ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡುವುದಕ್ಕೂ ಮುನ್ನ ಹಲವಾರು ಸಾಂಪ್ರಾದಾಯಿಕ ಕಟ್ಟುನಿಟ್ಟುಗಳನ್ನು ಹೊಂದಿದೆ. ಅದರಂತೆಯೇ ಹಲ್ವಾ ಸಮಾರಂಭವನ್ನು ಕೂಡಾ ಕೇಂದ್ರ ಸರ್ಕಾರವು ನಡೆಸುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಣರಾಜ್ಯೋತ್ಸವ ದಿನದಂದೇ ಅಂದರೆ ಜನವರಿ 26ರಂದು ಬಜೆಟ್‌ನ ಹಲ್ವಾ ಸಮಾರಂಭವನ್ನು ನಡೆಸಲಿದ್ದಾರೆ. ಬಜೆಟ್‌ಗೂ ಮುನ್ನ ಪ್ರತಿ ವರ್ಷ ಮಾಡಲಾಗುವ ಸಮಾರಂಭ ಇದಾಗಿದೆ. ಸಿಹಿಯನ್ನು ಹಂಚಿ ಆ ಬಳಿಕ ಬಜೆಟ್‌ಗೆ ಸಿದ್ಧತೆ ನಡೆಸಲಾಗುತ್ತದೆ.
ಕೇಂದ್ರ ಬಜೆಟ್‌ನ ಕೊನೆಯ ಹಂತದಲ್ಲಿದ್ದೇವೆ ಎಂಬ ಸೂಚನೆಯೇ ಈ ಹಲ್ವಾ ಸಮಾರಂಭವಾಗಿದೆ. ಕಡಾಯಿಯಲ್ಲಿ ಹಲ್ವಾವನ್ನು ತಯಾರಿ ಮಾಡುವ ಮೂಲಕ ಹಲ್ವಾ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ದೆಹಲಿಯ ಮುಖ್ಯ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಸಿಹಿಯನ್ನು ಹಂಚಿಕೊಳ್ಳಲಿದ್ದಾರೆ.

ಯಾರೆಲ್ಲ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ?
ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು, ಇತರೆ ಅಧಿಕಾರಿಗಳು ಉತ್ತರ ಬ್ಲಾಕ್‌ನಲ್ಲಿ ನಡೆಯುವ ಹಲ್ವಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕಲೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣ ಕೇಂದ್ರ ಸರ್ಕಾರವು ಹಲ್ವಾ ಸಮಾರಂಭವನ್ನು ನಡೆಸಿಲ್ಲ.
ಕಳೆದ ವರ್ಷದಂತೆ ಕೇಂದ್ರ ಸರ್ಕಾರವು ಫೆಬ್ರವರಿ ಒಂದರಂದೇ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದೆ. ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರ್ವಹಣೆ ಮಾಡಲಿದ್ದಾರೆ. ಬಜೆಟ್ ಮಂಡನೆಯಾದ ಬಳಿಕ ಬಜೆಟ್ ಡಿಜಿಟಲ್ ಮಾದರಿಯಲ್ಲಿಯೂ ಆಪ್‌ನಲ್ಲಿ ಲಭ್ಯವಾಗಲಿದೆ. ನೀತಿ ಆಯೋಗ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೇಂದ್ರ ಹಣಕಾಸು ಸಚಿವೆ ಬಜೆಟ್ ಅನ್ನು ನಿರ್ವಹಣೆ ಮಾಡಲಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರವು ಕೇಂದ್ರ ಬಜೆಟ್ ಮೊಬೈಲ್ ಆಪ್ ಅನ್ನು ಆರಂಭ ಮಾಡಿದೆ. ಕೇಂದ್ರ ಬಜೆಟ್‌ನ ಪ್ರತಿಯನ್ನು ಎಂಪಿಗಳು ಮತ್ತು ಸಾಮಾನ್ಯ ಜನರು ಪಡೆಯಲು ಯಾವುದೇ ತೊಂದರೆಗೆ ಒಳಗಾಗಬಾರದು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬಜೆಟ್ ಪ್ರತಿಯನ್ನು ಆಪ್‌ನಲ್ಲಿ ನೀಡುತ್ತದೆ. ಅದು ಕೂಡಾ ಈ ವರ್ಷದ ಬಜೆಟ್ ಅತೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದೆ. ಅದು ಕೂಡಾ ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ 2024ರ ಚುನಾವಣೆಗೂ ಮುನ್ನ ನಡೆಯುವ ಬಜೆಟ್ ಇದಾಗಿದೆ.


Click it and Unblock the Notifications