ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಿಶೇಷ ಅಕ್ಷರಗಳನ್ನು ಒಳಗೊಂಡಿರುವ ಎಲ್ಲಾ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ವಹಿವಾಟು ಐಡಿಗಳನ್ನು ಫೆಬ್ರವರಿ 1 ರಿಂದ ಜಾರಿಗೆ ತರಲು ನಿರ್ಧಾರ ಮಾಡಿದೆ ಎಂದು ಮಾಹಿತಿ ತಿಳಿಸಿದೆ.
ಹೌದು, ಯುಪಿಐ ಪೇಮೆಂಟ್‌ಗೆ ಸಂಬಂಧಿಸಿದಂತಹ ನಿಯಮಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿವೆ.ಇನ್ನು ಆನ್‌ಲೈನ್ ಶಾಪಿಂಗ್, ಒಬ್ಬರಿಂದ ಮತ್ತೊಬ್ಬರಿಗೆ ಹಣ ವರ್ಗಾವಣೆಯೂ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ನಡೆಯುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಸಣ್ಣ ಸಣ್ಣ ಹಣಕಾಸಿನ ವಾಹಿವಾಟುಗಳ ವ್ಯವಹಾರವನ್ನು ಆನ್‌ಲೈನ್ ಮೂಲಕವೇ ಮಾಡುತ್ತೇವೆ.ಹೌದು ದಿನ ನಿತ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಹಾಲು,ಮೊಸರು,ತರಕಾರಿ ಅಂತಹ ವಸ್ತುಗಳನ್ನು ಖರೀದಿ ಮಾಡಲು ಮೊಬೈಲ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುತ್ತಾರೆ.ಇದರಿಂದ ಡಿಜಿಟಲ್ ವಾಹಿವಾಟು ಹೆಚ್ಚಾಗುತ್ತದೆ. ಫೆಬ್ರವರಿ 1ರಿಂದ ಈ ರೀತಿಯ ಐಡಿಗಳಿಂದ ಯುಪಿಐ ಪೇಮೆಂಟ್ ಸ್ವೀಕರಿಸಲಾಗುವುದಿಲ್ಲ ಎಂದು ಎನ್‌ಪಿಸಿಐ ಮಹತ್ವದ ಬದಲಾವಣೆಯನ್ನು ತಂದಿದೆ.
ಸರಳ ಹಣಕಾಸಿನ ವ್ಯವಹಾರ
ಯುಪಿಐ ಆಪ್ (Unified Payments Interface) ಮೂಲಕ ತುಂಬಾ ಸರಳವಾಗಿ ಹಣಕಾಸಿನ ವ್ಯವಹಾರಗಳನ್ನು ನಡೆಸಬಹುದು. ಇಲ್ಲಿ ಪ್ರತಿಯೊಂದು ವ್ಯವಹಾರದ ಐಡಿಯೂ ಬೇರೆಯಾಗಿರುತ್ತದೆ.
ವಿಶೇಷ ಅಕ್ಷರ/ಚಿಹ್ನೆಗಳನ್ನು upi ವಹಿವಾಟು ಸ್ವೀಕರವಿಲ್ಲ
ಫೆಬ್ರವರಿ 1ರಿಂದ ಯಾವುದೇ ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು NPCI (National Payments Corporation of India ) ಮಾಹಿತಿಯನ್ನು ನೀಡಿದೆ.ಈ ಸಂಬಂಧ ಜನವರಿ 9 ರಂದು ಸುತ್ತೋಲೆಯನ್ನು ಸಹ ಹೊರಡಿಸಲಾಗಿತು.
ಈ ಸುತ್ತೋಲೆ ಪ್ರಕಾರ, ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ವಿಶೇಷ ಚಿಹ್ನೆ (Special Character) ಐಡಿಯನ್ನು ಯುಪಿಐ ಸ್ವೀಕರಿಸುವುದಿಲ್ಲ.
ಯಾವ ಚಿಹ್ನೆಗಳನ್ನು ಬಳಸುವಂತೆ ಇಲ್ಲ
ಯುಪಿಐ ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು ಎಂದು ಎನ್‌ಪಿಸಿಐ ಮಾಹಿತಿಯನ್ನು ತಿಳಿಸಿದೆ.
ಯುಪಿಐ ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆ
ಫೆಬ್ರವರಿ 1ರಿಂದ ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರುವ ಐಡಿಯ ವಹಿವಾಟುಗಳನ್ನು ಯುಪಿಐ ನಿಂದ ಸ್ವೀಕರಿಸಲಾಗುವುದು ಎಂದು ಎನ್‌ಪಿಸಿಐ ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಯುಪಿಐ ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲಿದೆ.
ಡಿಸೆಂಬರ್ 2024ರ ಅಂಕಿ ಅಂಶಗಳ ಪ್ರಕಾರ, ಯುಪಿಐ ಸ್ವೀಕರಿಸುವ ಮತ್ತು ಪಾವತಿಸುವ ವಹಿವಾಟುಗಳ ಸಂಖ್ಯೆ 16.73 ಬಿಲಿಯನ್ ವರೆಗೆ ತಲುಪಿದೆ.
ಇನ್ಮುಂದೆ 1,500 ರೂ. ಉಳಿಸಬಹುದು!
ಸಣ್ಣ ವ್ಯಾಪಾರಸ್ಥರು ಈವರೆಗೆ ಪ್ರತಿ ತಿಂಗಳು ಸೌಂಡ್ ಬಾಕ್ಸ್‌ಗಾಗಿ 125 ರೂಪಾಯಿ ವೆಚ್ಚ ಮಾಡುತ್ತಿದ್ದರು. ಜಿಯೋ ಸೌಂಡ್ ಪೇ (JioSoundPay) ಪ್ರಾರಂಭವು ಈ ಖರ್ಚಿಗೆ ಅಂತ್ಯವಾಡಿದೆ. ಇನ್ಮುಂದೆ ಜಿಯೋ ಭಾರತ್ (Jio Bharat) ಫೋನ್ ಬಳಕೆದಾರರು ಪ್ರತಿ ವರ್ಷ 1,500 ರೂ. ಉಳಿಸಲು ಸಾಧ್ಯವಾಗುತ್ತದೆ. ಈ ಫೀಚರ್ ವ್ಯಾಪಾರಿಗಳಿಗೆ ಸುಲಭ ಮತ್ತು ಕೈಗೆಟುಕುವ ಸೇವೆ ಒದಗಿಸುತ್ತದೆ. ಜಿಯೋನ ಈ ಸೇವೆ ಸಣ್ಣ ಅಂಗಡಿ ಮಾಲೀಕರು, ತರಕಾರಿ ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಗಳಿಗೆ ನೇರವಾಗಿ ಲಾಭವನ್ನು ನೀಡುತ್ತದೆ. ಏಕೆಂದರೆ ವ್ಯಾಪಾರಿಗಳು ಪಾವತಿಯನ್ನು ಸ್ವೀಕರಿಸಿದ ಬಳಿಕ ಕೂಡಲೇ ಆಡಿಯೋ ದೃಢೀಕರಣ ಪಡೆಯಬಹುದಾಗಿದೆ.
UPI ಬಳಕೆ ಅತಿ ಹೆಚ್ಚು
ವಾಟ್ಸಾಪ್ನ ಇಂಟರ್ಫೇಸ್ ಈಗಾಗಲೇ ಬಳಕೆದಾರರಿಗೆ ಸುಲಭ ಸಾಧನವಾಗಿದೆ. ಜನರು ಈಗ ಯಾವುದೇ ತೊಂದರೆಯಿಲ್ಲದೆ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರ ಮಾಡಬಹುದು. ವಾಟ್ಸಾಪ್ನ ಎಲ್ಲಾ ಬಳಕೆದಾರರು ಸುಲಭವಾಗಿ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಏಕೆಂದರೆ ಇದು UPI ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಸಂಖ್ಯೆಯನ್ನು ಮತ್ತಷ್ಟು ವೇಗವಾಗಿ ಹೆಚ್ಚಾಗುತ್ತದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications