ಭಾರತದ ಆರ್ಥಿಕ ಪ್ರಗತಿಗೆ 2026ರ ಕೇಂದ್ರ ಬಜೆಟ್ (Union Budget 2026) ಬಹುಮುಖ್ಯ ಪಾತ್ರವಹಿಸುತ್ತದೆ. ರಾಜಕೀಯ ಸ್ಥಿರತೆ, ಬಲವಾದ ಆರ್ಥಿಕ ಸ್ಥಿತಿಗತಿ ಹಾಗೂ ಪ್ರಬಲ ದೇಶೀಯ ಬೇಡಿಕೆಯ ಕಾರಣ, ಸರ್ಕಾರ ಏನೆಲ್ಲಾ ನಿರ್ಧಾರ ಕೈಗೊಳ್ಳುತ್ತೆ ಎಂಬುದನ್ನು ನೋಡಲು ಇಡೀ ದೇಶದ ಜನ ಕಾದು ಕುಳಿತಿದ್ದಾರೆ. ಸಣ್ಣ ಸಾಲಗಾರರಿಗೆ ಹಣಕಾಸು ಒದಗಿಸುವ ಎನ್‌ಬಿಎಫ್‌ಸಿ (NBFC) ವಲಯಕ್ಕೆ, ಈ ಬಜೆಟ್ ಕೈಗೆಟಕುವ ದರದಲ್ಲಿ ಸಾಲವನ್ನು ವಿಸ್ತರಿಸಲು ಮತ್ತು ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಲಾಗಿದೆ.

ಸಣ್ಣ ಸಾಲಗಾರರು ಹಾಗೂ ಸೂಕ್ಷ್ಮ ಉದ್ಯಮಿಗಳಿಗೆ ಹಣಕಾಸು ಸಂಸ್ಥೆಗಳಿಂದ ಉತ್ತಮ ಸೇವೆ ನೀಡಲು ನಿರ್ದಿಷ್ಟ ನೀತಿ-ನಿಯಂತ್ರಕ ಕ್ರಮಗಳು ಅಗತ್ಯ. ಅದೇ ರೀತಿ ಈ ಬಾರಿಯ ಬಜೆಟ್‌ನಲ್ಲಿ ಎನ್‌ಬಿಎಫ್‌ಸಿ ಸಂಬಂಧಿಸಿ ನಾಲ್ಕು ನಿರೀಕ್ಷೆಗಳಿವೆ. ಅದರಲ್ಲೂ ಗೋಲ್ಡ್ ಲೋನ್ ಎನ್‌ಬಿಎಫ್‌ಸಿಗಳಿಗಾಗಿ ಹಲವು ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ. ಗೋಲ್ಡ್ ಲೋಣ್ ಮಾರ್ಕೆಟ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದರಲ್ಲಿ ಎನ್‌ಬಿಎಫ್‌ಸಿಗಳು ಮುಖ್ಯ ಪಾತ್ರವಹಿಸುತ್ತದೆ. ಆದರೆ ಇತರ ಬ್ಯಾಂಕ್‌ಗಳ ಪೈಪೋಟಿ, ರೆಗ್ಯುಲೇಟರಿ ಮಿತಿಗಳು ಮತ್ತು ಆರ್ಥಿಕ ಸವಾಲುಗಳಿಂದಾಗಿ ಎನ್‌ಬಿಎಫ್‌ಸಿಗಳ ಹಿಂದೆ ಸರಿಯುತ್ತಿದೆ. ಅದೇ ಕಾರಣದಿಂದ ಈ ಬಾರಿ ಎನ್‌ಬಿಎಫ್‌ಸಿ ಸಂಸ್ಥೆಗಳ ಬೆಳವಣಿಗೆಯನ್ನು ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ.
ಆದ್ಯತಾ ವಲಯದ ಸ್ಥಾನಮಾನ (PSL) ಮೂಲಕ ಹಣಕಾಸು ಸೇರ್ಪಡೆ
ಅರ್ಹ ಚಿನ್ನದ ಸಾಲ ಎನ್‌ಬಿಎಫ್‌ಸಿಗಳಿಗೆ ಆದ್ಯತಾ ವಲಯದ (PSL) ಸ್ಥಾನಮಾನ ನೀಡಬೇಕೆಂದು ಆಗ್ರಹಿಸಲಾಗಿದೆ. ಪಿಎಸ್‌ಎಲ್ ಎಂದರೆ ಆರ್‌ಬಿಐ ನಿಗದಿ ಪಡಿಸಿದ ನಿಯಮ. ಇದು ಒಟ್ಟು ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು ತಮ್ಮ ಒಟ್ಟು ಸಾಲದ ನಿಗದಿತ ಶೇಕಡಾವರು ಮೊತ್ತವನ್ನು ಆದ್ಯತೆ ಇರುವವರಿಗೆ ನೀಡುವುದನ್ನು ಕಡ್ಡಾಯಗೊಳಿಸಿದೆ. ಅದೇ ರೀತಿ ಇದೀಗ ಗೋಲ್ಡ್ ಲೋನ್ ಎನ್‌ಬಿಎಫ್‌ಸಿಗಳಿಗೆ ನೀಡುವ ಕೆಲವು ಅರ್ಹ ಸಾಲಗಳನ್ನು ಆದ್ಯತಾ ವಲಯಕ್ಕೆ ಸೇರಿಸಬೇಕು ಎಂಬ ನಿರೀಕ್ಷೆ ಇದೆ. ಪ್ರಸ್ತುತ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಎನ್‌ಬಿಎಫ್‌ಸಿಗಳುಗೆ ಪಿಎಸ್‌ಎಲ್ ಮಾನ್ಯತೆ ಸೀಮಿತವಾಗಿದೆ. ಇದರಿಂದ ಬ್ಯಾಂಕುಗಳಿಹೆ ಹೆಚ್ಚಿನ ಲಾಭವಾಗುತ್ತಿದೆ.
ಯುಪಿಐ ಮೂಲಕ ಚಿನ್ನ-ಸಂಬಂಧಿತ ಕ್ರೆಡಿಟ್ ಲೈನ್
ಯುಪಿಐ (UPI) ವಹಿವಾಟು ವಿಧಾನವನ್ನು ಕ್ರಾಂತಿಗೊಳಿಸಿದೆ, ಆದರೆ ಸಾಲ ಲಭ್ಯತೆ ಈ ಬದಲಾವಣೆಗೆ ಸಮನಾಗಿಲ್ಲ. ಎನ್‌ಬಿಎಫ್‌ಸಿಗಳಿಗಾಗಿ ಯುಪಿಐ ಮೂಲಕ ಚಿನ್ನ-ಸಂಬಂಧಿತ ಕ್ರೆಡಿಟ್ ಲೈನ್ ನೀಡುವಂತೆ ಪ್ರಸ್ತಾಪಿಸಲಾಗಿದೆ. ಗ್ರಾಹಕರು ತಮ್ಮ ಬಳಕೆಯಿಲ್ಲದ ಚಿನ್ನಾಭರಣ ಬಳಸಿ, ಯುಪಿಐ ಮೂಲಕವೇ ₹12-18% ಬಡ್ಡಿದರದಲ್ಲಿ ಸುರಕ್ಷಿತ, ಕ್ರೆಡಿಟ್ ಲೈನ್ ಪಡೆಯಬಹುದು. ಇದು ಅಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳಿಗಿಂತ ಗಮನಾರ್ಹವಾಗಿ ಕಡಿಮೆ.
ಚಿನ್ನದ ಸಾಲಗಳು ವಿಶ್ವಾಸಾರ್ಹವಾಗಿದ್ದು, ಅದೇ ರೀತಿ ಯುಪಿಐ ದೈನಂದಿನ ಆರ್ಥಿಕ ಜೀವನದಲ್ಲಿ ಮುಖ್ಯವಾಗಿದೆ. ಇವೆರಡನ್ನು ಒಟ್ಟಾಗಿ ತರುವುದರಿಂದ ಮನೆಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಕೈಗೆಟಕುವ ಬಡ್ಡಿದರಲ್ಲಿ ಸಾಲ ಪಡೆಯಬುದು. ದುಬಾರಿ ಸಾಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ, ಜವಾಬ್ದಾರಿಯುತ ಸಾಲ ಬಳಕೆಗೆ ಪ್ರೋತ್ಸಾಹ ಸಿಗುತ್ತದೆ.
ಎನ್‌ಬಿಎಫ್‌ಸಿಗಳಿಗೆ ಎಕ್ಸ್‌ಪೋಸರ್ ಮಿತಿಗಳ ತರ್ಕಬದ್ಧಗೊಳಿಸುವಿಕೆ
ಚಿನ್ನದ ಸಾಲ ನೀಡುವ ಎನ್‌ಬಿಎಫ್‌ಸಿಗಳಿಗೆ ಪ್ರಸ್ತುತ ಆರ್‌ಬಿಐ ನಿಯಮಗಳ ಪ್ರಕಾರ, ಸಿಂಗಲ್ ಪಾರ್ಟಿ ಎಕ್ಸ್‌ಪೋಸರ್ ಮಿತಿ 20%ಗೆ ಸೀಮಿತವಾಗಿದೆ. ಆದರೆ ಬಜೆಟ್‌ನಲ್ಲಿ ಬ್ಯಾಂಕ್‌ಗಳಂತೆಯೇ 20-25% ಸಮಾನಗೊಳಿಸುವ ನಿರೀಕ್ಷೆಯಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications