ವಂದೇ ಭಾರತ್ ರೈಲು (Vande Bharat Train) ದೇಶದಲ್ಲಿ ಹೈಸ್ಪೀಡ್ ರೈಲುಗಳಲ್ಲಿ ಒಂದಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಹಲವು ನಗರಗಳಲ್ಲಿ ವಿಸ್ತರಿಸಲಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಹೀಗೆ ಹಲವು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದೀಗ ಉತ್ತರ ಪ್ರದೇಶದ, ವಾರಣಾಸಿ ಪ್ರವಾಸಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪವಿತ್ರ ನಗರ ವಾರಣಾಸಿಗೆ ಇದೀಗ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಂಟ್ರಿ ಕೊಡಲಿದೆ. ವಂದೇ ಭಾರತ್‌ನ ಈ ಸೇವೆ ವಾರಣಾಸಿಯ (Varanasi) ಪ್ರಮುಖ ಟೂರಿಸಂ ನಗರಗಳನ್ನು ಸಂಪರ್ಕಿಸಲಿದೆ. ಹಾಗಿದ್ರೆ ವಾರಣಾಸಿ ವಂದೇ ಭಾರತ್ ರೈಲಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಖಜುರಾಹೋ ಮತ್ತು ವಾರಣಾಸಿ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶದಿಂದ ಉತ್ತರ ಪ್ರದೇಶದವರೆಗೆ ಪ್ರಮುಖ ಪ್ರವಾಸಿ ನಗರಗಳನ್ನು ಇದು ಸಂಪರ್ಕಿಸಲಿದ್ದು, ಇನ್ಮುಂದೆ ಈ ರೈಲಿನಿಂದಾಗಿ ಪ್ರವಾಸಿಗರಿಗೆ ಮತ್ತಷ್ಟು ಸಹಕಾರಿಯಾಗಲಿದೆ. ಇನ್ನು ಈ ಸೇವೆಯಿಂದಾಗಿ ಬುಂದೇಲ್‌ಖಂಡ್ ಪ್ರದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
ಭಾರತೀಯ ರೈಲ್ವೇ ಇತ್ತೀಚೆಗೆ ಖಜುರಾಹೋ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಘೋಷಿಸಿದೆ. ಈ ಸೆಮಿ-ಹೈ-ಸ್ಪೀಡ್ ರೈಲು ಐತಿಹಾಸಿಕ ಖಜುರಾಹೋ ನಗರವನ್ನು ಪವಿತ್ರ ವಾರಣಾಸಿಗೆ ಜೋಡಿಸಲಿದೆ. ಇದರಿಂದ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ರೈಲ್ವೆ ಸಚಿವಾಲಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದರೂ, ರೈಲು ಸೇವೆ ಪ್ರಾರಂಭದ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಜುರಾಹೋ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿ:
ರೈಲು ವಾರಣಾಸಿಯಿಂದ ಬೆಳಿಗ್ಗೆ 5:25ಕ್ಕೆ ಹೊರಟು ಮಧ್ಯಾಹ್ನ 1:10ಕ್ಕೆ ಖಜುರಾಹೋ ತಲುಪುತ್ತದೆ. ಇನ್ನು ಈ ಮಾರ್ಗದಲ್ಲಿ ವಿಂಧ್ಯಾಚಲ್, ಪ್ರಯಾಗ್‌ರಾಜ್, ಚಿತ್ರಕೂಟ ಧಾಮ್, ಬಂದಾ ಮತ್ತು ಮಹೋಬಾದಂತಹ ಪ್ರಮುಖ ನಗರಗಳಲ್ಲಿ ಸಾಗಿ ಹೋಗಲಿದೆ. ಮರಳಿ ಪ್ರಯಾಣಿಸುವಾಗ, ರೈಲು ಮಧ್ಯಾಹ್ನ 2:20ಕ್ಕೆ ಖಜುರಾಹೋದಿಂದ ಹೊರಟು ರಾತ್ರಿ 11 ಗಂಟೆಗೆ ವಾರಣಾಸಿಗೆ ಮುಟ್ಟಲಿದೆ.
ಬುಂದೇಲ್‌ಖಂಡ್ ಪ್ರದೇಶಕ್ಕೆ ಹೊಸ ಮೈಲಿಗಲ್ಲು:
ಈ ಹೊಸ ವಂದೇ ಭಾರತ್ ರೈಲು ಬುಂದೇಲ್‌ಖಂಡ್ ಪ್ರದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಲ್ಲದೇ ವಂದೇ ಭಾರತ್ ರೈಲು ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಸಂಪರ್ಕ ಸಾಧಿಸುವುದರಿಂದ ಅಲ್ಲಿನ ಪ್ರವಾಸಿ ಸ್ಥಳಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಪ್ರವಾಸಿಗರು, ಯಾತ್ರಾರ್ಥಿಗಳು ಮತ್ತು ಜರ್ನಲಿಸ್ಟ್‌ಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. ಈಗಾಗಲೇ ವಾರಣಾಸಿಯಿಂದ ಮೂರು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸೇವೆಯಿಂದ ಸ್ಥಳೀಯ ವ್ಯವಹಾರಗಳಿಗೂ ಹೊಸ ಅವಕಾಶಗಳು ಸಿಗಲಿದೆ ಎನ್ನಲಾಗಿದೆ.
ಮೂರು ರೈಲುಗಳ ವಿವರ:
ಎರಡು ವಂದೇ ಭಾರತ್ ರೈಲುಗಳು ವಾರಣಾಸಿ ಮತ್ತು ನವದೆಹಲಿ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿದೆ. ಒಂದು ರೈಲು ಬೆಳಿಗ್ಗೆ 6 ಗಂಟೆಗೆ ವಾರಣಾಸಿಯಿಂದ ಹೊರಟರೆ, ಮತ್ತೊಂದು ಮಧ್ಯಾಹ್ನ 3 ಗಂಟೆಗೆ ಹೊರಡುತ್ತದೆ. ಅದೇ ರೀತಿ ವಾರಣಾಸಿಯಿಂದ ರಾಂಚಿಗೆ ಇನ್ನೊಂದು ಸಂಜೆ 4 ಗಂಟೆ ಸುಮಾರಿಗೆ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ. ಇನ್ನು ಮುಂಬರುವ ಹೊಸ ಖಜುರಾಹೋ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರಣಾಸಿಯಿಂದ ಬೆಳಿಗ್ಗೆ 5:25ಕ್ಕೆ ಹೊರಡುತ್ತದೆ.


Click it and Unblock the Notifications