ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗ ಕೇಂದ್ರ ಸರ್ಕಾರವು ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುವ ಕಚ್ಚಾ ತೈಲದ ಮೇಲೆ ತೆರಿಗೆಯನ್ನು ಕಡಿತಗೊಳಿಸಿದೆ. ಕೇಂದ್ರ ಸರ್ಕಾರವು ಸ್ಥಳೀಯವಾಗಿ ಉತ್ಪಾದಿಸುವ ಕಚ್ಚಾತೈಲದ ವಿಂಡ್‌ಫಾಲ್ ತೆರಿಗೆಯನ್ನು ಪ್ರತಿ ಟನ್‌ಗೆ 5,050 ರೂಪಾಯಿಯಿಂದ 4,350ಕ್ಕೆ ಇಳಿಸಲಾಗಿದೆ.
ಕೇಂದ್ರ ಸರ್ಕಾರ ನೀಡಿರುವ ನೋಟಿಫಿಕೇಷನ್ ಪ್ರಕಾರ, ಇನ್ನು ಎಟಿಎಫ್ ಮೇಲಿನ ತೆರಿಗೆಯನ್ನು ಅನ್ನು ಕೂಡಾ ಪ್ರತಿ ಲೀಟರ್‌ಗೆ 1.5ಕ್ಕೆ ಇಳಿಸಿದೆ, ಪ್ರತಿ ಲೀಟರ್ ಎಟಿಎಫ್‌ಗೆ 6 ರೂಪಾಯಿ ತೆರಿಗೆ ಆಗಿತ್ತು. ಇನ್ನು ಕೇಂದ್ರ ಸರ್ಕಾರವು ಡಿಸೇಲ್ ರಫ್ತಿನ ಮೇಲೆ ವಿಂಡ್‌ಫಾಲ್ ತೆರಿಗೆಯು ಪ್ರತಿ ಲೀಟರ್‌ಗೆ 7.5 ರೂಪಾಯಿಯಿಂದ 2.50 ರೂಪಾಯಿಗೆ ಇಳಿಸಲಾಗಿದೆ.
ಇಂದಿನಿಂದಲೇ ಅಂದರೆ ಫೆಬ್ರವರಿ 16ರಿಂದಲೇ ಈ ಪರಿಷ್ಕೃತ ಬಡ್ಡಿದರವು ಜಾರಿಗೆ ಬರುತ್ತದೆ. ಇನ್ನು ಮಾಹಿತಿ ಪ್ರಕಾರ ಪೆಟ್ರೋಲ್ ಸುಂಕವು ಶೂನ್ಯವಾಗಿಯೇ ಉಳಿಯಲಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಎನರ್ಜಿ ಉತ್ಪನ್ನ ಕಡಿತವಾಗುವುದನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರವು ವಿಶೇಷ ಸುಂಕವನ್ನು ಆರಂಭಿಸಿದೆ.

ಸರ್ಕಾರದಿಂದ ಹೆಚ್ಚುವರಿ ತೆರಿಗೆ
ಕೇಂದ್ರ ಸರ್ಕಾರವು ಕೊರತೆಯನ್ನು ಸರಿದೂಗಿಸಯವ ನಿಟ್ಟಿನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಜುಲೈ 1, 2023ರಿಂದ ವಿಂಡ್‌ಫಾಲ್ ತೆರಿಗೆಯನ್ನುಆರಂಭ ಮಾಡಿದೆ. ವಿಂಡ್‌ಫಾಲ್ ತೆರಿಗೆ ಸರ್ಕಾರದ ವಿಧಿಸುವ ಹೆಚ್ಚುವರಿ ತೆರಿಗೆಯಾಗಿದೆ. ನವೆಂಬರ್ 2022ರಲ್ಲಿ ಕೇಂದ್ರ ಸರ್ಕಾರವು ಕಚ್ಚಾ ತೈಲ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಪ್ರತಿ ಟನ್‌ಗೆ 11,000 ರೂಪಾಯಿಯಿಂದ 9,500 ರೂಪಾಯಿಗೆ ಇಳಿಸಿದೆ. ಹಾಗೆಯೇ ಎಟಿಎಫ್ ಮೇಲಿನ ತೆರಿಗೆಯನ್ನು ಪೆಟ್ರೋಲ್ ಪ್ರತಿ ಲೀಟರ್‌ಗೆ 3.50 ರೂಪಾಯಿಯಿಂದ 5 ರೂಪಾಯಿಗೆ ಏರಿಸಿದೆ. ಡೀಸೆಲ್ ಪ್ರತಿ ಲೀಟರ್‌ಗೆ 12 ರೂಪಾಯಿಯಿಂದ 13 ರೂಪಾಯಿಗೆ ಏರಿಸಿದೆ.
ಈ ಬಗ್ಗೆ ಎಎನ್‌ಐ ಜೊತೆ ಸಂದರ್ಶನದಲ್ಲಿ ಮಾತನಾಡಿದ ಸಿಬಿಐಸಿ ಚೇರ್‌ಮನ್ ವಿವೇಕ್ ಜೋಹ್ರಿ ಮಾಹಿತಿ ನೀಡಿದ್ದಾರೆ. "1.45 ಲಕ್ಷ ಕೋಟಿಯಿಂದ 1.5 ಲಕ್ಷ ಕೋಟಿವರೆಗೆ ನಾವು ಮಾಸಿಕ ಜಿಎಸ್‌ಟಿ ಅನ್ನು ಪಡೆಯಲು ಸಾಧ್ಯವಾಗುತ್ತದೆ," ಎಂದು ತಿಳಿಸಿದ್ದಾರೆ. ಹಾಗೆಯೇ, "1.5 ಲಕ್ಷ ಜೋಟಿ ಜಿಎಸ್‌ಟಿ ಸಂಗ್ರಹ ಹೊಸ ದಾಖಲೆಯಾಗಿದೆ. ಮುಂದಿನ ವರ್ಷಗಳಲ್ಲಿ ಈ ದಾಖಲೆ ಮುರಿಯಬಹುದು ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ," ಎಂದು ಕೂಡಾ ವಿವೇಕ್ ಜೋಹ್ರಿ ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರವು ಕಚ್ಚಾತೈಲದ ವಿಂಡ್‌ಫಾಲ್ ತೆರಿಗೆಯನ್ನು ಕಡಿತಗೊಳಿಸಿರುವ ಕಾರಣದಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಕಡಿತವಾಗುವ ಸಾಧ್ಯತೆಯಿದೆ. ಜನರಿಗೆ ಖರ್ಚಿನ ವಿಚಾರದಲ್ಲಿ ರಿಲೀಫ್ ಲಭ್ಯವಾಗಲಿದೆ.
ದೇಶದಲ್ಲಿ ಹಣದುಬ್ಬರವು ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಹಣದುಬ್ಬರದ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜೋಳ ಹಾಗೂ ಇಂಧನದ ತೆರಿಗೆ ಕಡಿತ ಮಾಡುವ ಚಿಂತನೆ ಮಾಡಿದೆ ಎಂದು ಬುಧವಾರ ವರದಿಯಾಗಿದೆ.


Click it and Unblock the Notifications