ಡಿಜಿಟಲ್ ಪಾವತಿಯಲ್ಲಿ ಪವಾಡ..! ದೇಶಾದ್ಯಂತ ಯುಪಿಐ ಪಾವತಿಗಳು ಪ್ರತಿ ತಿಂಗಳು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇವೆ. ಕಳೆದ ಮೇ ತಿಂಗಳಲ್ಲಿ 18.68 ಬಿಲಿಯನ್ ವಹಿವಾಟುಗಳು ನಡೆದಿವೆ ಎಂದು ರಾಷ್ಟ್ರೀಯ ಪಾವತಿ ನಿಗಮ ಬಹಿರಂಗಪಡಿಸಿದೆ. ಇವುಗಳ ಮೌಲ್ಯ 25.14 ಲಕ್ಷ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ದೇಶಾದ್ಯಂತ ಡಿಜಿಟಲ್ ಪಾವತಿಗಳು ಎಷ್ಟು ಯಶಸ್ವಿಯಾಗಿವೆ ಎಂಬುದಕ್ಕೆ ಇದು ಒಂದು ದೊಡ್ಡ ಉದಾಹರಣೆಯಾಗಿದೆ ಎಂದು ಅದು ಹೇಳಿದೆ. ನೋಟು ಅಮಾನೀಕರಣದ ನಂತರ ಈ ರೀತಿಯ ಡಿಜಿಟಲ್ ಪಾವತಿಗಳು ಗಮನಾರ್ಹವಾಗಿ ಹೆಚ್ಚಾಗಿದೆ.
ಹೌದು, ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ಪಾವತಿಯಲ್ಲಿ ಯುಪಿಐ ಹೊಸ ದಾಖಲೆಯನ್ನು ಮಾಡಿದೆ. ಮೇ ತಿಂಗಳಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ದಾಖಲೆಯ ಗರಿಷ್ಠ 25.14 ಲಕ್ಷ ಕೋಟಿಗಳಷ್ಟು ವಹಿವಾಟು ನಡೆದಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮಾಹಿತಿಯನ್ನು ತಿಳಿಸಿದೆ.

ಮೇ 2025 ರಲ್ಲಿ, ದೇಶಾದ್ಯಂತ UPI ಮೂಲಕ ದಾಖಲೆಯ 18.68 ಬಿಲಿಯನ್ (1,868 ಕೋಟಿ) ವಹಿವಾಟುಗಳು ನಡೆದಿವೆ. ಇದು ಏಪ್ರಿಲ್ 2025 ಕ್ಕಿಂತ ಶೇ. 4 ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ ಈ ಅಂಕಿ ಅಂಶವು 17.89 ಬಿಲಿಯನ್ ಆಗಿತ್ತು.ಆರ್ಥಿಕ ದೃಷ್ಟಿಕೋನದಿಂದ, ಮೇ ತಿಂಗಳಲ್ಲಿ UPI ವಹಿವಾಟುಗಳ ಒಟ್ಟು ಮೌಲ್ಯ 25.14 ಲಕ್ಷ ಕೋಟಿ ತಲುಪಿದ್ದರೆ, ಏಪ್ರಿಲ್‌ನಲ್ಲಿ 23.95 ಲಕ್ಷ ಕೋಟಿ ಇತ್ತು.
ವಾರ್ಷಿಕವಾಗಿ ಶೇ. 33 ರಷ್ಟು ಬೆಳವಣಿಗೆ
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ದತ್ತಾಂಶದ ಪ್ರಕಾರ ವಾಹಿವಾಟುವಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 33 ರಷ್ಟು ಹೆಚ್ಚಳವನ್ನು ದಾಖಲೆಯನ್ನು ಮಾಡಿದೆ.ಇದಲ್ಲದೆ, ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ವಹಿವಾಟು ಮೌಲ್ಯದಲ್ಲಿ ಸುಮಾರು ಶೇ. 14 ರಷ್ಟು ಹೆಚ್ಚಳವಾಗಿದೆ. ಮೇ 2025 ರಲ್ಲಿ,ದಿನಕ್ಕೆ ಸರಾಸರಿ 602 ಮಿಲಿಯನ್ ವಹಿವಾಟುಗಳು ದಾಖಲಾಗಿದೆ. ಸರಾಸರಿ ದೈನಂದಿನ ಮೌಲ್ಯ 81,106 ಕೋಟಿ ಇದೆ.
ಭಾರತದ ಪಾವತಿ ವ್ಯವಸ್ಥೆಯನ್ನು UPI ಹೇಗೆ ಬದಲಾಗಿತ್ತು..?
