ಭಾರತದಲ್ಲಿ ವಂದೇ ಭಾರತ್ ರೈಲು (Vande Bharat) ಇಂದು ಅಗತ್ಯ ಸಾರಿಗೆ ವ್ಯವಸ್ಥೆಯಾಗಿಬಿಟ್ಟಿದೆ. ವಂದೇ ಭಾರತ್ ನಿರಂತರ ಸೇವೆ, ವೇಗದ ಪ್ರಯಾಣ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವಂತೆ ಮಾಡಿದೆ. ಟಿಕೆಟ್ ಬೆಲೆ ಹೆಚ್ಚಾದರೂ ಪರವಾಗಿಲ್ಲ, ವಂದೇ ಭಾರತ್‌ನಲ್ಲಿ ಹೋಗಲೇಬೇಕು ಎಂದು ಅದೆಷ್ಟೋ ಜನ ಪ್ರಯಾಣ ಮಾಡುತ್ತಾರೆ. ಈಗಾಗಲೇ ದೇಶದ ಬಹುತೇಕ ನಗರಗಳಲ್ಲಿ ವಂದೇ ಭಾರತ್ ರೈಲು ಸೇವೆ ಸಲ್ಲಿಸುತ್ತಿದೆ. ಇದೀಗ ವಂದೇ ಭಾರತ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ಈಗಾಗಲೇ ಕರ್ನಾಟಕದಿಂದ ಹಲವು ಕಡೆ ವಂದೇ ಭಾರತ್ ರೈಲು ಸಂಚಾರ ಮಾಡುತ್ತದೆ. ಆದರೆ ಬೆಂಗಳೂರಿನಿಂದ ಮಂಗಳೂರು, ಉಡುಪಿಗೆ ವಂದೇ ಭಾರತ್ ರೈಲು ಬೇಕು ಎಂಬ ಕೂಗು ಹಲವು ದಿನಗಳಿಂದ ಇತ್ತು. ಆದ್ರೆ ಇದೀಗ ಕೊನೆಗೂ ಜನರ ಬೇಡಿಕೆಗೆ ಪ್ರತಿಫಲ ಸಿಗುವಂತಾಗಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ!
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಪ್ರಾರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬೇಡಿಕೆ ಹಲವು ದಿನಗಳಿಂದ ಕರಾವಳಿ ಕರ್ನಾಟಕದ ಜನ ಇಡುತ್ತಲೇ ಇದ್ದರು. ಇದೀಗ ಜನರ ಪರವಾಗಿ ನಿಂತ ಕೋಟ ಶ್ರೀನಿವಾಸ ಪೂಜಾರಿ ಕೊನೆಗೂ ಜನರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ದಕ್ಷಿಣ ಪಶ್ಚಿಮ ರೈಲ್ವೆ (SWR) ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್‌ನ 55 ಕಿ.ಮೀ. ವಿದ್ಯುದೀಕರಣ (RE) ಕಾರ್ಯ ಪೂರ್ಣಗೊಳ್ಳುತ್ತಿದೆ. ಇದು ಸಂಪೂರ್ಣ ವಿದ್ಯುತ್ ರೈಲು ಸಂಚಾರಕ್ಕೆ ದಾರಿ ಮಾಡಿಕೊಡಲಿದೆ. ಅಲ್ಲದೇ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಮತ್ತು ಬೆಂಗಳೂರು-ಸಕಲೇಶಪುರ ನಡುವಿನ ವಿದ್ಯುದೀಕರಣ ಈಗಾಗಲೇ ಸಂಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಕೋಟಾ ಶ್ರೀನಿವಾಸ ಪೂಜಾರಿಯವರ ಬೇಡಿಕೆಯ ಮನವಿ ಭಾರೀ ಮಹತ್ವ ಪಡೆದುಕೊಂಡಿದೆ
ಸಭೆಯಲ್ಲಿ, ಕರಾವಳಿ ಭಾಗದಿಂದ ರಾಜಧಾನಿಗೆ ವೇಗದ, ವಿಶ್ವಾಸಾರ್ಹ ಸಂಪರ್ಕಕ್ಕೆ ತೀವ್ರ ಬೇಡಿಕೆಯಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಘಾಟ್ ವಿಭಾಗ ಸಂಪೂರ್ಣ ವಿದ್ಯುದೀಕರಣಗೊಂಡರೆ, ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ಪ್ರಯಾಣ ಸಮಯ, ಕಾರ್ಯಾಚರಣೆ ದಕ್ಷತೆ ಗಮನಾರ್ಹವಾಗಿ ಸುಧಾರಿಸಲಿದೆ ಎಂದರು.
ಎಲ್ಲೆಲ್ಲಿ ವಂದೇ ಭಾರತ್ ರೈಲು?
ವಂದೇ ಭಾರತ್ ಸೇವೆಯು ಕಾರವಾರ, ಉಡುಪಿ, ಮಂಗಳೂರಿನ ಪ್ರತಿದಿನ ಸಂಚರಿಸುವ ಪ್ರಯಾಣಿಕರಿಗೆ ಆಧುನಿಕ, ವೇಗದ ಮೂಲಕ ಭಾರೀ ಅನುಕೂಲವಾಗಲಿದೆ. ಇದರ ಶೀಘ್ರ ಆರಂಭವು ಪ್ರದೇಶದ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಸಂಸದರು ಒತ್ತಿ ಹೇಳಿದರು.
ಘಾಟ್ ವಿಭಾಗದ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರು-ಕಾರವಾರ ಮಾರ್ಗಕ್ಕೆ ವಂದೇ ಭಾರತ್ ಪರಿಗಣಿಸುವ ಸಚಿವರು ಈ ಹಿಂದೆ ಹೇಳಿದ್ದರು ಎಂಬುದನ್ನು ನೆನಪಿಸಿದರು. ಪ್ರಸ್ತಾವನೆಗೆ ಆದ್ಯತೆ ನೀಡಿ, ಸೇವೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದು, ಇದೀಗ ಶೀಘ್ರದಲ್ಲೇ ಬೆಂಗಳೂರು-ಮಂಗಳೂರು-ಕಾರವಾರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸಲಿದೆ ಎಂದು ವರದಿಯಾಗಿದೆ.


Click it and Unblock the Notifications