ಯುಪಿಐ ಬಳಕೆದಾರರು ಈ ಸುದ್ದಿ ತಪ್ಪದೇ ನೋಡಬೇಕು. ನಿಮಗಾಗಿ ಒಳ್ಳೆಯ ಸುದ್ದಿಯನ್ನು ತಂದಿದ್ದೇವೆ. ಇದೇ ಜೂನ್ 30 ರಿಂದ ಹೊಸ ನಿಯಮಗಳು ಬರಲಿವೆ. ಹೌದು, ಗೂಗಲ್ ಪೇ (Google Pay), ಪೇಟಿಎಂ (Paytm), ಫೋನ್ ಪೇ (PhonePe), ಭೀಮ್ (BHIM) ಗ್ರಾಹಕರು ಇದನ್ನು ತಿಳಿದುಕೊಳ್ಳಲೇಬೇಕು. ತಪ್ಪು ವರ್ಗಾವಣೆಗಳನ್ನು ತಡೆಗಟ್ಟಲು NPCI ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ಬರಲು ಮುಂದಾಗಿದೆ.
ಇದೀಗ UPI ಮೂಲಕ ಪಾವತಿ ಮಾಡುವ ನಿಯಮಗಳು ಬದಲಾಗುತ್ತಿವೆ. ಡಿಜಿಟಲ್ ಪಾವತಿಗಳನ್ನು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸಲು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) UPI ಅಂದರೆ ಏಕೀಕೃತ ಪಾವತಿ ಇಂಟರ್ಫೇಸ್ ವಹಿವಾಟುಗಳಿಗೆ ಹೊಸ ನಿಯಮವನ್ನು ಹೊರಡಿಸಿದೆ. ಈ ನಿಯಮ ಜೂನ್ 30, 2025 ರಿಂದ ಜಾರಿಗೆ ಬರಲಿದೆ.

ಇದರ ಅಡಿಯಲ್ಲಿ, ಈಗ ಯಾರಿಗಾದರೂ ಹಣವನ್ನು ಕಳುಹಿಸುವಾಗ, ಸ್ವೀಕರಿಸುವವರ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ನಿಜವಾದ ಹೆಸರು ಅಂದರೆ ಹಣವನ್ನು ತೆಗೆದುಕೊಳ್ಳುವ ವ್ಯಕ್ತಿ ಮಾತ್ರ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀವು ಹಣವನ್ನು ಯಾರಿಗೆ ಕಳುಹಿಸುತ್ತಿದ್ದೀರಾ ಎಮದು ಖಚಿತ ಮಾಡಿಕೊಂಡು ಹಣವನ್ನು ಕಳುಹಿಸಬಹುದು.
UPI ನಿಯಮದಲ್ಲಿ ಏನು ಬದಲಾಗುತ್ತದೆ?
ನಾವು ಇಲ್ಲಿಯವರೆಗೂ UPI ಮೂಲಕ ಯಾರಿಗಾದರೂ ಹಣವನ್ನು ಕಳುಹಿದುವಾಗ ಗೂಲಲ್ ಪೇ, ಫೋನ್ ಪೇ,ಪೇಟಿಎಂ ಅಥವಾ BHIM ಅಪ್ಲಿಕೇಶನ್ ಬಳಕೆಯನ್ನು ಮಾಡಿಕೊಂಡು ನಮ್ಮ ಸಂಪರ್ಕದಲ್ಲಿ ನಾವು ಉಳಿಸಿದ ಅದೇ ವ್ಯಕ್ತಿಯ ಹೆಸರನ್ನು ನೋಡುತ್ತೇವೆ. ಇದು ವಂಚನೆಯ ಸಾಧ್ಯತೆಯನ್ನು ಹೆಚ್ಚಿಸಿತು, ಏಕೆಂದರೆ ವಂಚಕರು ನಕಲಿ ಅಥವಾ ದಾರಿತಪ್ಪಿಸುವ ಹೆಸರುಗಳೊಂದಿಗೆ QR ಕೋಡ್‌ಗಳು ಅಥವಾ UPI ಐಡಿಗಳನ್ನು ಕ್ರಿಯೇಟ್ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸಬಹುದು.
ಹೊಸ ನಿಯಮದ ಪ್ರಕಾರ, ಈಗ ಪ್ರತಿ ವಹಿವಾಟಿನ ಮೊದಲು, ಬ್ಯಾಂಕ್ ದಾಖಲೆಗಳಲ್ಲಿ ನೋಂದಾಯಿಸಲಾದ ವ್ಯಕ್ತಿಯ ನಿಜವಾದ ಹೆಸರು ಅಪ್ಲಿಕೇಶನ್‌ನಲ್ಲಿ ಸ್ವಯಂಚಾಲಿತವಾಗಿ ನೋಡಲು ಸಿಗುತ್ತದೆ.
ಈ ನಿಯಮ ಎಲ್ಲಿ ಅನ್ವಯಿಸುತ್ತದೆ?
ಈ ನಿಯಮವು ಎರಡು ರೀತಿಯ UPI ವಹಿವಾಟುಗಳಿಗೆ ಅನ್ವಯಿಸುತ್ತದೆ.
- P2P (ವ್ಯಕ್ತಿಯಿಂದ ವ್ಯಕ್ತಿಗೆ): ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಹಣವನ್ನು ಕಳುಹಿಸಿದಾಗ.
- P2M (ವ್ಯಕ್ತಿಯಿಂದ ವ್ಯಾಪಾರಿಗೆ): ನೀವು ಅಂಗಡಿ, ಕೆಫೆ ಅಥವಾ ವ್ಯಾಪಾರಿಗೆ ಪಾವತಿ ಮಾಡಿದಾಗ.
ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೂ, ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೂ ಅಥವಾ UPI ID ಬಳಸಿದರೂ ಪ್ರತಿಯೊಂದು ಸಂದರ್ಭದಲ್ಲೂ ಈಗ ನಿಜವಾದ ಹೆಸರು ನಿಮ್ಮಗೆ ತೋರಿಸುತ್ತದೆ.
ಇದರಿಂದ ಏನು ಪ್ರಯೋಜನ..?
ವಂಚನೆಯ ಮೇಲೆ ನಿಯಂತ್ರಣ: ಹೊಸ ನಿಯಮದ ಜಾರಿಯಿಂದಾಗಿ ಈಗ ಹಣವನ್ನು ಕಳುಹಿಸುವ ಮೊದಲು, ಎದುರಿಗಿರುವ ವ್ಯಕ್ತಿ ಸರಿಯಾದ ವ್ಯಕ್ತಿಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಹೆಚ್ಚು ಸುರಕ್ಷಿತ: ಈ ವ್ಯವಸ್ಥೆಯು ಬಳಕೆದಾರರಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ತಪ್ಪು ವ್ಯಕ್ತಿಗೆ ಹಣವನ್ನು ಕಳುಹಿಸುವ ತಪ್ಪನ್ನು ಕಡಿಮೆ ಮಾಡುತ್ತದೆ.
ತಪ್ಪು ವಹಿವಾಟುಗಳಿಗೆ ಬ್ರೇಕ್ : ಒಂದೇ ರೀತಿಯ ಹೆಸರುಗಳಿಂದ ಉಂಟಾಗುವ ದೋಷಗಳನ್ನು ಇದು ತಡೆಯುತ್ತದೆ.
ಬಳಕೆದಾರರು ಏನು ಮಾಡಬೇಕು?
ಪ್ರತಿ ವಹಿವಾಟಿನ ಮೊದಲು, ಪರಿಶೀಲಿಸಲಾಗುತ್ತಿರುವ ಹೆಸರನ್ನು ಎಚ್ಚರಿಕೆಯಿಂದ ಓದಿ. ಹೆಸರು ಪರಿಚಯವಿಲ್ಲದ ಅಥವಾ ಅನುಮಾನಾಸ್ಪದವಾಗಿ ಕಂಡುಬಂದರೆ, ಪಾವತಿ ಮಾಡಬೇಡಿ. ಯಾವುದೇ ಅಪರಿಚಿತ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದನ್ನು ತಪ್ಪಿಸಿ ಮತ್ತು ಯಾವುದೇ ಸಮಸ್ಯೆ ಇದ್ದಲ್ಲಿ, ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಪಾವತಿ ಅಪ್ಲಿಕೇಶನ್‌ನ ಸಹಾಯವಾಣಿಗೆ ಮಾಹಿತಿಯನ್ನು ತಿಳಿಸಿ.
ಈ ಹೊಸ ನಿಯಮಗಳಿಂದ ಡಿಜಿಟಲ್ ವಹಿವಾಟುವಿನಲ್ಲಿ ಕಾಂತ್ರಿಕಾರಒಕ ಬದಲಾವಣೆಗಳು ಆಗುತ್ತಿವೆ. ಹಣದ ವಂಚನೆಗಳಿಗೆ ಇದರಿಂದ ಬ್ರೇಕ್ ಬೀಳುತ್ತದೆ.


Click it and Unblock the Notifications