ದೇಶದ ಜನರ ಚಿತ್ತ ಮೋದಿ ಬಜೆಟ್ನತ್ತ ನೆಟ್ಟಿದೆ. ಈ ಬಾರಿ ಮೋದಿ ಯಾರಿಗೆಲ್ಲ ಸಿಹಿಸುದ್ದಿ ಕೊಡ್ತಾರೆ ಅಂತ ದೇಶದ ಜನತೆ ಕಾಯುತ್ತಿದ್ದಾರೆ. ಹೌದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ (Union Budget) ಅನ್ನು ಫೆಬ್ರವರಿ 1 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ ಎಂಟನೇ ಬಜೆಟ್ ಆಗಿದೆ. 2025ರ ಕೇಂದ್ರ ಬಜೆಟ್ ಅಧಿವೇಶನವು ಜನವರಿ 31 ರಂದು ಪ್ರಾರಂಭವಾಗಲಿದೆ. ದೇಶದ ಮೊದಲ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 11 ಗಂಟೆಗೆ ಲೋಕಸಭೆಯ ಸಭಾಂಗಣದಲ್ಲಿ ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡುವುದರೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಭಾಷಣವು ಸರ್ಕಾರದ ಮುಂದಿನ ವರ್ಷದ ದೃಷ್ಟಿಕೋನ ಮತ್ತು ಆದ್ಯತೆಗಳನ್ನು ವಿವರಿಸುತ್ತದೆ. ಇದರ ನಂತರ, ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಾಗುವುದು.
ನಿರ್ಮಲಾ ಸೀತಾರಾಮನ್ ಸತತ 8ನೇ ಬಜೆಟ್
ಕೇಂದ್ರ ಬಜೆಟ್. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು( ಫೆ.1)ರಂದು ಪ್ರಧಾನಿ ಮೋದಿ ಸರ್ಕಾರದ 3ನೇ ಅವಧಿಯ 2ನೇ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಸೀತಾರಾಮನ್ ಸತತ 8ನೇ (7 ಪೂರ್ಣಾವಧಿ, 2024ರ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್) ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ. ಇನ್ನೂ 3 ಬಜೆಟ್ ಮಂಡಿಸಿದರೆ ಒಟ್ಟು 11 ಬಜೆಟ್ ಮಂಡಿಸಿದ ಸಾರ್ವಕಾಲಿಕ ದಾಖಲೆಯನ್ನು ಅವರು ಸೃಷ್ಟಿಸಲಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ 10 ಬಾರಿ ಬಜೆಟ್ ಮಂಡಿಸಿದ್ದರು.
ಬೆಳಗ್ಗೆ 11 ಗಂಟೆಯಿಂದ ಬಜೆಟ್ ಮಂಡನೆ
ಕೇಂದ್ರ ಬಜೆಟ್ನ್ನು ಭಾರತೀಯ ಸಂಪ್ರದಾಯದಂತೆ ಭಾರತೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ ಆಯವ್ಯವನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
Feb 01, 2025, 3:20 pm IST
ಕೇಂದ್ರ ಬಜೆಟ್ 2025: ಬಜೆಟ್ ಬೆನ್ನಲ್ಲೇ ರೈಲು ಷೇರುಗಳು ಭಾರೀ ಇಳಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣವನ್ನು ಮುಗಿಸಿದ ಕೆಲವೇ ನಿಮಿಷಗಳಲ್ಲಿ ರೈಲ್ವೆ ಷೇರುಗಳು ಇಂದು ಕುಸಿತ ಕಂಡಿದ್ದೇವೆ. ವಿವಿಧ ಷೇರುಗಳು ಬಜೆಟ್ ನಂತರ ಶೇ.8ರಷ್ಟು ಕುಸಿದವು. ಈ ಬಾರಿ ರೈಲ್ವೇ ವಲಯಕ್ಕೆ ಯಾವುದೇ ಮಹತ್ವದ ಘೋಷಣೆಗಳು ಇಲ್ಲ ಇದು ರೈಲ್ವೆ ಷೇರುಗಳ ಕುಸಿತಕ್ಕೆ ಕಾರಣವಾಯಿತು ಎಂದೇ ಹೇಳಬಹುದು.
Feb 01, 2025, 1:26 pm IST
ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ನೆರವು
ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ ₹1.5 ಲಕ್ಷ ಕೋಟಿ ನೆರವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೀಡುವುದಾಗಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ಘೋಷಿಸಿದ್ದಾರೆ.
Feb 01, 2025, 1:21 pm IST
ಶಿಕ್ಷಣಕ್ಕಾಗಿ ಎಐನಲ್ಲಿ ಶ್ರೇಷ್ಠತಾ ಕೇಂದ್ರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣಕ್ಕಾಗಿ 500 ಕೋಟಿ ರೂ. ವೆಚ್ಚದಲ್ಲಿ ಎಐನಲ್ಲಿ (AI) ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದರು.
Feb 01, 2025, 12:36 pm IST
ಹಿರಿಯ ನಾಗರಿಕರಿಗೆ TDS ಮಿತಿಯಲ್ಲಿ ಏರಿಕೆ
ಹೊಸ ಆದಾಯ ತೆರಿಗೆ ಮಸೂದೆಯು ಮಧ್ಯಮ ವರ್ಗದ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಅವರು ಘೋಷಿಸಿದರು.
Feb 01, 2025, 12:34 pm IST
ಹೊಸ ತೆರಿಗೆ ಪದ್ಧತಿಯಲ್ಲಿ ಸ್ಲ್ಯಾಬ್ ದರಗಳು
4 ಲಕ್ಷದಿಂದ 8 ಲಕ್ಷದವರೆಗೆ 5%ರಷ್ಟು ತೆರಿಗೆ
8 ಲಕ್ಷದಿಂದ 11 ಲಕ್ಷದವರೆಗೆ 10%ರಷ್ಟು ತೆರಿಗೆ
12 ಲಕ್ಷದಿಂದ 15 ಲಕ್ಷದವರೆಗೆ 15%ರಷ್ಟು ತೆರಿಗೆ
15 ಲಕ್ಷದಿಂದ 20 ಲಕ್ಷದವರೆಗೆ 20%ರಷ್ಟು ತೆರಿಗೆ
20 ಲಕ್ಷದಿಂದ 24 ಲಕ್ಷದರೆಗೆ 25%ರಷ್ಟು ತೆರಿಗೆ
24 ಲಕ್ಷ ಮೇಲ್ಪಟ್ಟ ಆದಾಯಕ್ಕೆ 30%ರಷ್ಟು ತೆರಿಗೆ.
Feb 01, 2025, 12:22 pm IST
ಸಿಹಿಸುದ್ದಿ... ಸ್ಮಾರ್ಟ್ಫೋನ್ಗಳು ಇನ್ಮುಂದೆ ಅಗ್ಗ
ಮೊಬೈಲ್, ಔಷಧಿ ಮತ್ತು ಎಲೆಕ್ಟ್ರಿಕ್ ಕಾರುಗಳು ಅಗ್ಗವಾಗಲಿವೆ
ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Feb 01, 2025, 12:16 pm IST
12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ
12 ಲಕ್ಷದವರೆಗೂ ಆದಾಯ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ
Feb 01, 2025, 12:15 pm IST
ಹಿರಿಯ ನಾಯಕರಿಗೆ 1ಲಕ್ಷ ವರೆಗೆ ಟಿಡಿಎಸ್ ವಿನಾಯಿತಿ
ಹಿರಿಯ ನಾಯಕರಿಗೆ ಸಿಹಿಸುದ್ದಿ ಹಿರಿಯ ನಾಯಕರಿಗೆ 1ಲಕ್ಷ ವರೆಗೆ ಟಿಡಿಎಸ್ ವಿನಾಯಿತಿಯನ್ನು ನೀಡಲಾಗಿದೆ.
Feb 01, 2025, 12:08 pm IST
ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ
ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಗಿದೆ.ಸಾರ್ವಜನಿಕ ಬ್ಯಾಂಕ್ಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸೌಲಭ್ಯಗಳ ವಿಸ್ತರಣೆಯಾಗುತ್ತದೆ.
Feb 01, 2025, 12:02 pm IST
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ
ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಸಚಿವೆ ಸೀತಾರಾಮನ್ ತಿಳಿಸಿದ್ದಾರೆ. ಪಶ್ಚಿಮ ಕೋಸಿ ಕಾಲುವೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
Feb 01, 2025, 11:57 am IST
ಹೊಸ ಆದಾಯ ತೆರಿಗೆ ಮಸೂದೆ ಮಂಡನೆ
ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ
Feb 01, 2025, 11:54 am IST
PM ರಿಸರ್ಚ್ ಫೆಲೋಶಿಪ್ ಯೋಜನೆಯಡಿಯಲ್ಲಿ 10,000 ಫೆಲೋಶಿಪ್
PM ರಿಸರ್ಚ್ ಫೆಲೋಶಿಪ್ ಯೋಜನೆಯಡಿಯಲ್ಲಿ 10,000 ಫೆಲೋಶಿಪ್ಗಳನ್ನು ಒದಗಿಸಲಾಗುವುದು ಐಐಟಿ ಮತ್ತು ಐಐಎಸ್ಸಿಯಲ್ಲಿ ತಾಂತ್ರಿಕ ಸಂಶೋಧನೆಗಾಗಿ ಮುಂದಿನ ಐದು ವರ್ಷಗಳಲ್ಲಿ PM ರಿಸರ್ಚ್ ಫೆಲೋಶಿಪ್ ಯೋಜನೆಯಡಿ 10,000 ಫೆಲೋಶಿಪ್ಗಳನ್ನು ಒದಗಿಸಲಾಗುವುದು
Feb 01, 2025, 11:43 am IST
ಎಸ್ಸಿಎಸ್ಟಿ ಮಹಿಳೆಯರಿಗೆ ದೊಡ್ಡ ಸಿಹಿಸುದ್ದಿ
ಎಸ್ಸಿ ಮತ್ತು ಎಸ್ಟಿ ಸಮುದಾಯದ ಮಹಿಳೆಯರಿಗೆ ನಿರ್ಮಲಾ ಸೀತಾರಾಮನ್ ಸಿಹಿಸುದ್ದಿ ನೀಡಿದ್ದಾರೆ. ಐದು ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್ ನೀಡಲು ಹೊಸ ಯೋಜನೆ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ 5 ಲಕ್ಷ ಮಹಿಳೆಯರಿಗೆ ಲಾಭವಾಗಲಿದೆ.
Feb 01, 2025, 11:39 am IST
ಸರ್ಕಾರಿ ಶಾಲೆಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸಹ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಲಾಗುವುದು
Feb 01, 2025, 11:32 am IST
ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ
ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Feb 01, 2025, 11:28 am IST
ಪ್ರಧಾನ ಮಂತ್ರಿ ಧನಧಾನ್ಯ ಯೋಜನೆ
ಪ್ರಧಾನ ಮಂತ್ರಿ ಧನಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರಿಗೆ ಅನುಕೂಲವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಕೃಷಿ ಉತ್ಪಾದಕತೆ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
Feb 01, 2025, 11:25 am IST
ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ
ಭಾರತದ ಆರ್ಥಿಕತೆ ಎಲ್ಲಾ ಪ್ರಮುಖ ಆರ್ಥಿಕತೆಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಅಭಿವೃದ್ಧಿ ದಾಖಲೆಗಳು ಜಾಗತಿಕ ಗಮನ ಸೆಳೆದಿವೆ. ಈ ಅವಧಿಯಲ್ಲಿ ಭಾರತದ ಸಾಮರ್ಥ್ಯದ ಮೇಲಿನ ವಿಶ್ವಾಸ ಹೆಚ್ಚಾಗಿದೆ.
Feb 01, 2025, 11:13 am IST
ಸದನದಲ್ಲಿ ವಿರೋಧ ಪಕ್ಷ ನಾಯಕರು ಗಲಾಟೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಪ್ರಾರಂಭ ಮಾಡಿದ್ದಾರೆ. ಇತ್ತ ವಿರೋಧ ಪಕ್ಷ ನಾಯಕರು ಸದನದಲ್ಲಿ ಗಲಾಟೆ ಮಾಡುತ್ತಿದ್ದಾರೆ.
Feb 01, 2025, 11:05 am IST
ಬಜೆಟ್ ಮಂಡನೆ ಆರಂಭ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಲಿದ್ದಾರೆ. ಇದು ಅವರು ಮಂಡಿಸುತ್ತಿರುವ 8ನೇ ಬಜೆಟ್ ಆಗಿದೆ.
Feb 01, 2025, 10:56 am IST
ಸಂಸತ್ ತಲುಪಿದ ಬಜೆಟ್ ಪ್ರತಿಗಳು
ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆಗಲಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಪ್ರತಿಗಳನ್ನು ಈಗಾಗಲೇ ಸಂಸತ್ಗೆ ಕೊಡೊಯ್ಯಲಾಗಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ಬಜೆಟ್ ಮಂಡನೆ ಆಗಲಿದೆ.
Feb 01, 2025, 10:53 am IST
ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನಕ್ಕೆ ಭೇಟಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ಗೆ ಅನುಮತಿ ಪಡೆಯಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ ನಿರ್ಮಲಾ ಸೀತಾರಾಮನ್ ಜೊತೆಗೆ ಸಹಾಯಕ ಸಚಿವ ಪಂಕಜ್ ಚೌಧರಿ ಇದ್ದರು.
Feb 01, 2025, 10:41 am IST
ಕೇಂದ್ರ ಬಜೆಟ್ ಮಂಡನೆಗೆ ರಾಷ್ಟ್ರಪತಿಗಳ ಅನುಮತಿ
ಬಜೆಟ್ ಮಂಡನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮತಿ ನೀಡಿದ್ದು,ಇನ್ನು ಕೆಲವೇ ನಿಮಿಷಗಳಲ್ಲಿ ಬಜೆಟ್ ಮಂಡನೆ ಆರಂಭವಾಗುತ್ತದೆ.
Feb 01, 2025, 10:33 am IST
ಮಧುಬನಿ ಸೀರೆಯುಟ್ಟು ಬಜೆಟ್ ಮಂಡನೆಗೆ ಬಂದ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಅವರು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರ ಕೌಶಲ್ಯ ಹಾಗೂ ಬಿಹಾರದ ಮಧುಬನಿ ಕಲೆಯ ಗೌರವಾರ್ಥ ವಿಶೇಷ ಸೀರೆ ಧರಿಸಿದ್ದಾರೆ. ದುಲಾರಿ ದೇವಿ ಅವರು 2021ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ನಿರ್ಮಲಾ ಸೀತಾರಾಮನ್ ಅವರು ಮಧುಬನಿಗೆ ಭೇಟಿ ನೀಡಿದಾಗ ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು.
Feb 01, 2025, 10:19 am IST
ಕೇಂದ್ರ ಬಜೆಟ್ 2025: ಸಂಸತ್ತಿಗೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಜೆಟ್ ಮಂಡನೆಗೆ ಅನುಮತಿ ಸಿಕ್ಕಿದ್ದು, ನಿರ್ಮಲಾ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗಾಗಿ ಸಂಸತ್ತಿಗೆ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸಚಿವೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
Feb 01, 2025, 9:56 am IST
ಕೇಂದ್ರ ಬಜೆಟ್ 2025: 60 ತಾಸು ಕೆಲಸದ ಬಗ್ಗೆ ಆರ್ಥಿಕ ಸಮೀಕ್ಷೆ ವಿರೋಧ
ಹೆಚ್ಚು ತಾಸುಗಳು ಕೆಲಸ ಮಾಡಬೇಕು ಎನ್ನುವ ವಾದಗಳಿಗೆ ಆರ್ಥಿಕ ಸಮೀಕ್ಷೆ ಉತ್ತರ ನೀಡಿದೆ. ಈ ಕುರಿತು ಅಧ್ಯಯನಗಳನ್ನ ಮಾಡಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹೆಚ್ಚು ತಾಸು ಕೆಲಸವನ್ನ ಮಾಡುವುದರಿಂದ ಹೆಚ್ಚು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಹಾಗೆ ಪ್ರತೀ ವಾರ 55 ರಿಂದ 60 ತಾಸು ಕೆಲಸ ಮಾಡುವುದರಿಂದ ಇದು ನೇರವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.
Feb 01, 2025, 9:32 am IST
ಕೇಂದ್ರ ಬಜೆಟ್ 2025: ಆದಾಯ ತೆರಿಗೆಗೆ ಹೆಚ್ಚಿನ ಒತ್ತು
ಈ ಬಾರಿ ಬಜೆಟ್ನಲ್ಲಿ ಆದಾಯ ತೆರಿಗೆ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ. ಇನ್ನು ಇದರಲ್ಲಿ ಸ್ಲ್ಯಾಬ್ ಬದಲಾವಣೆ ಪ್ರಮುಖ ವಿಷಯವಾಗಿದೆ. ಇದರ ಜೊತೆಗೆ ಜಿಎಸ್ಟಿ, ವಿತ್ತೀಯ ಕೊರತೆ, ಸಾಲ, ಜಿಡಿಪಿ ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಾಗಿದೆ.
Feb 01, 2025, 8:50 am IST
ಕೇಂದ್ರ ಬಜೆಟ್ಗೂ ಮುನ್ನ ಅಡುಗೆ ಅನಿಲ ಬೆಲೆ ಇಳಿಕೆ!
ಕೇಂದ್ರ ಬಜೆಟ್ಗೂ 2025 ಆರಂಭಕ್ಕೂ ಮುನ್ನ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 7 ರೂಪಾಯಿ ಇಳಿಕೆಯಾಗಿದೆ. 1,804 ರೂಗಳಿದ್ದ ಅಡುಗಡ ಅನಿಲ 1,797 ಕ್ಕೆ ಇಳಿಕೆಯಾಗಿದೆ.
Notifications
Settings
Clear Notifications
No New Notifications
Notifications
Use the toggle to switch on notifications
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options.
Click on the “Options ”, it opens up the settings page,
Here click on the “Privacy & Security” options listed on the left hand side of the page.
Scroll down the page to the “Permission” section .
Here click on the “Settings” tab of the Notification option.
A pop up will open with all listed sites, select the option “ALLOW“, for the respective site under the status head to allow the notification.
Once the changes is done, click on the “Save Changes” option to save the changes.