ಭಾರತೀಯ ರೈಲ್ವೇ ಇಲಾಖೆ (Indian Railways) ಅನುಷ್ಠಾನಕ್ಕೆ ತಂದ ವಂದೇ ಭಾರತ್ ಸೇವೆ ಸದ್ಯ ಭಾರೀ ಬೇಡಿಕೆ ಹೊಂದಿದೆ. ಇದೀಗ ವಂದೇ ಭಾರತ್ ರೈಲು ಸೇವೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ರೈಲ್ವೇ ಇಲಾಖೆ ಸಜ್ಜಾಗಿದೆ. ಹೌದು, ಇನ್ನೇನು ಕೆಲವೇ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾಗಲಿದೆ. ಈಗಾಗಲೇ ಇದರ ಪ್ರಯಾಣ ಪರೀಕ್ಷೆ ಎಲ್ಲ ಮುಗಿದ್ದಿದ್ದು, ಇನ್ನೇನು ವಾಣಿಜ್ಯ ಸೇವೆಗೆ ಸಜ್ಜಾಗಿದೆ. ಇದೀಗ ಈ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ (Vande Bharat Sleeper Train Ticket Price) ಬಿಡುಗಡೆ ಮಾಡಲಾಗಿದೆ.

ಹೌದು, ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಕ್ಕೆ ಸಜ್ಜಾಗಿ ನಿಂತಿದೆ. ಪ್ರಯಾಣಿಕರು ಕೂಡಾ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ರೈಲ್ವೇ ಇಲಾಖೆ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.
ಯಾವಾಗ ಪ್ರಯಾಣ ಆರಂಭ?
ಭಾರತೀಯ ರೈಲ್ವೆಯು ಈ ತಿಂಗಳ ಅಂತ್ಯದ ವೇಳೆಗೆ ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಲಿದೆ. ಈ ರೈಲು ದೀರ್ಘ ಮತ್ತು ದೂರ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದ್ದು, ಈಶಾನ್ಯ ಮತ್ತು ಪೂರ್ವ ಭಾರತದ ನಡುವೆ ಸಂಪರ್ಕವನ್ನು ಬಲಪಡಿಸಲಿದೆ. ಕೇಂದ್ರ ಸರ್ಕಾರ ಕೂಡಾ ಈ ಸ್ಲೀಪರ್ ರೈಲಿನ ಉದ್ಘಾಟನೆಗಾಗಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ.
ಎಷ್ಟಿದೆ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ?
ರೈಲ್ವೇ ಇಲಾಖೆ ಬಿಡುಗಡೆ ಮಾಡಿದ ಟಿಕೆಟ್ ದರದಲ್ಲಿ, ಪ್ರತೀ ಕಿ.ಮೀಗೆ 2.4 ರೂ.ನಿಂದ ಗರಿಷ್ಠ 3.8 ರೂ. ಟಿಕೆಟ್ ದರ ಇರಲಿದೆ ಎಂದು ಹೇಳಲಾಗಿದೆ. ಅಂದರೆ 400 ಕಿ.ಮೀಗೆ ಕನಿಷ್ಠ ದರ 960 ರೂ. ಮತ್ತು ಗರಿಷ್ಠ 1520 ರೂ. ಇರಲಿದೆ ಎಂದು ಹೇಳಲಾಗಿದೆ.