ಯುಪಿಐ 2016 ರಲ್ಲಿ ಪ್ರಾರಂಭವಾಗಿನಿಂದಲ್ಲೇ ಯುಪಿಐ ವಹಿವಾಟುಗಳು ನೋಟು ಅಮಾನತು ನಂತರ ವೇಗವನ್ನು ಪಡೆದುಕೊಂಡಿದೆ. ಅದರಲ್ಲೂ ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಅಪ್ಲಿಕೇಶನ್‌ಗಳ ವ್ಯಾಪ್ತಿ ಹೆಚ್ಚುತ್ತಿರುವಂತೆ ಡಿಜಿಟಲ್ ಪಾವತಿಗಳು ವಿಸ್ತರಿಸಿದೆ. ಇದು ಸಣ್ಣ ಅಂಗಡಿಯವರಿಂದ ಹಿಡಿದು ಸಾಮಾನ್ಯ ಗ್ರಾಹಕರು ಎಲ್ಲರೂ ಕೂಡ ಯುಪಿಐ ಪ್ರಯೋಜನವನ್ನು ಪಡೆದುಕೊರ್ಲಳುತ್ತಿದ್ದಾರೆ. ಇದರಿಂದ ನಗದು ವಹಿವಾಟುಗಳು ಕಡಿಮೆಯಾಗುತ್ತೇವೆ.
ಯುಪಿಐ ವಹಿವಾಟು ವ್ಯವಸ್ಥೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. 2028-29ರ ಆರ್ಥಿಕ ವರ್ಷದ ವೇಳೆಗೆ ಯುಪಿಐ ಅನ್ನು 20 ದೇಶಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಆರ್‌ಬಿಐ ಕೂಡ ಹೇಳಿತ್ತು.
ಏಪ್ರಿಲ್ ತಿಂಗಳಲ್ಲಿ ಯುಪಿಐ ವಾಹಿವಾಟುವಿನಲ್ಲಿಒಟ್ಟು 1,789.3 ಕೋಟಿ ವಹಿವಾಟುಗಳನ್ನು ನಡೆಸಿದೆ.
ಈಗಾಗಲೇ ಭಾರತೀಯ ಯುಪಿಐ ಅಪ್ಲಿಕೇಶನ್‌ಗಳನ್ನು ಪ್ರಸ್ತುತ ಭೂತಾನ್, ಫ್ರಾನ್ಸ್, ನೇಪಾಳ, ಮಾರಿಷಸ್, ಸಿಂಗಾಪುರ, ಶ್ರೀಲಂಕಾ ಮತ್ತು ಯುಎಇ ದೇಶಗಳಲ್ಲಿ ಸ್ವೀಕರಿಸಲಾಗುತ್ತಿದೆ. ಇದು ಭಾರತೀಯ ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಉದ್ಯಮಿಗಳು ವಿದೇಶದಲ್ಲಿ ಪಾವತಿಗಳನ್ನು ಮಾಡಲು ಸುಲಭವಾಗಿದೆ.
UPI ವಹಿವಾಟುಗಳು ಮತ್ತಷ್ಟು ವೇಗ
ಜೂನ್ 16 ರಿಂದ ಯುಪಿಐ ವಹಿವಾಟುಗಳು ವೇಗಗೊಳ್ಳಲಿವೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮಾಹಿತಿಯನ್ನು ತಿಳಿಸಿದೆ.ಕ್ರೆಡಿಟ್/ಡೆಬಿಟ್ ವಹಿವಾಟುಗಳು ಈಗ 30 ಸೆಕೆಂಡುಗಳ ಬದಲು 15 ಸೆಕೆಂಡುಗಳಲ್ಲಿ ಪೂರ್ಣಗೊಳ್ಳಲಿವೆ. ಅಲ್ಲದೆ, ವಹಿವಾಟಿನ ಸ್ಥಿತಿ, ವಹಿವಾಟು ಹಿಮ್ಮುಖ ಮತ್ತು ವಿಳಾಸ ಮೌಲ್ವಿಕರಣ ಸಮಯವನ್ನು ಸಹ 30 ಸೆಕೆಂಡುಗಳಿಂದ 10 ಸೆಕೆಂಡುಗಳಿಗೆ ಇಳಿಸಲಾಗುವುದು. ಇನ್ನೂ ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡಲು ಎನ್‌ಪಿಸಿಐ ಫೋನ್‌ಪೇ, ಪೇಟಿಎಂ ಮತ್ತು ಬ್ಯಾಂಕ್‌ಗಳಿಗೆ ಆದೇಶಿಸಿದೆ.
NPCI ಹೊರಡಿಸಿದ ಸುತ್ತೋಲೆಯ ಪ್ರಕಾರ, ವಿನಂತಿ ಪಾವತಿ, ಪ್ರತಿಕ್ರಿಯೆ ಪಾವತಿ (ಡೆಬಿಟ್ ಮತ್ತು ಕ್ರೆಡಿಟ್ ಅನ್ನು ಒಳಗೊಂಡಂತೆ) ಮತ್ತು ವಹಿವಾಟು ಸ್ಥಿತಿಯನ್ನು ಪರಿಶೀಲಿಸಿದಂತಹ ಸಾಮಾನ್ಯವಾಗಿ ಬಳಸುವ UPI API ಗಳ ಪ್ರತಿಕ್ರಿಯೆ ಸಮಯವನ್ನು ಕ್ರಮವಾಗಿ 30 ಸೆಕೆಂಡುಗಳಿಂದ 15 ಸೆಕೆಂಡುಗಳು ಮತ್ತು 10 ಸೆಕೆಂಡುಗಳಿಗೆ ಇಳಿಸಲಾಗಿದೆ.


Click it and Unblock the Notifications