ಡಿಜಿಟಲ್ ಪಾವತಿಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು.ಆಗಸ್ಟ್ 1, 2025 ರಿಂದ ಯುಪಿಐ (UPI) ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಲಿವೆ. ಗೂಗಲ್ ಪೇ, ಫೋನ್ ಪೇ, ಪಿಟಿಎಂನಂತಹ ಯುಪಿಐ ಆ್ಯಪ್‌ಗಳ ಮೂಲಕ ಹಣ ಪಾವತಿಸುವವರು ಈ ಹೊಸ ನಿಯಮಗಳನ್ನು ಪಾಲನೆ ಮಾಡಲೇಬೇಕು.
ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಏಪ್ರಿಲ್ ಮತ್ತು ಮೇ 2025 ರಲ್ಲಿ ಯುಪಿಐನಲ್ಲಿ ಸ್ವಲ್ಪ ಸಮಸ್ಯೆಗಳಾಗಿದ್ದವು. ಜನರು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದರು ಮತ್ತು ವಹಿವಾಟಿನ ಸ್ಥಿತಿಯನ್ನು ನೋಡುತ್ತಿದ್ದರು. ಇದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿ ವಹಿವಾಟುಗಳು ನಿಧಾನವಾಗುತ್ತಿದ್ದವು ಅಥವಾ ಫೇಲ್ ಆಗುತ್ತಿದ್ದವು. ಹಾಗಾಗಿ, ವ್ಯವಸ್ಥೆಯನ್ನು ಉತ್ತಮಗೊಳಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ.

ಹೊಸ ನಿಯಮಗಳ ಪ್ರಕಾರ, ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬಹುದು. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ನೋಡಬಹುದು. ಜೊತೆಗೆ, ಪ್ರತಿ 90 ಸೆಕೆಂಡ್‌ಗಳಲ್ಲಿ ಒಂದೇ ವಹಿವಾಟಿನ ಸ್ಥಿತಿಯನ್ನು 3 ಬಾರಿ ಮಾತ್ರ ನೋಡಲು ಸಾಧ್ಯ. Netflix, EMI, ಕರೆಂಟ್ ಬಿಲ್‌ನಂತಹ ಆಟೋ ಡೆಬಿಟ್ ಪಾವತಿಗಳು ಈಗ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ನಡೆಯಲಿವೆ.
ಆಟೋ ಪೇಮೆಂಟ್ ಮೇಲೆ ಪರಿಣಾಮ
ಗ್ರಾಹಕರಿಂದ ಆಟೋ ಪೇಮೆಂಟ್ ಮೂಲಕ ಹಣ ಪಡೆಯುವ ವ್ಯಾಪಾರಿಗಳು ಅಥವಾ ಕಂಪನಿಗಳು NPCI ಹೇಳಿದ ಸಮಯಕ್ಕೆ ಸರಿಯಾಗಿ ಪಾವತಿಗಲನ್ನು ಮಾಡಲಾಗುತ್ತದೆ.ಇದರಿಂದ ಪಾವತಿ ವ್ಯವಸ್ಥೆ ಇನ್ನಷ್ಟು ಉತ್ತಮವಾಗಲಿದೆ. ಆದರೆ, ಈ ಬದಲಾವಣೆಗಳಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಇಂದು ಯುಪಿಐ ಕೇವಲ ಒಂದು ಆ್ಯಪ್ ಅಲ್ಲ, ಇದು ಡಿಜಿಟಲ್ ಇಂಡಿಯಾದ ಮುಖ್ಯ ಭಾಗವಾಗಿದೆ. ಎಲ್ಲೆಡೆ ಯುಪಿಐ ಬಳಸಲಾಗುತ್ತಿದೆ. "ಭೈಯಾ, ನಾನು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಬೇಕಾ?" ಎಂಬ ಮಾತುಗಳು ಸಾಮಾನ್ಯವಾಗಿದೆ. ಯುಪಿಐ ಅನ್ನು ಇನ್ನಷ್ಟು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸಲು NPCI ಈ ಕ್ರಮ ಕೈಗೊಂಡಿದೆ.
ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿರುವುದರಿಂದ, ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಈ ರೀತಿಯ ಬದಲಾವಣೆಗಳು ಅಗತ್ಯ. ಈ ನಿಯಮಗಳಿಂದ ಪ್ರತಿಯೊಬ್ಬರೂ ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಪಾವತಿ ಮಾಡಲು ಹೆಚ್ಚಿನ ಸಹಾಯವಾಗುತ್ತದೆ.
ಇತ್ತೀಚಿಗೆ ಹಣಕಾಸು ಪಾವತಿ ವ್ಯವಸ್ಥೆಯಲ್ಲೇ ದೊಡ್ಡ ಕ್ರಾಂತಿಯನ್ನು ಸೃಷ್ಟಿ ಮಾಡುತ್ತಿರುವ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಜಾಗತಿಕವಾಗಿ ವೀಸಾವನ್ನು ಮೀರಿ ದಾಖಲೆಯನ್ನು ಸೃಷ್ಟಿಯನ್ನು ಮಾಡಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಇತ್ತೀಚಿನ ವರದಿಯ ಪ್ರಕಾರ, ಜಾಗತಿಕವಾಗಿ ವೀಸಾವನ್ನು ಮೀರಿಸಿದೆ. ಚಿಲ್ಲರೆ ಡಿಜಿಟಲ್ ಪಾವತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಪಿಐ ಜಾಗತಿಕವಾಗಿ ವೀಸಾ, ಮಾಸ್ಟರ್ ಕಾರ್ಡ್ ಕಂಪನಿಗಳ ಪಾರುಪತ್ಯ ಅಂತ್ಯವಾಗುವಷ್ಟರ ಮಟ್ಟಿಗೆ ಯುಪಿಐ ಪಾವತಿಗಳು ಹೆಚ್ಚಾಗಿವೆ.


Click it and Unblock the Notifications