ಹೊಸದಾಗಿ ಪರಿಚಯಿಸಲಾಗುವ ಈ ರೈಲುಗಳು ಹೆಚ್ಚಿನ ವೇಗ, ಆರಾಮದಾಯಕ ಪ್ರಯಾಣ ಹಾಗೂ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಟಿಕೆಟ್ ದರ, 400 ಕಿ.ಮೀ ವರೆಗಿನ 3ಎಸಿಗೆ ₹960 ರಿಂದ ಆರಂಭವಾದ್ರೆ, ಗರಿಷ್ಠ 3,500 ಕಿ.ಮೀ ದೂರದ 1ಎಸಿ ಟಿಕೆಟ್‌ಗೆ ₹13,300 ರವರೆಗೆ ದರ ನಿಗದಿಪಡಿಸಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, 400 ಕಿ.ಮೀ ಪ್ರಯಾಣಕ್ಕೆ 3ಎಸಿಗೆ ₹960, 2ಎಸಿಗೆ ₹1,240, 1ಎಸಿಗೆ ₹1,520 ಶುಲ್ಕವಿದೆ. 800 ಕಿ.ಮೀಗೆ 3ಎಸಿಗೆ ₹1,920, 2ಎಸಿಗೆ ₹2,480 ಮತ್ತು 1ಎಸಿಗೆ ₹3,040 ದರ ಇರುತ್ತದೆ. 1,600 ಕಿ.ಮೀ ಪ್ರಯಾಣಕ್ಕೆ 3ಎಸಿಗೆ ₹3,840, 2ಎಸಿಗೆ ₹4,960, 1ಎಸಿಗೆ ₹6,080 ಶುಲ್ಕ ವಿಧಿಸಲಾಗುತ್ತದೆ. ಪ್ರಯಾಣದ ದೂರಕ್ಕೆ ಅನುಗುಣವಾಗಿ ವಂದೇ ಭಾರತ್ ಸ್ಲೀಪರ್ ರೈಲು ಟಿಕೆಟ್ ದರ ಬದಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ..
ಇದೇ ರೀತಿ, 2,000 ಕಿ.ಮೀ ಪ್ರಯಾಣಕ್ಕೆ 3ಎಸಿಗೆ ₹4,800, 2ಎಸಿಗೆ ₹6,200 ಮತ್ತು 1ಎಸಿಗೆ ₹7,600 ಶುಲ್ಕ ಇರುತ್ತದೆ. 2,800 ಕಿ.ಮೀ ದೂರಕ್ಕೆ ಈ ದರಗಳು 3ಎಸಿ, 2ಎಸಿ, 1ಎಸಿಗೆ ಕ್ರಮವಾಗಿ ₹6,720, ₹8,680 ಮತ್ತು ₹10,640 ಆಗಿವೆ. ಗರಿಷ್ಠ 3,500 ಕಿ.ಮೀ ದೂರಕ್ಕೆ 3ಎಸಿಗೆ ₹8,400, 2ಎಸಿಗೆ ₹10,850 ಮತ್ತು 1ಎಸಿಗೆ ₹13,300 ಶುಲ್ಕ ಇರಲಿದೆ ಎಂದು ವರದಿಯಾಗಿದೆ.
VIP ಕೋಟಾ ಇಲ್ಲ!
ಸಾಮಾನ್ಯ ಜನರ ಅನುಕೂಲಕ್ಕಾಗಿ ಈ ವಂದೇ ಭಾರತ್ ಸ್ಲೀಪರ್ ರೈಲು ಜಾರಿಗೆ ತರಲಾಗುತ್ತಿದೆ. ಆದ್ದರಿಂದ ಈ ರೈಲಿನಲ್ಲಿ ವಿಐಪಿ ಅಥವಾ ತುರ್ತು ಕೋಟಾ ಇರುವುದಿಲ್ಲ ಎಂದು ಹೇಳಲಾಗಿದೆ. ಇನ್ನು ಉನ್ನತ ಮತ್ತು ಹಿರಿಯ ರೈಲ್ವೇ ಅಧಿಕಾರಿಗಳು ಸಹ ಪಾಸ್ ಬಳಸಿ ಈ ರೈಲಿನಲ್ಲಿ ಹೋಗಲು ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ. ಅಂದರೆ ಕೇವಲ ಬುಕ್ ಮಾಡಿದ ಟಿಕೆಟ್‌ಗಳಿಗೆ ಮಾತ್ರ ಅವಕಾಶವಿರುತ್ತದೆ.
More From GoodReturns

Karnataka Property: ಕರ್ನಾಟಕದಲ್ಲಿ ದುಬಾರಿಯಾಗಲಿದೆ ಜಾಗದ ಮೌಲ್ಯ! ಯಾವಾಗದಿಂದ ಗೊತ್ತಾ?

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications