2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ (Union Budget 2026-27) ಇನ್ನೇನು 3 ದಿನಗಳು ಬಾಕಿ ಉಳಿದಿದೆ. ಪ್ರತೀ ವರ್ಷ ಬಜೆಟ್ ಮಂಡನೆಗೂ ಮುನ್ನ ಜನಸಾಮಾನ್ಯರಲ್ಲಿ ಸಾಮಾನ್ಯವಾಗಿ ಪ್ರಶ್ನೆಗಳು ಹುಟ್ಟೋದು ಸಾಮಾನ್ಯ. ಅಲ್ಲದೇ ಹೂಡಿಕೆದಾರರು (Investors), ಸಾರ್ವಜನಿಕರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಇದೀಗ ರೈಲ್ವೇ ಇಲಾಖೆ (Indian Railways) ಸಂಬಂಧಪಟ್ಟಂತೆ ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ಘೋಷಣೆಯಾಗುತ್ತಾ?
2026ರ ಬಜೆಟ್ ಸಮೀಪಿಸುತ್ತಿದ್ದಂತೆ, ಹಿರಿಯ ನಾಗರಿಕರಿಗೆ (Senior Citizens) ರೈಲ್ವೆ ಪ್ರಯಾಣ ರಿಯಾಯಿತಿ (Railway Ticket Discount) ಮತ್ತೆ ಘೋಷಣೆ ಮಾಡುತ್ತಾರಾ ಎಂಬ ನಿರೀಕ್ಷೆ ಹುಟ್ಟಿದೆ. ಕೋವಿಡ್-19 ಕಾರಣದಿಂದ 2020ರ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ಈ ರಿಯಾಯಿತಿ ಸೌಲಭ್ಯವನ್ನು, ಭಾರತೀಯ ರೈಲ್ವೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದೆ. ಬಜೆಟ್‌ಗೂ ಮುನ್ನ ಹಣಕಾಸು ಮತ್ತು ರೈಲ್ವೆ ಸಚಿವಾಲಯಗಳ ನಡುವೆ ಚರ್ಚೆಗಳು ನಡೆಯುತ್ತಿದ್ದು, ಅನುಮೋದನೆ ದೊರೆತರೆ 60 ವರ್ಷ ಮೇಲ್ಪಟ್ಟ ಪುರುಷರು ಹಾಗೂ 58 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತೆ ರಿಯಾಯಿತಿ ದರದಲ್ಲಿ ರೈಲ್ವೇ ಟಿಕೆಟ್ ಪಡೆಯಬಹುದು ಎನ್ನಲಾಗಿದೆ. ಈ ಕುರಿತು ಮಹತ್ವದ ಘೋಷಣೆ ಬಜೆಟ್‌ನಲ್ಲಾಗಬಹುದು ಎನ್ನಲಾಗಿದೆ.
ದಶಕಗಳಿಂದಲೂ ರಿಯಾಯಿತಿ ನೀಡುತ್ತಾ ಬಂದಿರುವ ರೈಲ್ವೇ ಇಲಾಖೆ
ದಶಕಗಳಿಂದಲೂ ಭಾರತೀಯ ರೈಲ್ವೆ ಹಿರಿಯ ನಾಗರಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆ, ಟಿಕೆಟ್ ದರದಲ್ಲಿ ರಿಯಾಯಿತಿ ನೀಡುತ್ತಿತ್ತು. ಅದರಲ್ಲಿ ಪುರುಷರಿಗೆ ಶೇ. 40%, ಮಹಿಳೆಯರಿಗೆ ಶೇ. 50% ನೀಡಲಾಗುತ್ತಿತ್ತು. ಇದು ಸ್ಲೀಪರ್, ಥರ್ಡ್ ಎಸಿ, ಸೆಕೆಂಡ್ ಎಸಿ, ಫಸ್ಟ್ ಎಸಿ ಸೇರಿದಂತೆ ಬಹುತೇಕ ಎಲ್ಲ ರೈಲುಗಳಲ್ಲೂ ನೀಡಲಾಗುತ್ತಿತ್ತು. ಆದರೆ ಈ ರಿಯಾಯಿತಿ ಪಡೆಯಬೇಕೆಂದರೆ ಟಿಕೆಟ್ ಬುಕಿಂಗ್‌ಗೆ ವಯಸ್ಸು ಅಗತ್ಯವಿತ್ತು. ಯಾವುದೇ ವಿಶೇಷ ಕಾರ್ಡ್ ಅಥವಾ ಬೇರೆ ಯಾವುದೇ ಮಾಹಿತಿ ಬೇಕಾಗಿರಲಿಲ್ಲ. ಈ ಸೌಲಭ್ಯ ಐಆರ್‌ಸಿಟಿಸಿ ಆನ್‌ಲೈನ್ ಮತ್ತು ರೈಲ್ವೆ ಕೌಂಟರ್‌ಗಳಲ್ಲಿ ದೊರೆಯುತ್ತಿತ್ತು.
2020ರಲ್ಲಿ ರದ್ದಾದ ಸೇವೆ!
2020ರ ಮಾರ್ಚ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಈ ಸೇವೆಯನ್ನು ರದ್ದುಪಡಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯಿತು ಮತ್ತು ಆ ಹಿನ್ನೆಲ ರೈಲ್ವೆಗೆ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಯಿತು. ಈ ಅವಧಿಯಲ್ಲಿ, ಹಿರಿಯ ನಾಗರಿಕರ ರಿಯಾಯಿತಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.
ಆದ್ದರಿಂದ ಇದೀಗ ರಿಯಾಯಿತಿ ಸೇವೆ ಕುರಿತು ಬಜೆಟ್ ಪೂರ್ವ ಸಭೆಗಳಲ್ಲಿ ಚರ್ಚೆಯಾಗಿದ್ದು, ಸರ್ಕಾರ ಅದನ್ನು ಮತ್ತೆ ಜಾರಿಗೆ ತರಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಪ್ರಸ್ತಾವನೆ ಅನುಮೋದನೆಗೊಂಡರೆ, ಹಿರಿಯ ನಾಗರಿಕರಿಗೆ ಪ್ರಯಾಣ ವೆಚ್ಚದಲ್ಲಿ ಗಣನೀಯ ಇಳಿಕೆ ಸಿಗಲಿದೆ. ಮುಂದಿನ ಆರ್ಥಿಕ ವರ್ಷದ ಕೇಂದ್ರ ಬಜೆಟ್‌ನಲ್ಲಿ ಇದರ ಅಧಿಕೃತ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರ ಒಂದು ವೇಳೆ ಈ ಸೇವೆಯನ್ನು ಜಾರಿಗೆ ತಂದರೆ ವೃದ್ಧ ಪ್ರಯಾಣಿಕರಿಗೆ ಭಾರೀ ಪ್ರಯೋಜನ ನೀಡಲಿದೆ ಅಲ್ಲದೇ ರೈಲ್ವೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಿದೆ. ಅದರಲ್ಲೂ ವಿಶೇಷವಾಗಿ ದೂರ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಆರ್ಥಿಕವಾಗಿ ಬೆಂಬಲ ನೀಡಲಿದೆ.


Click it and Unblock the Notifications