ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾವೈರಸ್ ಸೋಂಕು ಪ್ರಕರಣಗಳನ್ನು ಹೊಂದಿರುವ ಅಮೆರಿಕಾವು ತಾತ್ಕಾಲಿಕವಾಗಿ ವಲಸೆಯನ್ನು ನಿಷೇಧಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ಅಮೆರಿಕವು ತಾತ್ಕಾಲಿಕವಾಗಿ ವಲಸೆಯನ್ನು ಸ್ಥಗಿತಗೊಳಿಸಲು ಸಜ್ಜಾಗಿರುವುದರ ಜೊತೆಗೆ, ಲಾಕ್‌ಡೌನ್ ಕೊನೆಗೊಳಿಸಬೇಕು ಎಂದು ಕೋಪಗೊಂಡು ಬೀದಿಗಿಳಿಯುತ್ತಿರುವ ಅಮೆರಿಕನ್ನರು ಹೋರಾಟ ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

"ಅದೃಶ್ಯ ಶತ್ರುಗಳ ದಾಳಿಯ ಬೆಳಕಿನಲ್ಲಿ, ಹಾಗೆಯೇ ನಮ್ಮ ಗ್ರೇಟ್ ಅಮೆರಿಕನ್ ನಾಗರಿಕರ ಉದ್ಯೋಗಗಳನ್ನು ರಕ್ಷಿಸುವ ಅಗತ್ಯತೆಯೊಂದಿಗೆ, ಅಮೆರಿಕಾವು ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕಾರ್ಯಕಾರಿ ಆದೇಶಕ್ಕೆ ನಾನು ಸಹಿ ಹಾಕುತ್ತೇನೆ! (Sic)," ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಜೊತೆಗೆ ದೇಶದಲ್ಲಿ ಲಾಕ್‌ಡೌನ್ ವಿರೋಧಿ ಪ್ರತಿಭಟನೆಗಳು ದೇಶದ ಕೆಲವು ಭಾಗಗಳಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಕೊರೊನಾವೈರಸ್ ವಿಶ್ವದಲ್ಲಿ ಎರಡನೇ ಮಹಾ ಆರ್ಥಿಕ ಕುಸಿತದ ಭಯವನ್ನು ಹುಟ್ಟುಹಾಕಿದ. ವಿಶ್ವದಾದ್ಯಂತ ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಏಕೆಂದರೆ ಅನೇಕ ರಾಷ್ಟ್ರಗಳ ಆರ್ಥಿಕತೆಗಳು ಸ್ಥಗಿತಗೊಳ್ಳುತ್ತವೆ. ವೈರಸ್ ಹರಡುವುದನ್ನು ನಿಧಾನಗೊಳಿಸಲು ವ್ಯಾಪಕವಾದ ಲಾಕ್‌ಡೌನ್‌ಗಳನ್ನು ಜಾರಿಗೆ ತಂದ ನಂತರ ಕನಿಷ್ಠ 22 ಮಿಲಿಯನ್(2.2 ಕೋಟಿ) ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಮತ್ತು ದೇಶದ ಕೆಲವು ಭಾಗಗಳಲ್ಲಿ ನಿರುದ್ಯೋಗ ಪ್ರಮಾಣ ಬೆಳೆಯುತ್ತಿದೆ.
ಭಾರತದಿಂದ ಅಮೆರಿಕಾಕ್ಕೆ ತೆರಳಿದವರು ಹೆಚ್-1ಬಿ ವೀಸಾ ವಲಸೆ ರಹಿತ ವೀಸಾ ಆಗಿದೆ. ಈ ನಿರ್ಬಂಧದಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಯಾಣದ ನಿರ್ಬಂಧಗಳ ಜೊತೆಗೆ ಈಗಾಗಲೇ ಹೊಸ H-1B ವೀಸಾಗಳನ್ನು ನೀಡಿರುವುದರ ಮೇಲೆ ಪರಿಣಾಮ ಬೀರುತ್ತದೆ.


Click it and Unblock the Notifications