ಪ್ರಸಕ್ತ 2023-24ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ (POMIS) ಠೇವಣಿ ಮಿತಿ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ಏನಿದು ತಿಳಿಯಿರಿ.
ಆದಾಯ ಯೋಜನೆಗೆ (POMIS) ಠೇವಣಿ ಮಿತಿ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ಅದರಂತೆ ಯೋಜನೆಗೆ ಠೇವಣಿ ಮಿತಿಯನ್ನು ಒಂದೇ ಖಾತೆಗೆ 4.5 ಲಕ್ಷದಿಂದ 9 ಲಕ್ಷಕ್ಕೆ ಮತ್ತು ಜಂಟಿ ಖಾತೆದಾರರಿಗೆ 9 ಲಕ್ಷದಿಂದ 15 ಲಕ್ಷಕ್ಕೆ ಪರಿಷ್ಕರಿಸಲಾಗಿದೆ.
ಮಾಸಿಕ ಆದಾಯ ಖಾಖಾ ಯೋಜನೆಗೆ ಗರಿಷ್ಠ ಠೇವಣಿ ಮಿತಿ ಏಕ ಖಾತೆಗೆ 4.5 ಲಕ್ಷ ರೂಪಾಯಿಯಿಂದ 9ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ. ಅದೇ ರೀತಿ ಜಂಟಿ ಖಾತೆಗೆ 9 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಖಾತೆ ಹೊಂದಿರುವವು ತಮ್ಮ ಜಂಟಿ ಖಾತೆಗಳಲ್ಲಿನ ಹೂಡಿಕೆಗಳಲ್ಲಿ ಸಮಾನ ಪಾಲನ್ನು ಹೊಂದಿರಬೇಕು. ವೈಯಕ್ತಿಕ ಮತ್ತು ಜಂಟಿ ಖಾತೆಗಳಿಗೆ 1,000 ರೂಪಾಯಿಗಳ ಠೇವಣಿ ಇಡಬಹುದು.

ಈ ಠೇವಣಿಗೆ ಬಡ್ಡಿ ದರ ಹೇಗಿದೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)ಯಡಿ ಮಾಡಿದ ಠೇವಣಿಗಳಿಗೆ, ಬಡ್ಡಿದರ ಪ್ರಸ್ತುತದಲ್ಲಿ ವಾರ್ಷಿಕವಾಗಿ ಶೇಕಡಾ 7.1ರಷ್ಟು ಆಗಿದೆ. ಠೇವಣಿಯ ಅವಧಿ ಮುಗಿಯುವವರೆಗೆ ಬಡ್ಡಿಯನ್ನು ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಖಾತೆದಾರರು ಉಳಿತಾಯ ಖಾತೆಗಳಿಗೆ ಬಡ್ಡಿ ಹಿಂಪಡೆಯುವಿಕೆಯನ್ನು ಸ್ವಯಂ ಕ್ರೆಡಿಟ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.
ಠೇವಣಿದಾರರು ಖಾತೆಗಳನ್ನು ತೆರೆಯುವ ದಿನಾಂಕದಿಂದ ಐದು ವರ್ಷಗಳ ಬಳಿಕ ಅಗತ್ಯವಿರುವ ಅರ್ಜಿ ನಮೂನೆ ಮತ್ತು ಪಾಸ್‌ಬುಕ್ ಸಂಬಂಧಿತ ಅಂಚೆ ಕಚೇರಿಗೆ ಸಲ್ಲಿಸಿ ಖಾತೆ ಮುಚ್ಚಬಹುದು. ಈ ಬಗ್ಗೆ ಅಂಚೇ ಕಚೇರಿಗಳಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬೇಕಿರುತ್ತದೆ.

ಒಂದು ವೇಳೆ ವ್ಯಕ್ತಿ ನಿಧನವಾದರೆ ಖಾತೆದಾರರ ಮೆಚ್ಯೂರಿಟಿಯ ಮೊತ್ತವು ನಾಮಿನಿ ಅಥವಾ ಕಾನೂನು ಪ್ರಕಾರ ಖಾತೆದಾರರ ಉತ್ತರಾಧಿಕಾರಿಗಳಿಗೆ ಮರು ಪಾವತಿಸಲಾಗುತ್ತದೆ. ಹಣ ಮರುಪಾವತಿ ನೀಡುವ ಮೊದಲು ತಿಂಗಳವರೆಗೆ ಬಡ್ಡಿಯನ್ನು ಪಾವತಿಯಾಗುತ್ತದೆ.


Click it and Unblock the Notifications