ಭಾರತವು ಕನಿಷ್ಟ 5-6 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಕೃಷಿ ವಸ್ತುಗಳನ್ನು ಖರೀದಿಸಬೇಕೆಂದು ಅಮೆರಿಕಾ ಬಯಸಿರುವುದಾಗಿ ಹಾಗೂ ಆ ಕುರಿತು ಭಾರತದಿಂದ ಸಕಾರಾತ್ಮಕ ಸ್ಪಂದನೆಗೆ ಕಾಯುತ್ತಿದೆ ಎಂದು ವರದಿಯಾಗಿದೆ.
ಅಮೆರಿಕಾ ಪ್ರಮುಖ ವ್ಯಾಪಾರ ರಿಯಾಯಿತಿಗಳನ್ನು ಪುನಃ ಸ್ಥಾಪಿಸಲು ಮತ್ತು ವ್ಯಾಪಕವಾದ ಒಪ್ಪಂದವನ್ನು ಮಾಡಿಕೊಳ್ಳಲು ಎದುರು ನೋಡುತ್ತಿದ್ದು, ಅಮೆರಿಕಾದ ಕೃಷಿ ವಸ್ತುಗಳನ್ನು ಭಾರತವು ಖರೀದಿಸಲು ಬಯಸಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿದೆ.
ಫೆಬ್ರವರಿಯಲ್ಲಿ ಭಾರತಕ್ಕೆ ಬರಲಿರುವ ಡೊನಾಲ್ಡ್ ಟ್ರಂಪ್
ಫೆಬ್ರವರಿ ತಿಂಗಳಿನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿಯನ್ನು ನವದೆಹಲಿಯಲ್ಲಿ ಭೇಟಿಗೂ ಮುನ್ನ ಎರಡೂ ಕಡೆಯ ಸಮಾಲೋಚಕರು ವ್ಯಾಪಾರ ಒಪ್ಪಂದಕ್ಕೆ ಷರತ್ತುಗಳನ್ನು ಹಾಕುತ್ತಿದ್ದಾರೆ. ಜೊತೆಗೆ ಉಭಯ ರಾಷ್ಟ್ರಗಳು ಸುಂಕಗಳ ಕಡಿತಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಿದೆ.
ಅಮೆರಿಕಾದ ಎರಡು ಡಜನ್ ಉತ್ಪನ್ನಗಳಿಗೆ ಸುಂಕ ವಿಧಿಸಿದ್ದ ಭಾರತ
ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ವೇಳೆಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರ ಜೊತೆಗೆ ಭಾರತ ಈ ಹಿಂದೆ ಹೆಚ್ಚಿಸಿರುವ ಅಮೆರಿಕಾ ಕೃಷಿ ಸರಕುಗಳ ಮೇಲಿನ ಸುಂಕವನ್ನು ತಗ್ಗಿಸುವ ಯೋಜನೆಯಲ್ಲಿದೆ. ಇದರಲ್ಲಿ ಬಾದಾಮಿ, ವಾಲ್‌ನಟ್ಸ್, ಸೇಬಿನಂತಹ ಕೆಲವು ಕೃಷಿ ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಮೂಲಗಳು ಹೇಳಲಾಗುತ್ತಿದೆ.
ಅಮೆರಿಕಾದ ಎರಡು ಡಜನ್ ಉತ್ಪನ್ನಗಳಿಗೆ ಸುಂಕ ವಿಧಿಸಿದ್ದ ಭಾರತ
ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಕಳೆದ ವರ್ಷದ ಆದ್ಯತಾ ವ್ಯಾಪಾರ ನೀತಿಯಡಿ (ಜಿಎಸ್‌ಪಿ) ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು. ಭಾರತ ಅಮೆರಿಕಕ್ಕೆ 560 ಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಆದರೆ ವಾರ್ಷಿಕವಾಗಿ 19 ಕೋಟಿ ಡಾಲರ್ ಸರಕುಗಳಿಗೆ ಮಾತ್ರ ಸುಂಕ ವಿನಾಯಿತಿ ದೊರೆಯುತ್ತಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತ ಎರಡು ಡಜನ್‌ಗಿಂತಲೂ ಹೆಚ್ಚು ಯುಎಸ್ ಉತ್ಪನ್ನಗಳಿಗೆ ಹೆಚ್ಚಿನ ಸುಂಕವನ್ನು ವಿಧಿಸಿತು.
ಸೀಮಿತ ವ್ಯಾಪಾರ ಒಪ್ಪಂದಕ್ಕೆ ಹೆಣಗಾಡಿದ್ದ ಉಭಯ ರಾಷ್ಟ್ರಗಳು
ಎರಡೂ ಸರ್ಕಾರಗಳು ಕಳೆದ ವರ್ಷ ಸೀಮಿತ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಆಶಿಸಿದ್ದವು, ಆದರೆ ಒಪ್ಪಂದವನ್ನು ತಲುಪಲು ಹೆಣಗಾಡಿದವು. ಸದ್ಯ ಅಮೆರಿಕವು ಮತ್ತು ಭಾರತ ವ್ಯಾಪಾರ ನೀತಿಗಳನ್ನು ಪುನಃ ಸ್ಥಾಪಿಸಲು ಮನಸ್ಸು ಮಾಡಿದ್ದು, ಭಾರತದ ವಾಣಿಜ್ಯ ಸಚಿವಾಲಯ ಮತ್ತು ನವದೆಹಲಿಯ ಅಮೆರಿಕಾ ರಾಯಭಾರ ಕಚೇರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications