ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು 2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ವರ್ಷದ ಬಜೆಟ್ 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುತ್ತಿದೆ. ಅದರಿಂದಾಗಿ ಬಜೆಟ್ ನಿರೀಕ್ಷೆ ಹೆಚ್ಚೇ ಇದೆ. ಸರ್ಕಾರವು ಚುನಾವಣಾ ನೆಲೆಯಲ್ಲಾದರೂ ಗ್ರಾಮೀಣ ಪ್ರದೇಶದ ಬೆಳವಣಿಗೆ ಹೆಚ್ಚಿನ ಬಜೆಟ್ ಹಂಚಿಕೆ ಮಾಡಬಹುದು ಎಂಬ ನಿರೀಕ್ಷೆಗಳಿದೆ.
ಮಧ್ಯಮ ವರ್ಗದ ಮಾಸಿಕ ವೇತನ ಪಡೆಯುವ ವರ್ಗವು ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದರೆ, ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರು ಕೂಡಾ ತೆರಿಗೆ ಸಂಬಂಧಿತ ಹಲವಾರು ಬೇಡಿಕೆಗಳನ್ನು ಹೊಂದಿದ್ದಾರೆ. ಈ ಮಧ್ಯೆ ಗ್ರಾಮೀಣ ಪ್ರದೇಶದ ಜನರು ಮಾತ್ರ ತಮ್ಮ ಪ್ರದೇಶ ಬೆಳವಣಿಗೆಯ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಬೆಳವಣಿಗೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಹೆಚ್ಚಿನ ಗಮನಹರಿಸಬೇಕಾಗುತ್ತದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಗ್ರಾಮೀಣ ಪ್ರದೇಶಕ್ಕೆ ಯಾವೆಲ್ಲ ಯೋಜನೆಗಳ ಮೂಲಕ ಹೆಚ್ಚಿನ ಬಜೆಟ್ ಹಂಚಿಕೆ ಮಾಡಬೇಕೆಂಬ ನಿರೀಕ್ಷೆಯಿದೆ, ಎಂದು ತಿಳಿಯೋಣ ಮುಂದೆ ಓದಿ...

ಯಾವೆಲ್ಲ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಕ್ಕೆ ಬಜೆಟ್ ಹಂಚಿಕೆ?
ಪ್ರಮುಖವಾಗಿ ಎಂಎನ್‌ಆರ್‌ಇಜಿಎ, ಆಹಾರ ಸುರಕ್ಷೆ ಹಾಗೂ ಗ್ರಾಮೀಣ ಮೂಲಸೌಕರ್ಯ ಯೋಜನೆಗೆ, ಪಿಎಂ ಅವಾಸ್ ಯೋಜನೆ, ಪೈಪ್ ನೀರು ಮತ್ತು ಶುಚಿತ್ವ ಯೋಜನೆಗೆ ಅಧಿಕ ಬಜೆಟ್ ಹಂಚಿಕ ಮಾಡುವ ಮೂಲಕ ಸರ್ಕಾರವು ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಸಹಕಾರ ಮಾಡಬೇಕು. ಈ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಗ್ರಾಮೀಣ ಆದಾಯ, ಗ್ರಾಮೀಣ ಬೇಡಿಕೆ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವಿದೆ.
"2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಬಜೆಟ್ 2023ರ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ನಂಬಿಕೆಯಿದೆ. ಎಂಎನ್‌ಆರ್‌ಇಜಿಎ, ಪಿಎಂ ಅವಾಜ್, ಆಹಾರ ಭದ್ರತೆ, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡಬೇಕು, ಒಟ್ಟಾಗಿ ಗ್ರಾಮೀಣ ಬೆಳವಣಿಗೆಗೆ ಸರ್ಕಾರವು ಹೆಚ್ಚಿನ ಆಧ್ಯತೆ ನೀಡಬೇಕು," ಎಂದು ಪ್ರಭುದಾಸ್ ಲೀಲಾಧರ್‌ನ ಮುಖ್ಯಸ್ಥ ಅಮನೀಶ್ ಅಗರ್ವಾಲ್ ತಿಳಿಸಿದ್ದಾರೆ.


Click it and Unblock the Notifications