ತುಮಕೂರಿನ ಜನತೆಗೆ ಅದೃಷ್ಟವೋ?ಅಥವಾ ವಿ. ಸೋಮಣ್ಣ ಅವರ ಕಾಲ್ಗುಣವೋ ಗೊತ್ತಿಲ್ಲ. ಕಾಕತಾಳೀಯ ಎಂಬಂತೆ ತುಮಕೂರಿನ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ವೇಗ ಸಿಕ್ಕಿದೆ. ಈ ನಡುವೆಯೇ, ತುಮಕೂರಿನ ಜನತೆಗೆ ಮತ್ತೊಂದು ಸಿಹಿಸುದ್ದಿ ಲಭಿಸಿದೆ. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ ಸೋಮಣ್ಣ ಘೋಷಿಸಿದ್ದಾರೆ. ಇದರಿಂದಾಗಿ 88,500 ಉದ್ಯೋಗವೂ ಸೃಷ್ಟಿಯಾಗಲಿದೆ. ಬನ್ನಿ, ಆ ಯೋಜನೆ ಯಾವುದು? ಎಲ್ಲಿ ನಿರ್ಮಾಣ ಮತ್ತು ಅನುದಾನ ಎಷ್ಟು? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ತಿಳಿಯೋಣ.
ಹೌದು,ತುಮಕೂರಿಗೆ ಮೆಟ್ರೋ ಬರಬೇಕು ಎಂಬ ಕಾರ್ಯಸಾಧ್ಯತಾ ವರದಿ ರಾಜ್ಯಸರ್ಕಾರಕ್ಕೆ ತಲುಪಿದೆ. ಇನ್ನೂ ಕೇಂದ್ರ ಸರ್ಕಾರದ ಅನುಮತಿ ಮಾತ್ರ ಬಾಕಿ ಇದೆ.ತುಮಕೂರು-ಚಿತ್ರ ದುರ್ಗದ ಮಾರ್ಗವಾಗಿ ಹೊಸ ರೈಲ್ವೆ ಮಾರ್ಗ ಕೂಡ ಬರುತ್ತಿದ್ದು, ಒಂದೆಲ್ಲಾ ಒಂದು ಅಭಿವೃದ್ದಿಗಳು ತುಮಕೂರಿನಲ್ಲಿ ಆಗುತ್ತಿವೆ. ಇದರಿಂದ ಅನೇಕ ಉದ್ಯೋಗಳು ಕೂಡ ಸೃಷ್ಟಿಯಾಗುವ ಸಾಧ್ಯತೆಯಿದೆ. ತುಮಕೂರಿಗ ಜನರ ಪಾಲಿಗೆ ಅಭಿವೃದ್ದಿ ಕಾರ್ಯಗಳು ಬಂಪರ್ ಲಾಟರಿ ಎಂದೇ ಹೇಳಬಹುದು.
ಕೇಂದ್ರ ಸಚಿವ ವಿ.ಸೋಮಣ್ಣ ತುಮಕೂರಿಗೆ ಒಂದೆಲ್ಲಾ ಒಂದು ಅಭಿವೃದ್ದಿ ಕಾರ್ಯಗಳಿಗೆ ಸಾಥ್ ನೀಡುತ್ತಿದ್ದು ಇದೀಗ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ನಿರ್ಮಿಸಲಾಗುತ್ತದೆ ಎಂದು ಮತ್ತೋಂದು ಬೃಹತ್ ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ
ಘೋಷಣೆ ಮಾಡಿದ್ದಾರೆ.

ಈ ಕುರಿತು ಅವರು ಶನಿವಾರ ರೈಲ್ವೆ ಪರಿಶೀಲಿಸಿ ಮಾತನಾಡಿದ ಅವರು ಉತ್ಪಾದನಾ ಸಾಮಗ್ರಿ, ಸರಕು ಸಾಗಣೆ ಸಾರಿಗೆ ವೆಚ್ಚ ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾಹಿತಿಯನ್ನು ಅವರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಮ್ಮರಾಜನಹಳ್ಳಿಯಲ್ಲಿ ಶೀಘ್ರದಲ್ಲೇ ಗುಡ್‌ಸ್ ಟರ್ಮಿನಲ್ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದ್ದು, ಇದರೊಂದಿಗೆ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ ಕಾರ್ಯ ಚುರುಕಾಗಿದೆ. ಈ ಪಾರ್ಕ್ ದಕ್ಷಿಣ ಭಾರತದ ಅತಿದೊಡ್ಡ ಲಾಜಿಸ್ಟಿಕ್ ಹಬ್ ಆಗಿ ರೂಪುಗೊಳ್ಳಲಿದೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2023ರಲ್ಲಿ 3 ಹಂತಗಳ ಪಿಎಂ ಗತಿಶಕ್ತಿ ಯೋಜನೆಗೆ ಅಡಿಗಲ್ಲು ಹಾಕಿದ್ದು, ಇದರ ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ 1668 ಎಕರೆ ಭೂಮಿಯಲ್ಲಿ, 1700 ಕೋಟಿ ವೆಚ್ಚದಲ್ಲಿ ಕಾರ್ಯಾನ್ವಯಗೊಳ್ಳುತ್ತಿದೆ.
ಯೋಜನೆಯ ಉದ್ದೇಶ: ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವುದು ಮತ್ತು ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ನೀಡಲಾಗುತ್ತದೆ
ಪಿಎಂ ಗತಿಶಕ್ತಿ ಯೋಜನೆ ಅಡಿಯಲ್ಲಿ ತುಮಕೂರು ಮಹತ್ವಪೂರ್ಣ ಭಾಗವಾಗಿದ್ದು, ಫೇಸ್ 1 ರಲ್ಲಿ 88,500 ಉದ್ಯೋಗಗಳ ಸೃಷ್ಟಿ ನಿರೀಕ್ಷೆಯಲ್ಲಿದೆ. ಈ ಯೋಜನೆಯ ಒಟ್ಟು ವೆಚ್ಚ ₹7,000 ಕೋಟಿ, ಮತ್ತು ಪ್ರಥಮ ಹಂತದಲ್ಲಿ ಮಾತ್ರವೇ 1,700 ಕೋಟಿ ಹೂಡಿಕೆ ಮಾಡಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಗೆ 2023 ರಲ್ಲಿ ಅಡಿಗಲ್ಲು ಹಾಕಿದ್ದರು, ಮತ್ತು ಈಗ ಮೊದಲ ಹಂತದ ಕಾಮಗಾರಿ ಚುರುಕಾಗಿ ನಡೆಯುತ್ತಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ತುಮಕೂರಿಗೆ ಮೆಟ್ರೋ
ಬಹುನಿರೀಕ್ಷಿತ ಮ್ರೆಟೋ ಯೋಜನೆ ಕೂಡ ತುಮಕೂರಿಗೆ ಬರುತ್ತದೆ.ಕಾರ್ಯರೂಪಕ್ಕೆ ತರುವ ಕೆಲಸ ಆಗುತ್ತದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ದೊಡ್ಡ ಸುದ್ದಿ
ಮುಂದಿನ ತಿಂಗಳು ತುಮಕೂರಿನ ಜನತೆಗೆ ಮತ್ತೋಂದು ದೊಡ್ಡ ಸುದ್ದಿ ನೀಡುತ್ತೇವೆ. ಇದರಿಂದ ತುಮಕೂರಿನ ಪೂರ್ಣ ಚಿತ್ರಣವೇ ಬದಲಾಗುತ್ತದೆ. ಬೆಂಗಳೂರಿನಂತೆ ತುಮಕೂರು ಕೂಡ ವೇಗವಾಗಿ ಬೆಳೆಯುತ್ತಿದೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.


Click it and Unblock the Notifications