ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ದಾಖಲೆಯ ಬಜೆಟ್ ನ್ನು ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಕೇಂದ್ರ ಬಜೆಟ್ ಆಗಿದೆ. ಹಾಗಿದ್ರೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಭಾಷಣ ದಿನಾಂಕ ಸಮಯ ಯಾವತ್ತು ವೀಕ್ಷಣೆ ಹೇಗೆ? ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಕೇಂದ್ರ ಬಜೆಟ್ ಎಂದರೇನು?
ಕೇಂದ್ರ ಬಜೆಟ್ ಎಂದರೆ ದೇಶ ಆಯವ್ಯಯದ ಲೆಕ್ಕಾಚಾರವಾಗಿದೆ.ಹಣಕಾಸು ವರ್ಷಕ್ಕೆ ಫೆಡರಲ್ ಸರ್ಕಾರದ ಪ್ರಸ್ತಾವಿತ ಆದಾಯ ಮತ್ತು ವೆಚ್ಚಗಳು ಆಗಿವೆ. ಈ ಬಜೆಟ್ ಏಪ್ರಿಲ್ 1, 2025 ರಿಂದ ಮಾರ್ಚ್ 31, 2026 ರವರೆಗಿನ ಲೆಕ್ಕಾಚಾರ ಇರುತ್ತದೆ.

ಬಜೆಟ್‌ನಲ್ಲಿ ಸರ್ಕಾರದ ಹಣಕಾಸು ನೀತಿಗಳು, ಖರ್ಚು ಯೋಜನೆಗಳು ಮತ್ತು ಆರ್ಥಿಕ ತಂತ್ರಗಳನ್ನು ವಿವರಿಸುವ ಸಮಗ್ರ ದಾಖಲೆಯಾಗಿದೆ.
ದಿನಾಂಕ, ಸಮಯ ಯಾವಾಗ?
ಬಜೆಟ್‌ನ್ನು ಹಣಕಾಸು ಸಚಿವೆ ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಭಾಷಣವು ಲೋಕಸಭೆಯಲ್ಲಿ ಬೆಳಿಗ್ಗೆ 11.00 ಗಂಟೆಗೆ ಶುರುವಾಗುತ್ತದೆ.
ಕೇಂದ್ರ ಬಜೆಟ್ ನೇರಪ್ರಸಾರ ವೀಕ್ಷಿಸುವುದು ಹೇಗೆ?
2025ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನ ಅಧಿಕೃತ ಚಾನೆಲ್‌ಗಳು, ದೂರದರ್ಶನ ಮತ್ತು ಸಂಸದ್ ಟಿವಿಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದನ್ನು ಸರ್ಕಾರದ ಅಧಿಕೃತ YouTube ಚಾನೆಲ್‌ಗಳಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ ಇದನ್ನು ಸಹ ನೀವು ವೀಕ್ಷಣೆ ಮಾಡಬಹುದು.
ನಿಮಗೆ ಬಜೆಟ್ ಪ್ರತಿ ಎಲ್ಲಿ ಸಿಗುತ್ತದೆ?
ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಅಧಿಕೃತ ವೆಬ್ ಪೋರ್ಟಲ್ www.indiabudget.gov.in ನಲ್ಲೂ ಬಜೆಟ್ ಪ್ರತಿಗಳು ಸಿಗುತ್ತವೆ. ಈ ದಾಖಲೆಗಳು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿಮಗೆ ಸಿಗುತ್ತದೆ.
2025ರ ಬಜೆಟ್ ತಯಾರಿ ಆರಂಭವಾಗಿದ್ದು ಯಾವಾಗ?
ಬಜೆಟ್ ತಯಾರಿಯನ್ನು ಹಣಕಾಸು ಸಚಿವಾಲಯ ಅಕ್ಟೋಬರ್ 2024 ರಲ್ಲಿ ಬಜೆಟ್ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿತು. ಇನ್ನೂ ಮುಂಬರುವ ಹಣಕಾಸು ವರ್ಷಕ್ಕೆ ಹಣಕಾಸಿನ ಅಂದಾಜುಗಳು ಮತ್ತು ಅವಶ್ಯಕತೆಗಳನ್ನು ಅಂತಿಮಗೊಳಿಸಲು ವಿವಿಧ ಸಚಿವಾಲಯಗಳೊಂದಿಗೆ ಸಮಾಲೋಚನೆ ಹಾಗೂ ಚರ್ಚೆಗಳನ್ನು ಸಹ ನಡೆಸಲಾಗುತ್ತಿತ್ತು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬಜೆಟ್ ವಿಧಾನದಲ್ಲಿ ಆದ ಬದಲಾವಣೆಗಳು ಯಾವುವು?
2014 ರಿಂದ, ಮೋದಿ ಸರ್ಕಾರವು ಕೇಂದ್ರ ಬಜೆಟ್ ಮಂಡನೆ ಪ್ರಕ್ರಿಯೆಯಲ್ಲಿ ಹಲವಾರು ಸುಧಾರಣೆಗಳು ಬದಲಾವಣೆಗಳನ್ನು ಒಳಗೊಂಡಿವೆ ಅವುಗಳು ಯಾವುವು ಅಂದರೆ
2017ರಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನೊಂದಿಗೆ ವಿಲೀನ ಮಾಡಿದೆ.
ಬಜೆಟ್ ಮಂಡನೆ ದಿನಾಂಕವನ್ನು ಸಾಂಪ್ರದಾಯಿಕ ತಿಂಗಳ ಅಂತ್ಯದ ವೇಳಾಪಟ್ಟಿಯಿಂದ ಫೆಬ್ರವರಿ 1 ಕ್ಕೆ ಮುಂದೂಡುವುದು ಸಹ ಬದಲಾವಣೆಯಾಗಿದೆ.
2021 ರಲ್ಲಿ ಸಂಪೂರ್ಣವಾಗಿ ಡಿಜಿಟಲ್ ಸ್ವರೂಪಕ್ಕೆ ಪರಿವರ್ತನೆಯನ್ನು ಪಡೆದುಕೊಂಡಿದೆ.
ಹೀಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಜೆಟ್‌ನಲ್ಲಿ ಹಲವಾರು ಬದಲಾವಣೆಗಳು ಆಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಕೇಂದ್ರ ಬಜೆಟ್ ಆಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಎಂಟನೇ ಕೇಂದ್ರ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್ ಮಂಡನೆಯ ಮೇಲೆ ಹಲವಾರು ನಿರೀಕ್ಷೆಗಳು ಹಲವಾರು ವಲಯಗಳಿಂದ ಹರಿದು ಬಂದಿದ್ದ, ಮೋದಿ ಸರ್ಕಾರ ಯಾವುದಕ್ಕೆ ಒಲವು ತೋರಿಸುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.
ಬಹಿ ಖಾತಾ ಎಂದರೇನು?
ಸ್ವಾತಂತ್ರ್ಯ ಬಂದ ನಂತರ ಭಾರತೀಯ ಹಣಕಾಸು ಸಚಿವರು ಬಜೆಟ್ ಮಂಡನೆಗೆ ಅದರ ಪ್ರತಿಗಳನ್ನು ಪ್ರತಿವರ್ಷವೂ ಸಂಸತ್ತಿಗೆ ಬ್ರೀಫ್ಕೇಸ್ ಕೊಂಡೊಯ್ಯುವ ಸಂಪ್ರದಾಯವಿತ್ತು. ಇದನ್ನು ಬಹುತೇಕ ಹಲವಾರು ವರ್ಷಗಳು ಎಲ್ಲ ಹಣಕಾಸು ಸಚಿವರು ಪಾಲಿಸಿದ್ದರು. ಆದರೆ 2019ರಲ್ಲಿ ಸರ್ಕಾರ 'ಬಹಿ ಖಾತಾ'ವನ್ನು ಪರಿಚಯಿಸುವ ಮೂಲಕ ಈ ಸಂಪ್ರದಾಯು ಗಮನಾರ್ಹವಾಗಿ ಬದಲಾಯಿತು. ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಹಲವಾರು ವರ್ಷಗಳ ಸಂಪ್ರದಾಯವನ್ನು ಕಳೆದ ವರ್ಷ ಮುರಿದಿದ್ದರು. ಹಣಕಾಸು ಸಚಿವೆ ಸೀತಾರಾಮನ್ ಅವರು 2019ರಲ್ಲಿ ಬಜೆಟ್ ಪತ್ರವನ್ನು ಹೊತ್ತ ಬಟ್ಟೆಯ ಲೆಡ್ಜರ್ ಅಥವಾ "ಬಹಿ ಖಾತಾ" ಕೊಂಡೊಯ್ಯಲು ನಿರ್ಧರಿಸಿದರು. ಈ ಮೂಲಕ ಹಲವು ವರ್ಷಗಳ ಬ್ರಿಟೀಷ್ ಸಂಪ್ರದಾಯವನ್ನು ಕೈಬಿಟ್ಟು ಈ ಸಂಪ್ರದಾಯಕ್ಕೆ ಭಾರತೀಯ ಸ್ಪರ್ಶ ನೀಡಿದರು.


Click it and Unblock the Notifications