ಕೇಂದ್ರ ಬಜೆಟ್ (union budget) ಮಂಡನೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರ ಹಣಕಾಸು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಮ್ಮ ಎಂಟನೇ ದಾಖಲೆಯ ಬಜೆಟ್‌ನ್ನು(budget) ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 3.0 ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿದೆ.
ಹೌದು, ಈ ಬಾರಿಯ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಡೆಯಲಿದೆ. ನೂತನ ಸಂಸತ್ ಭವನದ ಲೋಕಸಭೆಯ ಸಭಾಂಗಣದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಲಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಫೆಬ್ರವರಿ 3, 4ರಂದು ಹಾಗೂ ರಾಜ್ಯಸಭೆಗೆ 3 ದಿನಗಳ ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಫೆಬ್ರವರಿ 6ರಂದು ಚರ್ಚೆಗೆ ಉತ್ತರಿಸುವ ಸಾಧ್ಯತೆ ಇದೆ.
2 ಹಂತಗಳಲ್ಲಿ ಬಜೆಟ್ ಅಧಿವೇಶ
ಸಂಸತ್ತಿನ ಬಜೆಟ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ಜನವರಿ 31 ರಂದು ರಾಷ್ಟ್ರಪತಿ ದೌಪದಿ ಮುರ್ಮು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 13 ರವರೆಗೆ ನಡೆಯಲಿದೆ. ಅಧಿವೇಶನದ ಎರಡನೇ ಭಾಗವು ಮಾರ್ಚ್ 10 ರಂದು ಪ್ರಾರಂಭವಾಗಿ ಏಪ್ರಿಲ್ 4 ರವರೆಗೆ ಮುಂದುವರಿಯುತ್ತದೆ. ಹೀಗಾಗಿ ಜ. 31ರಿಂದ ಏ. 4ರವರೆಗೆ ಒಟ್ಟು 27 ದಿನಗಳ ಕಾಲ ಚರ್ಚೆ ನಡೆಯಲಿದೆ.
ಈ ಬಾರಿಯ ಬಜೆಟ್‌ನಲ್ಲಿ ಏನೆಲ್ಲಾ ನಿರೀಕ್ಷೆಗಳು ಇವೆ?
ಕೇಂದ್ರ ಬಜೆಟ್ ಮೇಲೆ ಎಲ್ಲಾ ವಲಯಗಳು ಭಾರೀ ನಿರೀಕ್ಷೆಗಳುನ್ನು ಇಟ್ಟುಕೊಂಡಿದ್ದೇವೆ.ಅದರಲ್ಲೂ ಸಾಮಾನ್ಯ ಜನರ ನಿರೀಕ್ಷೆಗಳು ಹೆಚ್ಚಿವೆ. ಶಿಕ್ಷಣ,ಕೈಗಾರಿಕೆ,ಕೃಷಿ, ತೆರಿಗೆ,ತಂತ್ರಜ್ಞಾನ,ಬಡತನ ವರ್ಗ ಇನ್ನೂ ಇತರೆ ವರ್ಗಗಳ ನಿರೀಕ್ಷೆಗಳು ಬಹಳಷ್ಟು ಇದೆ.
ಕೇಂದ್ರ ಬಜೆಟ್ ಎಂದರೇನು?
ಕೇಂದ್ರ ಬಜೆಟ್ ಎಂದರೆ ದೇಶ ಆಯವ್ಯಯದ ಲೆಕ್ಕಾಚಾರವಾಗಿದೆ.
ದಿನಾಂಕ, ಸಮಯ ಯಾವಾಗ?
ಬಜೆಟ್‌ನ್ನು ಹಣಕಾಸು ಸಚಿವೆ ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಭಾಷಣವು ಲೋಕಸಭೆಯಲ್ಲಿ ಬೆಳಿಗ್ಗೆ 11.00 ಗಂಟೆಗೆ ಶುರುವಾಗುತ್ತದೆ.
ಕೇಂದ್ರ ಬಜೆಟ್ ನೇರಪ್ರಸಾರ ವೀಕ್ಷಿಸುವುದು ಹೇಗೆ?
2025ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನ ಅಧಿಕೃತ ಚಾನೆಲ್‌ಗಳು, ದೂರದರ್ಶನ ಮತ್ತು ಸಂಸದ್ ಟಿವಿಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದನ್ನು ಸರ್ಕಾರದ ಅಧಿಕೃತ YouTube ಚಾನೆಲ್‌ಗಳಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ ಇದನ್ನು ಸಹ ನೀವು ವೀಕ್ಷಣೆ ಮಾಡಬಹುದು.
ನಿಮಗೆ ಬಜೆಟ್ ಪ್ರತಿ ಎಲ್ಲಿ ಸಿಗುತ್ತದೆ?
ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಅಧಿಕೃತ ವೆಬ್ ಪೋರ್ಟಲ್ www.indiabudget.gov.in ನಲ್ಲೂ ಬಜೆಟ್ ಪ್ರತಿಗಳು ಸಿಗುತ್ತವೆ. ಈ ದಾಖಲೆಗಳು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿಮಗೆ ಸಿಗುತ್ತದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬಜೆಟ್ ವಿಧಾನದಲ್ಲಿ ಆದ ಬದಲಾವಣೆಗಳು ಯಾವುವು?
2017ರಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನೊಂದಿಗೆ ವಿಲೀನ ಮಾಡಿದೆ.
ಬಜೆಟ್ ಮಂಡನೆ ದಿನಾಂಕವನ್ನು ಸಾಂಪ್ರದಾಯಿಕ ತಿಂಗಳ ಅಂತ್ಯದ ವೇಳಾಪಟ್ಟಿಯಿಂದ ಫೆಬ್ರವರಿ 1 ಕ್ಕೆ ಮುಂದೂಡಿದೆ. 2021 ರಲ್ಲಿ ಸಂಪೂರ್ಣವಾಗಿ ಡಿಜಿಟಲ್ ಸ್ವರೂಪಕ್ಕೆ ಪರಿವರ್ತನೆಯನ್ನು ಪಡೆದುಕೊಂಡಿದೆ.
ಹೀಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಜೆಟ್‌ನಲ್ಲಿ ಹಲವಾರು ಬದಲಾವಣೆಗಳು ಆಗಿವೆ.
ಈ ಬಾರಿಯ ಮೋದಿ ಸರ್ಕಾರದ ಬಜೆಟ್‌ನಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಯಾರಿಗೆ ಸಿಹಿ ಯಾರ ಪಾಲಿಗೆ ಕಹಿ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications