪಾಲುದಾರರಿಂದ ವಿನಂತಿಗಳನ್ನು ಸ್ವೀಕರಿಸಿದ ನಂತರ, ಭಾರತ ಸರ್ಕಾರವು ಯುಪಿಎಸ್ ಆಯ್ಕೆಯನ್ನು ಚಲಾಯಿಸಲು ಕೊನೆಯ ದಿನಾಂಕವನ್ನು ಮೂರು ತಿಂಗಳು ಅಂದರೆ ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ.
ಏಕೀಕೃತ ಪಿಂಚಣಿ ಯೋಜನೆ ಎಂದರೇನು?
ನಿವೃತ್ತಿಯ ನಂತರ ಖಚಿತವಾದ ಪಿಂಚಣಿಗಾಗಿ ಆಗಸ್ಟ್ 2024 ರಲ್ಲಿ ಏಕೀಕೃತ ಪಿಂಚಣಿ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಒಪ್ಪಿಗೆಯನ್ನು ಸೂಚಿಸಿತ್ತು. ಕೇಂದ್ರ ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ನಲ್ಲಿ ಸುಧಾರಣೆಗಳ ದೀರ್ಘಾವಧಿಯ ಬೇಡಿಕೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದು ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯಾಗಿದೆ.
UPS ಯೋಜನೆ
ಸಂರಕ್ಷಿತದ ಜೊತೆಗೆ ಖಚಿತವಾದ ಆದಾಯವನ್ನು ಬಯಸುವಂತಹ ಸರ್ಕಾರಿ ನೌಕರರಿಗೆ UPS ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯ ಮೂಲಕ ನಿವೃತ್ತಿಯ ಸಂದರ್ಭದಲ್ಲಿ ನೌಕರನಿಗೆ ತನ್ನ ಸೇವೆಯ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದಲ್ಲಿ ಶೇ. 50ರಷ್ಟು ಪಿಂಚಣಿಯಾಗಿ ಸರ್ಕಾರ ನೀಡುತ್ತದೆ.ನೌಕರನಿಗೆ ಈ ಯೋಜನೆಯಡಿಯಲ್ಲಿ ಜೀವಮಾನ ಪಿಂಚಣಿ ನೀಡಲಾಗುವುದು. ಕೆಲವೊಮ್ಮೆ ಪತ್ನಿ ಅಥವಾ ಪತಿ, ಹಾಗೂ ಅವಲಂಬಿತರಿಗೆ ಸಹ ಪಿಂಚಣಿಯ ಲಾಭವನ್ನು ಪಡೆದುಕೊಳ್ಳಬಹುದು.
NPS ಯೋಜನೆ
ಇದು ಒಂದು ಮಾರುಕಟ್ಟೆ ಆಧಾರಿತ ದೀರ್ಘಕಾಲೀನ ನಿವೃತ್ತಿ ಹೂಡಿಕೆ ಯೋಜನೆ ಆಗಿದೆ. ನಿಮ್ಮ ಹಣವನ್ನು ಷೇರುಗಳು (Equity), ಬಾಂಡ್‌ಗಳು ಮತ್ತು ಇತರೆ ಆಸ್ತಿಗಳಲ್ಲಿ ಹೂಡಿಕೆಯನ್ನು ಮಾಡಲಾಗುತ್ತದೆ.ನೌಕರರು ತಮ್ಮ ವೇತನದಲ್ಲಿ ಶೇ. 10 ಪಾವತಿಸಿದರೆ, ಸರ್ಕಾರದ ಕಡೆಯಿಂದ ಶೇ.14ರಷ್ಟು ಪಿಂಚಣಿಯನ್ನು ಪಾವತಿಸಲಾಗುತ್ತದೆ.ಇತರ ಪಿಂಚಣಿ ಯೋಜನೆಗಳಿಗಿಂತ ಹೆಚ್ಚು ವಾರ್ಷಿಕ ಆದಾಯ (8% - 10%) ಗಳಿಸುವ ಸಾಧ್ಯತೆ ಇದೆ. ಆದರೆ ಇದು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ.ಸೆಕ್ಷನ್ 80CCD(1), 80CCD(1B) ಮತ್ತು 80CCD(2) ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯ.ನೀವು ವಾರ್ಷಿಕವಾಗಿ 50,000 ವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಬಹುದು.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications