ಭಾರತದಲ್ಲಿ ಅತೀ ಅಧಿಕವಾಗಿ ಯುಪಿಐ ವಹಿವಾಟನ್ನು ನಡೆಸಲಾಗುತ್ತದೆ. ಅತೀ ಸರಳವಾದ, ವೇಗವಾದ ವಹಿವಾಟು ಇದಾದ ಕಾರಣ ಹೆಚ್ಚಿನ ಜನರು ಯುಪಿಐ ವಹಿವಾಟನ್ನೇ ನಡೆಸುತ್ತಿದ್ದಾರೆ. ಕೋಟ್ಯಾಂತರ ಜನರು ತಮ್ಮ ದೈನಂದಿನ ವಹಿವಾಟಿಗೂ ಕೂಡಾ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಬಳಸುತ್ತಾರೆ.
ಕೆಲವೇ ಸೆಕೆಂಡುಗಳಲ್ಲಿ ನಾವು ಯುಪಿಐ ವಹಿವಾಟನ್ನು ನಡೆಸಲು ಸಾಧ್ಯವಾಗುತ್ತದೆ. ಆದರೆ ನೆಟ್‌ವರ್ಕ್ ಸಮಸ್ಯೆ ಇದ್ದರೆ, ಕೊಂಚ ಸಮಸ್ಯೆ ಉಂಟಾಗಬಹುದು. ನಾವು ಆಫ್‌ಲೈನ್‌ನಲ್ಲಿ ಯುಪಿಐ ವಹಿವಾಟನ್ನು ನಡೆಸಲು ಸಾಧ್ಯವಾಗುತ್ತದೆ. ಆದರೆ ಈ ಆಫ್‌ಲೈನ್ ಮೆಥಡ್ ಕೊಂಚ ಹೆಚ್ಚಿನ ಸಮಯವನ್ನೇ ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಒಟ್ಟು ನಡೆಸಲಾಗುವ ರಿಟೇಲ್ ವಹಿವಾಟಿನ ಪೈಕಿ ಶೇಕಡ 75ರಷ್ಟು ವಹಿವಾಟು ಯುಪಿಐ ಮೂಲಕ ನಡೆಸಲಾಗುತ್ತದೆ. 100 ರೂಪಾಯಿಗಿಂತ ಕಡಿಮೆ ಮೌಲ್ಯದ ವಹಿವಾಟನ್ನು ಅಧಿಕವಾಗಿ ಯುಪಿಐ ಮೂಲಕ ನಡೆಸಲಾಗುತ್ತದೆ.
ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯುಪಿಐ ಲೈಟ್ ಫೀಚರ್ ಅನ್ನು ಜಾರಿ ಮಾಡಿದೆ. ಈ ಫೀಚರ್ ಮೂಲಕ ನಾವು ಯುಪಿಐ ಆಪ್‌ನಲ್ಲಿ 200 ರೂಪಾಯಿವರೆಗೆ ಯಾವುದೇ ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕಳೆದ ವರ್ಷ ಆರ್‌ಬಿಐ ಈ ಫೀಚರ್ ಅನ್ನು ಘೋಷಣೆ ಮಾಡಿದೆ. ಆದರೆ ಈವರೆಗೆ ಯಾವುದೇ ಯುಪಿಐ ವಹಿವಾಟು ಆಪ್‌ಗಳಲ್ಲಿ ಈ ಫೀಚರ್ ಅಳವಡಿಕೆ ಮಾಡಲಾಗಿಲ್ಲ. ಆದರೆ ಈಗ ಪೇಟಿಎಂ ಈ ಫೀಚರ್ ಅನ್ನು ಆರಂಭಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

ಪೇಟಿಎಂನಲ್ಲಿ ಯುಪಿಐ ಲೈಟ್ ಫೀಚರ್
ಪೇಟಿಎಂ ಬಳಕೆದಾರರು ಈಗ ಯುಪಿಐ ಲೈಟ್ ಫೀಚರ್‌ನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. "ಯುಪಿಐ ಲೈಟ್ ವ್ಯಾಲೆಟ್ ಭರ್ತಿಯಾದ ಬಳಿಕ ಬಳಕೆದಾರರು ಒಂದು ಬಾರಿಗೆ 200 ರೂಪಾಯಿವರೆಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಬಹುದಾಗಿದ್ದು, ಇದು ಶೀಘ್ರವಾಗಿ ನಡೆಸಬಹುದಾದ ವಹಿವಾಟಾಗಿದೆ. ಯುಪಿಐ ಲೈಟ್‌ನಲ್ಲಿ ದಿನದಲ್ಲಿ ಎರಡು ಬಾರಿಗೆ 2000 ಸಾವಿರ ರೂಪಾಯಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ 4000 ರೂಪಾಯಿ ವಹಿವಾಟು ನಡೆಸಬಹುದಾಗಿದೆ," ಎಂದು ಪೇಟಿಎಂ ಮಾಹಿತಿ ನೀಡಿದೆ.
ಯುಪಿಐ ಲೈಟ್ ಆಪ್‌ನಲ್ಲಿ ಮಾಡಲಾದ ವಹಿವಾಟು ಪೇಟಿಎಂ ಬ್ಯಾಲೆನ್ಸ್ ಮತ್ತು ಹಿಸ್ಟರಿಯಲ್ಲಿಯೇ ಲಭ್ಯವಾಗಲಿದೆ. ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಲಭ್ಯವಾಗುವುದಿಲ್ಲ. ಯುಪಿಐ ಲೈಟ್‌ನಲ್ಲಿ ಹಣದ ವಹಿವಾಟನ್ನು ಆನ್‌ಲೈನ್ ಮೋಡ್‌ನಲ್ಲಿ ಎಎಫ್‌ಎ ಅಥವಾ ಯುಪಿಐ ಆಟೋಪೇನಲ್ಲಿ ಮಾತ್ರ ಅನುಮತಿಸಲಾಗುತ್ತದೆ.
ಪ್ರಸ್ತುತ, UPI ಲೈಟ್ ಬ್ಯಾಲೆನ್ಸ್‌ನಿಂದ ಡೆಬಿಟ್ ಅನ್ನು ಮತ್ತು UPI ಲೈಟ್‌ಗೆ ಎಲ್ಲಾ ಕ್ರೆಡಿಟ್‌ಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಬ್ಯಾಂಕಿನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿರ್ವಹಿಸುವ ಬಳಕೆದಾರರ ಬ್ಯಾಂಕ್ ಖಾತೆಯಲ್ಲಿ ಆನ್‌ಲೈನ್‌ನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ.


Click it and Unblock the Notifications