ಪ್ರಸ್ತುತ ಡಿಜಿಟಲ್ ಪಾವತಿ ಜೀವನದ ಅವಿಭಾಜ್ಯ ಅಂಗವಾಗಿದೆ. ಗೂಗಲ್‌ಪೇ, ಫೋನ್‌ಪೇ ಮತ್ತು ಇತರೆ ಯುಪಿಐ (UPI) ಆಧಾರಿತ ಅನೇಕ ಆಪ್‌ಗಳನ್ನು ಹಣ ವರ್ಗಾವಣೆಗೆ ಬಳಸಲಾಗುತ್ತಿದೆ. ಆದರೆ, ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಅಥವಾ ತಾಂತ್ರಿಕ ದೋಷಗಳಿಂದ ಹಣವು ಬೇರೆಯವರ ಖಾತೆಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಯುಪಿಐ ಐಡಿಯಲ್ಲಿನ ಸಣ್ಣ ಮುದ್ರಣ ದೋಷ ಅಥವಾ ತಪ್ಪಾದ ಆಯ್ಕೆಯಿಂದ ನೀವು ಕಷ್ಟಪಟ್ಟು ಸಂಪಾದಿಸಿದ ಹಣವು ಬೇರೆಯವರ ಪಾಲಾಗಬಹುದು. ಒಂದು ವೇಳೆ ಗೂಗಲ್‌ಪೇ ಅಥವಾ ಫೋನ್‌ಪೇ ನಲ್ಲಿ ಇಂತಹ ತಪ್ಪನ್ನು ಮಾಡಿದ್ದರೆ, ಭಯಬೇಡ. ಆ ಹಣವನ್ನು ಮರಳಿ ಪಡೆಯಲು ಕೆಲವು ಮಾರ್ಗಗಳಿವೆ.
ನೀವು ಬೇರೆಯವರ ಐಡಿಗೆ ಹಣವನ್ನು ಕಳುಹಿಸಿದರೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇದು ಬಹಳ ಮುಖ್ಯ. ತಪ್ಪು ವಹಿವಾಟುಗಳು ಸಂಭವಿಸುವುದು ಅಸಾಮಾನ್ಯವೇನಲ್ಲ. ನೀವು ಹಣವನ್ನು ತಪ್ಪು ಖಾತೆಗೆ ವರ್ಗಾಯಿಸಿದ್ದೀರಿ ಎಂದು ಅರಿವಾದ ತಕ್ಷಣ, ವಿಳಂಬ ಮಾಡದೆ ಈ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

* ಮೊದಲನೆಯದಾಗಿ, ಹಣವನ್ನು ಸ್ವೀಕರಿಸಿದ ವ್ಯಕ್ತಿಯನ್ನು ನೇರವಾಗಿ ಸಂಪರ್ಕಿಸಲು ಪ್ರಯತ್ನಿಸಿ. ಇದು ಅತ್ಯಂತ ಸರಳ ಮತ್ತು ತ್ವರಿತ ಪರಿಹಾರವಾಗುವ ಸಾಧ್ಯತೆ ಇದೆ.
* ಒಂದು ವೇಳೆ ನಿಮಗೆ ಆ ವ್ಯಕ್ತಿ ಪರಿಚಿತರಾಗಿದ್ದರೆ, ತಕ್ಷಣವೇ ಅವರನ್ನು ಸಂಪರ್ಕಿಸಿ ಮತ್ತು ನಡೆದ ತಪ್ಪನ್ನು ವಿವರಿಸಿ. ಹಣವನ್ನು ಹಿಂತಿರುಗಿಸಲು ವಿನಂತಿಸಿ.
* ಒಂದು ವೇಳೆ ಆ ವ್ಯಕ್ತಿ ಅಪರಿಚಿತರಾಗಿದ್ದರೆ, ಸೌಜನ್ಯದಿಂದ ಅವರನ್ನು ಸಂಪರ್ಕಿಸಿ ಮತ್ತು ತಪ್ಪಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ತಿಳಿಸಿ. ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ಅವರು ತಕ್ಷಣವೇ ಹಣವನ್ನು ಹಿಂದಿರುಗಿಸಬಹುದು.
* ಒಂದು ವೇಳೆ ಸ್ವೀಕರಿಸಿದ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಅಥವಾ ಅವರು ಹಣವನ್ನು ಮರುಪಾವತಿಸಲು ನಿರಾಕರಿಸಿದರೆ, ನೀವು ತಕ್ಷಣವೇ ಗೂಗಲ್‌ಪೇ ಅಥವಾ ಫೋನ್‌ಪೇ ಗ್ರಾಹಕ ಬೆಂಬಲವನ್ನು ಸಂಪರ್ಕಿಸಬೇಕು.
ಗೂಗಲ್‌ಪೇ, ಫೋನ್‌ಪೇ ಟೋಲ್-ಫ್ರೀ ಸಂಖ್ಯೆ
ಗೂಗಲ್‌ಪೇಗಾಗಿ ನೀವು ಟೋಲ್-ಫ್ರೀ ಸಂಖ್ಯೆ 1800-419-0157ಕ್ಕೆ ಕರೆ ಮಾಡಬಹುದು. ಫೋನ್‌ಪೇ ಬಳಕೆದಾರರು 080 6872 7374 ಸಂಖ್ಯೆಯನ್ನು ಸಂಪರ್ಕಿಸಬಹುದು. ಕರೆ ಮಾಡುವಾಗ, ನಿಮ್ಮ ವಹಿವಾಟಿಗೆ ಸಂಬಂಧಿಸಿದ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ವಹಿವಾಟು ಐಡಿ, ಹಣ ವರ್ಗಾವಣೆಯಾದ ದಿನಾಂಕ ಮತ್ತು ಸಮಯ, ಕಳುಹಿಸಲಾದ ನಿಖರವಾದ ಮೊತ್ತ ಮತ್ತು ಹಣವನ್ನು ಸ್ವೀಕರಿಸಿದವರ ಯುಪಿಐ ಐಡಿ ನಿಮ್ಮ ಬಳಿ ಇರಬೇಕು. ಇಷ್ಟು ಇದ್ದರೆ ಗ್ರಾಹಕ ಬೆಂಬಲ ತಂಡವು ನಿಮ್ಮ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ಗೂಗಲ್‌ಪೇ ಮತ್ತು ಫೋನ್‌ಪೇ ಗ್ರಾಹಕ ಬೆಂಬಲವು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಎನ್‌ಪಿಸಿಐ ಗಮನಕ್ಕೆ ತರಬಹುದು. ಎನ್‌ಪಿಸಿಐ ಯುಪಿಐ ವಹಿವಾಟುಗಳನ್ನು ನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದೆ. ಇಂತಹ ಸಮಸ್ಯೆಗಳಿಗಾಗಿ ಪರಿಹಾರ ನೀಡಲಿದೆ.
* ಎನ್‌ಪಿಸಿಐಗೆ ದೂರು ಸಲ್ಲಿಸಲು, ನೀವು ಅಧಿಕೃತ ವೆಬ್‌ಸೈಟ್ npci.org.in ಗೆ ಭೇಟಿ ನೀಡಬೇಕು.
* ಇಲ್ಲಿ, 'What We Do' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ಇದಾದ ನಂತರ ಯುಪಿಐ ಅನ್ನು ಆಯ್ಕೆ ಮಾಡಬೇಕು.
* ವಿವಾದ ಪರಿಹಾರ ಕಾರ್ಯ ವಿಧಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕಿ ಮತ್ತು ಅಲ್ಲಿ ನೀಡಲಾದ ಫಾರ್ಮ್ ಅನ್ನು ಭರ್ತಿ ಮಾಡಬೇಡಕು.
* ದೂರು ಸಲ್ಲಿಸುವಾಗ, ನಿಮ್ಮ ಯುಪಿಐ ವಹಿವಾಟು ಐಡಿ, ಹಣ ಕಳುಹಿಸಿದವರು ಮತ್ತು ಸ್ವೀಕರಿಸಿದವರ ಬ್ಯಾಂಕ್ ಹೆಸರುಗಳು, ವರ್ಗಾವಣೆ ಮಾಡಿದ ನಿಖರವಾದ ಮೊತ್ತ ಮತ್ತು ವಹಿವಾಟಿನ ದಿನಾಂಕ ಹಾಗೂ ಸಮಯದಂತಹ ಎಲ್ಲಾ ಅಗತ್ಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.
ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ಮಾರ್ಗಸೂಚಿಗಳ ಪ್ರಕಾರ, ತಪ್ಪಾಗಿ ವರ್ಗಾವಣೆಯಾದ ಹಣವನ್ನು 24 ರಿಂದ 48 ಗಂಟೆಗಳ ಒಳಗೆ ಮರುಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರೂ ಒಂದೇ ಬ್ಯಾಂಕಿನ ಗ್ರಾಹಕರಾಗಿದ್ದರೆ, ಈ ಪ್ರಕ್ರಿಯೆಯು ತುಲನಾತ್ಮಕವಾಗಿ ವೇಗವಾಗಿ ನಡೆಯುತ್ತದೆ. ಆದರೆ, ಹಣ ವರ್ಗಾವಣೆಯು ಬೇರೆ ಬೇರೆ ಬ್ಯಾಂಕ್‌ಗಳ ನಡುವೆ ನಡೆದಿದ್ದರೆ, ಹಣ ಮರಳಿ ಬರಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಈ ಮುನ್ನೆಚ್ಚರಿಕೆಗಳು ಗೊತ್ತಿದ್ರೆ, ತಪ್ಪು ಆಗಲ್ಲ!
* ಹಣ ಕಳುಹಿಸುವ ಮೊದಲು ಸ್ವೀಕರಿಸುವವರ ಯುಪಿಐ ಐಡಿ ಅಥವಾ ಫೋನ್ ಸಂಖ್ಯೆಯನ್ನು ಎರಡು ಬಾರಿ ಪರಿಶೀಲಿಸಿ.
* ನಿಮಗೆ ಸಾಧ್ಯವಾದರೆ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಬೇಕು.
* ನಿಮ್ಮ ಯುಪಿಐ ಐಡಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು.
* ಹೊಸ ಸಂಪರ್ಕಕ್ಕೆ ಮೊದಲ ಬಾರಿಗೆ ಹಣ ಕಳುಹಿಸುವಾಗ ಸಣ್ಣ ಮೊತ್ತವನ್ನು ಪರೀಕ್ಷಿಸಬೇಕು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications