ಭಾರತೀಯ ರೈಲ್ವೇ ತಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಈಗಾಗಲೇ ದೇಶದಾದ್ಯಂತ ಭಾರೀ ಜನಪ್ರಿಯತೆ ಪಡೆದಿದೆ. ತನ್ನ ದಕ್ಷ ಮತ್ತು ವೇಗದ ಸೇವೆಯಿಂದಾಗಿ ಭಾರೀ ಬೇಡಿಕೆಯನ್ನು ಹೊಂದಿರುವ ವಂದೇ ಭಾರತ್, ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಪ್ರಯಾಣ ಆರಂಭಿಸುವ ನಿರೀಕ್ಷೆಯಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat Express), ಭಾರತದಾದ್ಯಂತ ಸುಂದರವಾದ ಮತ್ತು ಆಕರ್ಷಕ ದೃಶ್ಯಗಳನ್ನು ನೀಡುವ ಮಾರ್ಗಗಳಲ್ಲೂ ಸಂಚರಿಸುತ್ತದೆ. ಆ ಮಾರ್ಗಗಳ ಪಟ್ಟಿ ಇಲ್ಲಿದೆ ಓದಿ.

ದೊಡ್ದ ಕಿಟಕಿಗಳೊಂದಿಗೆ ವಿನ್ಯಾಸಗೊಂಡಿರುವ, ಪ್ರಯಾಣಿಕರಿಗೆ ಸೌಕರ್ಯದ ಜೊತೆಗೆ, ಪ್ರಕೃತಿ ಸೌಂದರ್ಯವನ್ನು ಸಹ ಒಟ್ಟಿಗೆ ಆನಂದಿಸುವ ಅವಕಾಶ ಈ ವಂದೇ ಭಾರತ್ ರೈಲುಗಳು ನೀಡುತ್ತದೆ. ಈಗಾಗಲೇ ಭಾರತದಲ್ಲಿ 82 ಮಾರ್ಗಗಳಲ್ಲಿ 164 ವಂದೇ ಭಾರತ್ ರೈಲಗಳು ಕಾರ್ಯ ನಿರ್ವಹಿಸುತ್ತಿದೆ.
ಸುಂದರ ನೋಟವನ್ನು ನೀಡುವ ವಂದೇ ಭಾರತ್ ರೈಲು ಮಾರ್ಗಗಳು:
ನವದೆಹಲಿ-ಡೆಹ್ರಾಡೂನ್ ವಂದೇ ಭಾರತ್ ರೈಲು:
ಹಿಮಾಲಯದ ಪ್ರವೇಶ ದ್ವಾರ ಎಂದೇ ಕರೆಯಲ್ಪಡುವ ಡೆಹ್ರಾಡೂನ್‌ಗೆ ಹೋಗುವ ಈ ಮಾರ್ಗ, ಶಿವಾಲಿಕ್ ಬೆಟ್ಟಗಳನ್ನು ನೋಡುವಂತೆ ಮಾಡುತ್ತದೆ. ದಾರಿ ಮಧ್ಯೆ ಹಿಮಾಲಯದ ಶಿಖರಗಳು ಕಾಣಸಿಗುತ್ತದೆ. ಹರಿದ್ವಾರದ ಬಳಿ ಕಾಡುಗಳು ಮತ್ತು ದೊಡ್ಡ ದೊಡ್ಡ ಪರ್ವತಗಳ ಅದ್ಭುತ ದೃಶ್ಯ ಕಣ್ಣಮುಂದೆ ಕಾಣುತ್ತದೆ. ಇನ್ನು ಇಲ್ಲಿ ದೂರ ಸುಮಾರು 300 ಕಿ.ಮೀಗಳಿದ್ದು, ಕೇವಲ 5 ಗಂಟೆಯ ಒಳಗೆ ಪ್ರಯಾಣಿಸಬಹುದು.
ಮುಂಬೈ ಸಿಎಸ್‌ಎಂಟಿ-ಕೊಲ್ಹಾಪುರ ವಂದೇ ಭಾರತ್:
ಈ ಮಾರ್ಗವೂ ಪಶ್ಚಿಮ ಘಟ್ಟಗಳ ನಡುವೆ ಸಾಗುತ್ತದೆ. ದೊಡ್ಡ ದೊಡ್ಡ ಬೆಟ್ಟಗಳು, ಹಚ್ಚ ಹಸಿರಾದ ಕಣಿವೆಗಳು, ಸುರಂಗ ಮಾರ್ಗಗಳು, ಬೆಟ್ಟಗಳ ನಡುವೆ ಅಡಗಿರುವ ಜಲಪಾಯಗಳು, ದಟ್ಟ ಕಾಡುಗಳು ಕಾಣ ಸಿಗುತ್ತವೆ. ಮಳೆಗಾಲದಲ್ಲಿ ಇವುಗಳೆಲ್ಲಾ ಅದ್ಭುತವಾಗಿ ಕಾಣಿಸುತ್ತದೆ. ಸಹ್ಯಾದ್ರಿ ಪರ್ವತಗಳ ನೋಟಗಳು, ಭತ್ತದ ಗದ್ದೆಗಳಿಂದ ಐತಿಹಾಸಿಕ ಕೋಟೆಗಳವೆಗೆ ಭಾರೀ ಅದ್ಭುತ ದೃಶ್ಯಗಳನ್ನು ಹೊಂದಿದೆ. ಸುಮಾರು 500 ಕಿ.ಮೀ ದೂರ ಹೊಂದಿದ್ದು, 8 ಗಂಟೆಗಳ ಪ್ರಯಾಣ ಸಮಯವನ್ನು ಹೊಂದಿದೆ.
ಮುಂಬೈ ಸಿಎಸ್‌ಎಂಟಿ-ಮಡಗಾಂಔ (ಗೋವಾ) ವಂದೇ ಭಾರತ್:
ಪಶ್ಚಿಮ ಘಟ್ಟಗಳ ಸಾಲು, ದಟ್ಟ ಕಾಡುಗಳು, ಸುರಂಗ ಮಾರ್ಗಗಳು, ಸೇತುವೆಗಳು ಮತ್ತು ಅರಬ್ಬೀ ಸಮುದ್ರದ ಕರಾವಳಿ ದೃಶ್ಯಗಳು ಸುಂದರ ನೋಟಗಳನ್ನು ಹೊಂದಿದೆ. ಇನ್ನು ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಕಾಣ ಸಿಗುವ ಜಲಪಾತಗಳು, ಹಚ್ಚ ಹಸಿರಿನಿಂದ ತುಂಬಿದ ಪರಿಸರಗಳು ವಂದೇ ಭಾರತ್ ಸಂಚಾರಕ್ಕೆ ಹೊಸ ನೋಟವನ್ನು ನೀಡಲಿದೆ.
ಚೆನ್ನೈ-ಮೈಸೂರು ವಂದೇ ಭಾರತ್:
ತಮಿಳುನಾಡು ಮತ್ತು ಕರ್ನಾಟಕ ಹಲವು ಪ್ರದೇಶಗಳ ಮೂಲಕ ಸಾಗಿ ಹೋಗುವ ಈ ಮಾರ್ಗವು ತೆಂಗಿನ ತೋಟಗಳು, ಭತ್ತ ತುಂಬಿದ ಗದ್ದೆಗಳು, ದೇವಾಲಯಗಳ ಗೋಪುರಗಳು, ಅದ್ಭುತ ನೋಟವನ್ನು ನೀಡುತ್ತದೆ. ಅಲ್ಲದೇ ಕರಾವಳಿ ಪ್ರದೇಶಗಳು ಮತ್ತು ಪ್ರವಾಸಿ ಸ್ಥಳಗಳನ್ನು ನೋಡಬಹುದು. ಅದರಲ್ಲೂ 502 ಕಿ.ಮೀ ದೂರವನ್ನು ಹೊಂದಿರುವ ಈ ಮಾರ್ಗ, 6 ಗಂಟೆ 50 ನಿಮಿಷಗಳಲ್ಲಿ ಪ್ರಯಾಣಿಸುತ್ತದೆ.


Click it and Unblock the Notifications