ವಂದೇ ಭಾರತ್ ರೈಲಿನ (Vande Bharat Train) ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ವೇಗ, ಸೌಲಭ್ಯ, ಟಿಕೆಟ್, ತಂತ್ರಜ್ಞಾನ, ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ವಂದೇ ಭಾರತ್, ಇದೀಗ ಮತ್ತೊಂದು ಪ್ರಮುಖ ಹೆಜ್ಜೆ ಇಡಲು ಸಜ್ಜಾಗಿದೆ. ಹೌದು, ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿತ್ತು. ಆದರೆ ರೈಲ್ವೆ ಮಂಡಳಿಯ ವಸತಿ ಮತ್ತು ಸುರಕ್ಷತೆಯ ಆತಂಕಗಳಿಂದಾಗಿ ಸ್ವಲ್ಪ ತಡವಾಗಿದೆ.

ಹಾಗಿದ್ರೆ ವಿಳಂಬಕ್ಕೆ ಕಾರಣಗಳೇನು?
ವಿನ್ಯಾಸ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ವಂದೇ ಭಾರತ್ ಸ್ಲೀಪರ್ ರೈಲಿನ ಆಗಮನಕ್ಕೆ ವಿಳಂಬವಾಯ್ತು ಎನ್ನಲಾಗಿದೆ. ಇನ್ನು ಇತ್ತೀಚೆ ರೈಲ್ವೆ ಮಂಡಳಿಯು ಪತ್ರವೊಂದರಲ್ಲಿ, ರೈಲಿನ ಒಳಾಂಗಣ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯಲ್ಲಿ ಕೆಲವು ಲೋಪಗಳು ಕಂಡು ಬಂದಿದೆ ಎಂದು ತಿಳಿಸಿತ್ತು. ಅದರಲ್ಲೂ ಬರ್ತ್‌ಗಳ ಬಳಿ ಚೂಪಾದ ಅಂಚುಗಳು, ಕಿಟಕಿ ಹ್ಯಾಂಡಲ್ ವಿನ್ಯಾಸದಲ್ಲಿನ ದೋಷ ಮತ್ತು ಬರ್ತ್ ಕನೆಕ್ಟರ್‌ಗಳ ನಡುವೆ ಧೂಳು ಸಂಗ್ರಹವಾಗುತ್ತಿರುವ ಸಮಸ್ಯೆಗಳನ್ನು ತೋರಿಸಿ, ವಿಳಂಬಕ್ಕೆ ಕಾರಣವನ್ನು ತಿಳಿಸಲಾಗಿದೆ.
ಈ ವಿಳಂಬಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ: BEML ಇನ್ನೂ ಎರಡನೇ ರೇಕ್‌ನ ಒಳಾಂಗಣವನ್ನು ಪೂರ್ಣಗೊಳಿಸಿಲ್ಲ ಎಂಬುದು ಒಂದು ಕಾರಣವಾದ್ರೆ, ಮತ್ತೊಂದು ರೈಲ್ವೆ ಮಂಡಳಿಯ ಸೂಚನೆಯ ನಂತರ, BEML ಮೊದಲ ರೇಕ್‌ನ ಅಪ್ಡೇಟೆಡ್ ಕೆಲಸಗಳನ್ನು ಮಾಡಬಹುದು. ಆದ್ದರಿಂದ ಈ ಎರಡೂ ರೇಕ್‌ಗಳು ಬಳಕೆಗೆ ಸಿದ್ಧವಾದ ನಂತರವೇ ಕಾರ್ಯಾಚರಣೆ ಆರಂಭವಾಗಬಹುದು ಎನ್ನಲಾಗಿದೆ.
ಸುರಕ್ಷತೆಗೆ ಒತ್ತು:
ಇದರ ಜೊತೆಗೆ, ರೈಲ್ವೆ ಸಚಿವಾಲಯವು ರೈಲಿನಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದೆ. ಹದಿನಾರು ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೈಲಿನ ಕಾರ್ಯಾಚರಣೆಗೆ ಸಚಿವಾಲಯ ಅನುಮತಿ ನೀಡಿದ್ದು, ಎಲ್ಲಾ ದೋಷಗಳನ್ನು ಸರಿಪಡಿಸಬೇಕು ಎಂಬ ಷರತ್ತನ್ನು ಕೂಡಾ ವಿಧಿಸಲಾಗಿದೆ. ರೈಲ್ವೆ ಸಚಿವಾಲಯವು ಸುರಕ್ಷತೆಗಾಗಿ ಹೆಚ್ಚು ಒತ್ತು ನೀಡಿದೆ. ಈ ಬಗ್ಗೆ ಸೂಚನೆ ನೀಡಿದ್ದು, ಕವಚ್ 4.0 ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸುವುದು, ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುವುದು, ಬ್ರೇಕಿಂಗ್ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸುವುದು, ಚಾಲಕ, ಗಾರ್ಡ್ ಹಾಗೂ ಸ್ಟೇಷನ್ ಮಾಸ್ಟರ್ ನಡುವೆ ವಿಶ್ವಾಸಾರ್ಹ ಸಂವಹನವನ್ನು ಖಚಿತಪಡಿಸಿಕೊಳ್ಳುವುದು ಕೂಡಾ ಇದರಲ್ಲಿ ಮುಖ್ಯವಾಗಿದೆ
ವೇಗದ ರೈಲು ಕೆಲವೇ ದಿನಗಳಲ್ಲಿ ಆಗಮನ
ಇನ್ನು ಹೊಸದಾಗಿ ಬರಲಿರುವ ಈ ವಂದೇ ಭಾರತ್ ರೈಲು, ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಅತಿ ವೇಗದ ವಿದ್ಯುತ್ ರೈಲಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ರೈಲಿನ ವಿನ್ಯಾಸಗಳು ವೈರಲ್ ಆಗಿದೆ.
ಆದ್ದರಿಂದ ಹೊಸ ಸ್ಲೀಪರ್ ವಂದೇ ಭಾರತ್ ರೈಲು ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ವರೆಗೆ ಅಕ್ಟೋಬರ್‌ನಲ್ಲಿ ಲಾಂಚ್ ಆಗುವ ನಿರೀಕ್ಷೆಯಿತ್ತು. ಆದ್ರೆ ಇದೀಗ ವಿಳಂಬದ ಕಾರಣ ಮುಂದಿನ ದಿನಾಂಕವನ್ನು ಪ್ರಕಟಿಸಿಲ್ಲ. ಆದ್ರೆ ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆಯಿದೆ. ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ, ಹೈಸ್ಪೀಡ್ ವಂದೇ ಭಾರತ್ ರೈಲಿನ ಆಗಮನಕ್ಕಾಗಿ ಹಲವು ಪ್ರಯಾಣಿಕರು ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications