ವಂದೇ ಭಾರತ್, ವಂದೇ ಮೆಟ್ರೋ, ವಂದೇ ಸ್ಲೀಪರ್ ಆಯಿತು ಮುಂದೇನು ಎಂಬ ಪ್ರಶ್ನೆಗೆ ರೈಲ್ವೆ ಸಚಿವಾಲಯದಿಂದ ಉತ್ತರ ಸಿದ್ದವಾಗಿದೆ. ಅದೇ "ವಂದೇ ಕಾರ್ಗೋ" ದೇಶದ ರೈಲ್ವೆಗಳನ್ನು ಸುಧಾರಿತ ಮತ್ತು ಜನರಿಗೆ ಅನುಕೂಲವಾಗುವಂತೆ ಮಾಡಲು ಭಾರತೀಯ ರೈಲ್ವೆ ನಿರಂತರವಾಗಿ ಕೆಲಸ ಮಾಡುತ್ತಿದೆ. ದೇಶದ ಮೊದಲ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ನಂತರ, ರೈಲ್ವೆಯು ಅಮೃತ್ ಭಾರತ್ ರೈಲು, ವಂದೇ ಮೆಟ್ರೋ ರೈಲು ಮತ್ತು ವಂದೇ ಸ್ಲೀಪರ್‌ನಂತಹ ರೈಲುಗಳನ್ನು ಪರಿಚಯಿಸಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾದರಿಯಲ್ಲೇ ಸರಕು ಸಾಗಣೆ ರೈಲುಗಳನ್ನು ಹಳಿಗೆ ಇಳಿಸಲು ರೈಲ್ವೆ ಸಚಿವಾಲಯ ಯೋಜನೆ ಹಾಕಿಕೊಂಡಿದ್ದು, ಇದರ ಕಾರ್ಯ ಭರದಿಂದ ಸಾಗುತ್ತಿದೆ.
ಪ್ಯಾಸೆಂಜರ್ ರೈಲುಗಳು ಮಾತ್ರವಲ್ಲದೆ ಸರಕು ರೈಲುಗಳ ತಂತ್ರಜ್ಞಾನವೂ ಮುಂದುವರಿಯಲಿದೆ. ಇ- ಕಾಮರ್ಸ್ ಗೆ ಉತ್ತೇಜನ , ಸೂಕ್ಷ್ಮ ಸರಕುಗಳನ್ನು ತುರ್ತಾಗಿ ಮಾರುಕಟ್ಟೆಗೆ ತಲುಪಿಸುವುದು, ರೈಲ್ವೆಯ ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಸೂಪರ್ ಫಾಸ್ಟ್ ಕಾರ್ಗೊ ರೈಲುಗಳನ್ನು ಪರಿಚಯಿಸಲು ಉದ್ದೇಶಿಸಿದ್ದು ಇದಕ್ಕಾಗಿ ರೈಲ್ವೇ ಇಲಾಖೆಯೂ ದೇಶದ ಮೊತ್ತ ಮೊದಲ ವಂದೇ ಕಾರ್ಗೋ ರೈಲನ್ನು ತರಲಿದೆ. ಇದರ ಫಸ್ಟ್ ಲುಕ್ ರಿವೀಲ್ ಆಗಿದ್ದು ಮೊದಲ ನೋಟಕ್ಕೆ ಇದು ವಂದೇ ಭಾರತ್ ನ ಸಾಮ್ಯತೆ ಹೊಂದಿದೆ.

ವಂದೇ ಕಾರ್ಗೋ ರೈಲು:
ದೇಶದ ಮೊತ್ತ ಮೊದಲ ವಂದೇ ಕಾರ್ಗೋ ರೈಲನ್ನು ಶೀಘ್ರದಲ್ಲೇ ಹಳಿಗೆ ತರಲು ರೈಲ್ವೇ ಇಲಾಖೆ ಮುಂದಾಗಿದೆ. ಇದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇನ್ಮುಂದೆ ಸೂಪರ್ ಫಾಸ್ಟ್ ಆಗಿ ರೈಲಿನ ಮೂಲಕವೂ ಸರಕುಗಳನ್ನು ಸರಬರಾಜು ಮಾಡಲಾಗುವುದು.
ವಂದೇ ಭಾರತ್ ಮಾದರಿ:
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಅಮೃತ್ ಭಾರತ್ ರೈಲು, ವಂದೇ ಮೆಟ್ರೋ (ನಮೋ ಭಾರತ್ ರಾಪಿಡ್ ರೈಲ್) ಈಗಾಗಲೇ ದೇಶದಲ್ಲಿ ಓಡುತ್ತಿದೆ. ಇದೇ ಮಾರ್ಗದಲ್ಲಿ ಈಗ ವಂದೇ ಕಾರ್ಗೋ ರೈಲು ಓಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಸರಕುಗಳನ್ನು ಹೆಚ್ಚಿನ ವೇಗದಲ್ಲಿ ಸಾಗಿಸಲಾಗುವುದು:
ವಂದೇ ಭಾರತ್ ರೈಲಿನ ಮಾದರಿಯಲ್ಲಿ, ಸರಕುಗಳನ್ನು ಸಾಗಿಸಲು ಹೈಸ್ಪೀಡ್ ಗೂಡ್ಸ್ ರೈಲುಗಳನ್ನು ಓಡಿಸಲು ಈಗ ಸಿದ್ಧತೆ ನಡೆಸಲಾಗುತ್ತಿದೆ ಎಂದು ರೈಲ್ವೆ ಹೇಳಿದೆ. ರೈಲ್ವೆ ತನ್ನ ಸೇವೆಯನ್ನು ಉತ್ತಮ ಮತ್ತು ಆಧುನಿಕವಾಗಿಸಲು ಗಮನಹರಿಸುತ್ತಿದೆ.

ಇಲ್ಲಿ ವಂದೇ ಕಾರ್ಗೋ ರೈಲು ನಿರ್ಮಾಣವಾಗುತ್ತಿದೆ:
ವಂದೇ ಕಾರ್ಗೋ ರೈಲನ್ನು ಚೆನ್ನೈನಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ತಯಾರಿಸಲಾಗುತ್ತಿದೆ. ವಂದೇ ಭಾರತ್ ಮತ್ತು ವಂದೇ ಮೆಟ್ರೋ ರೈಲುಗಳ ಕೋಚ್‌ಗಳನ್ನು ನಿರ್ಮಿಸಿದ ಪ್ಲಾಟ್‌ಫಾರ್ಮ್ ಅನ್ನು ಹೆಚ್ಚಿನ ವೇಗದ ವಂದೇ ಕಾರ್ಗೋಗಾಗಿ ಬಳಸಲಾಗುತ್ತದೆ.
ವಂದೇ ಸರಕು ಓಡಾಟ ಎಲ್ಲಿ?
ಕಡಿಮೆ ದೂರದ ನಗರಗಳ ನಡುವೆ ವಂದೇ ಕಾರ್ಗೋ ರೈಲು ಓಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ರೈಲ್ವೆ ಹೇಳಿದೆ. ಈ ವಂದೇ ಕಾರ್ಗೋದಲ್ಲಿ ಪ್ರಯಾಣಿಕರಿಗೆ ಯಾವುದೇ ಆಸನಗಳಿರುವುದಿಲ್ಲ.
ವಂದೇ ಕಾರ್ಗೋ ಯಾವಾಗ ಸಿದ್ಧವಾಗಲಿದೆ?
ಕಡಿಮೆ ಸಮಯದಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಸರಕುಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ಈ ವಂದೇ ಕಾರ್ಗೋ ರೈಲುಗಳನ್ನು ಬಳಸಲಾಗುವುದು ಎಂದು ರೈಲ್ವೆ ಹೇಳಿದೆ. ಈ ವಂದೇ ಕಾರ್ಗೋ ರೈಲುಗಳು ಡಿಸೆಂಬರ್ ತಿಂಗಳ ವೇಳೆಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ.


Click it and Unblock the Notifications