ಅಂತೂ ಇಂತೂ ಆರ್‌ಸಿಬಿ ಕಪ್ ಗೆದ್ದಾಗಿದೆ. ಈ ಗೆಲುವಿನ ಬೆನ್ನಲ್ಲೇ ಹಲವು ಕ್ಷೇತ್ರಗಳಲ್ಲಿ ಭಾರೀ ಬದಲಾವಣೆ ಕಂಡುಬರುತ್ತಿದೆ. ಈ ಪೈಕಿ ಷೇರು ಮಾರುಕಟ್ಟೆಯೂ ಒಂದಾಗಿದೆ. ಇತ್ತೀಚಿಗೆ ಆರ್‌ಸಿಬಿ ಮಾರಾಟದ ಸುದ್ದಿ ಭಾರೀ ಸದ್ದು ಮಾಡಿತ್ತು. ಇದರ ಎಫೆಕ್ಟ್ ನಿಂದ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇಂದು ಭಾರೀ ಏರಿಕೆಯಾಗಿದೆ.
ಹೌದು, ಐಪಿಎಲ್ ಕ್ರಿಕೆಟ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಲ್ಲಿ ಪಾಲನ್ನು ಮಾರಾಟ ಮಾಡಲು ಅದರ ಪೋಷಕ ಡಿಯಾಜಿಯೊ ಪಿಎಲ್‌ಸಿ ಮಾತುಕತೆ ನಡೆಸುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೇ ಇಂದು ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಶೇಕಡಾ 3 ರಷ್ಟು ಏರಿಕೆಯಾಗಿವೆ. ಈ ಷೇರುಗಳು ಐದು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ವರದಿಯಾಗಿದೆ.

ಷೇರುಮಾರುಕಟ್ಟೆಯಲ್ಲಿ ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಸಂಸ್ಥೆಯ ಷೇರುಗಳು ಇಂದು ಶೇ. 3.28 ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿನ ಬೆಲೆ 1,645 ಕ್ಕೆ ತಲುಪಿದ್ದು, ಇದು ಈ ವರ್ಷದ ಜನವರಿ 8 ರ ನಂತರದ ತಿಂಗಳಿನ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ.
ಷೇರುಪೇಟೆಯಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ, ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಎನ್‌ಎಸ್‌ಇಯಲ್ಲಿ ಶೇ. 2 ರಷ್ಟು ಏರಿಕೆಯಾಗಿ 1,626 ರೂ.ಗಳಲ್ಲಿ ವಹಿವಾಟುವನ್ನು ನಡೆಸಿದೆ. ಇನ್ನೂ 10:30 ರ ಹೊತ್ತಿಗೆ ಶೇ. 0.14 ರಷ್ಟು ಮುಂಗಡಕ್ಕೆ ಹೋಲಿಸಿದರೆ, ಷೇರುಗಳು ಶೇ. 1.7 ರಷ್ಟು ಏರಿಕೆಯಾಗಿ 1,620 ಕ್ಕೆ ವಹಿವಾಟು ನಡೆಸಿವೆ.
ಕಳೆದ ತಿಂಗಳಿಗೆ ಹೋಲಿಕೆಯನ್ನು ಮಾಡಿದ್ದರೆ ಇತ್ತೀಚಿನ ಕನಿಷ್ಠ ಮಟ್ಟದಿಂದ ಶೇ.7 ಕ್ಕಿಂತ ಹೆಚ್ಚು ಚೇತರಿಸಿಕೊಂಡಿವೆ. ಎನ್‌ಎಸ್‌ಇಯಲ್ಲಿ ಶೇ.6.3 ರಷ್ಟು ಮುನ್ನಡೆ ಸಾಧಿಸಿದ್ದಕ್ಕೆ ಹೋಲಿಸಿದರೆ, ಈ ವರ್ಷ ಕೌಂಟರ್ ಶೇ.0.02 ರಷ್ಟು ಕುಸಿದಿದೆ. ಬಿಎಸ್‌ಇ ದತ್ತಾಂಶದ ಪ್ರಕಾರ ಯುನೈಟೆಡ್ ಸ್ಪಿರಿಟ್ಸ್ ಒಟ್ಟು 1.18 ಟ್ರಿಲಿಯನ್ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿದೆ.
ಆರ್‌ಸಿಬಿಯಲ್ಲಿನ ಷೇರು ಮಾರಾಟ
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಬ್ರಿಟಿಷ್ ಡಿಸ್ಟಿಲರಿ ಕಂಪನಿ ಡಿಯಾಜಿಯೊ, ಐಪಿಎಲ್ ಫ್ರಾಂಚೈಸಿ ಆರ್‌ಸಿಬಿಯ ಮಾರಾಟ ಮಾಡಲು ಚರ್ಚೆಗಳನ್ನು ನಡೆಸುತ್ತಿದೆ. ಕಂಪನಿಯು 2 ಬಿಲಿಯನ್ ಡಾಲರ್‌ಗಳ ಮೌಲ್ಯ ಕೋರುವಂತಹ ಸಾಧ್ಯತೆ ಇದೆ ಎಂದು ಸುದ್ದಿಗಳ ಹರಿದಾಡುತ್ತಿವೆ ಆದರೆ ಈ ಕುರಿತು ಯಾವುದೇ ನಿರ್ಧಾರ ಅಂತಿಮವಾಗಿಲ್ಲ ಮತ್ತು ಅವರು ತಂಡವನ್ನು ಮಾರಾಟ ಮಾಡದೇ ಇರಲೂ ಕೂಡ ನಿರ್ಧರಿಸಬಹುದು ಎಂದು ವರದಿಗಳು ಹೇಳಿವೆ.
ಆರೋಗ್ಯ ಸಚಿವಾಲಯವು ಐಪಿಎಲ್‌ನಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಬ್ರಾಂಡ್‌ಗಳ ಪ್ರಚಾರವನ್ನು ನಿಷೇಧಿಸಲು ಮತ್ತು ಕ್ರೀಡಾ ಆಟಗಾರರಿಂದ ಅನಾರೋಗ್ಯಕರ ಪ್ರಚಾರವನ್ನು ನಿಲ್ಲಿಸಲು ಒತ್ತಾಯಿಸುತ್ತಿರುವ ನಂತರ ಕಂಪನಿಯು ಷೇರು ಮಾರಾಟವನ್ನು ಮಾಡಲು ತಿರ್ಮಾನಿಸಲಾಗಿದೆ ಎಮದು ಕೂಡ ವರದಿಯಾಗಿದೆ.
ಐಪಿಎಲ್ ಪ್ರಾರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸ್ ಅನ್ನು ವಿಜಯ್ ಮಲ್ಯ ಅವರು ಖರೀದಿಸಿದ್ದರು. ಆದರೆ ಅವರ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ ಸಾಲಗಾರರಿಗೆ ಹಣ ಪಾವತಿಸಲು ಸಾಧ್ಯವಾಗದೆ 2012ರಲ್ಲಿ ಮುಚ್ಚಲ್ಪಟ್ಟಿತು. ಕಿಂಗ್‌ಫಿಷರ್ ಏರ್‌ಲೈನ್ಸ್ ಮುಚ್ಚಲ್ಪಟ್ಟ ನಂತರ, ಯುನೈಟೆಡ್ ಸ್ಪಿರಿಟ್ಸ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಪಾಲು ಹೊಂದಿದ್ದ ಡಿಯಾಜಿಯೋ ಎಂಬ ಕಂಪೆನಿಯು ಖರೀದಿ ಮಾಡಿತ್ತು.ಆದರಿಂದ ಆರ್‌ಸಿಬಿ ತಂಡದ ಮಾಲೀಕತ್ವವು ಬ್ರಿಟಿಷ್ ಮೂಲದ ಡಿಸ್ಟಿಲ್ಲರಿ ಕಂಪೆನಿಗೆ ಸೇರಿದೆ. ಹೀಗೆ, ವಿಜಯ್ ಮಲ್ಯ ಅವರ ಆರ್‌ಸಿಬಿ ಫ್ರಾಂಚೈಸ್‌ನ ಮಾಲೀಕತ್ವವು ಡಿಯಾಜಿಯೋ ಕಂಪೆನಿಯ ಕೈಸೇರಿತು.
ಆರ್‌ಸಿಬಿ 17ವರ್ಷದ ಪರಿಶ್ರಮದಿಂದ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಇದರಿಂದಾಗಿ ವಾಣಿಜ್ಯ ಆಕರ್ಷಣೆಗಳು ಹೆಚ್ಚಳವಾಗುತ್ತದೆ.ಜಾಗತಿಕವಾಗಿ ಹೆಚ್ಚಾಗಿ ಜನರು ವಿರಾಟ್ ಕೊಹ್ಲಿ ತನ್ನ ಶ್ರೇಯಾಂಕದಲ್ಲಿ, ಆರ್‌ಸಿಬಿ ವಿಶೇಷವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಗಾಧವಾದ ಮಾರುಕಟ್ಟೆ ಆಕರ್ಷಣೆಯನ್ನು ಹೊಂದಿದ್ದಾರೆ.


Click it and Unblock the Notifications