ಬೆಂಗಳೂರು, ಮೇ 14: ಹವಾಮಾನ ವೈಪರಿತ್ಯ ಸೇರಿದಂತೆ ಹಲವಾರು ಕಾರಣಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು ತರಕಾರಿ ಬೆಲೆಗಳು ಗಗನಮುಖಿಯಾಗಿದೆ.
ಬೆಂಗಳೂರಿನಲ್ಲಿ ಸಗಟು ಬೀನ್ಸ್ ಬೆಲೆಗಳು ತೀವ್ರ ಏರಿಕೆ ಕಂಡಿದ್ದು, ಏಪ್ರಿಲ್ ಅಂತ್ಯಕ್ಕೆ ಕೆಜಿಗೆ 100 ರೂ.ನಿಂದ ಸೋಮವಾರ 200 ರೂ.ಗೆ ದ್ವಿಗುಣಗೊಂಡಿದೆ. ಸೂಪರ್ ಮಾರ್ಕೆಟ್ ಮತ್ತು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಬೀನ್ಸ್ ಕೆಜಿಗೆ 220 ರಿಂದ 240 ರೂ.ಗೆ ತಲುಪಿದೆ.

ಬೀನ್ಸ್ ಮತ್ತು ಇತರ ತರಕಾರಿಗಳು ಸಾಮಾನ್ಯವಾಗಿ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಮತ್ತು ಮಂಡ್ಯದಂತಹ ಹತ್ತಿರದ ಪ್ರದೇಶಗಳಿಂದ ಬರುತ್ತಿದ್ದರೂ, ಬೆಂಗಳೂರಿನ ಮಾರಾಟಗಾರರು ರೈತರಿಂದ ಕಡಿಮೆ ಪೂರೈಕೆಯಿಂದ ಬೆಲೆ ಏರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಡಿಎಚ್‌ನೊಂದಿಗೆ ಮಾತನಾಡಿರುವ ಕಲ್ಯಾಣ್‌ನಗರದ ತರಕಾರಿ ವ್ಯಾಪಾರಿ ವೆಂಕಟೇಶ್ ಎಂಬುವರು ಒಂದು ಕಿಲೋ ಬೀನ್ಸ್‌ಗೆ 240 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಒಂದು ಕಿಲೋ ಬೀನ್ಸ್‌ಗೆ 60 ಮತ್ತು 80 ರೂ.ಗೆ ಮಾರಾಟ ಮಾಡಿದ್ದೇವೆ. ಕಳೆದ ತಿಂಗಳು 100 ರೂ. ಇತ್ತು. ಆದರೆ ಸೋಮವಾರ ಸಗಟು ಬೆಲೆ 200 ರೂ. ಇದೆ. ಮುಂದೆ ಅದರ ಬೆಲೆ 240 ರೂ. ಆಗುತ್ತೆ ಎಂದು ತಿಳಿಸಿದ್ದಾರೆ.
ಪೂರೈಕೆಯಲ್ಲಿ ಕುಸಿತ:
ಈ ವರ್ಷ ಬೀನ್ಸ್ ಪೂರೈಕೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಜನರು ಮಳೆಗಾಲದ ಮೊದಲು ಮದುವೆಯಂತಹ ವಿಶೇಷ ಸಂದರ್ಭಗಳನ್ನು ಹೊಂದಿರುವುದರಿಂದ ಮಾರ್ಚ್ ನಂತರ ತರಕಾರಿಗಳಿಗೆ ಬೇಡಿಕೆ ಉತ್ತುಂಗಕ್ಕೇರುತ್ತದೆ. ಜನಪ್ರಿಯ ಸೂಪರ್‌ಮಾರ್ಕೆಟ್‌ಗಳು ತರಕಾರಿಗೆ 220 ರಿಂದ 240 ರೂಪಾಯಿಗಳ ಬೆಲೆಯನ್ನು ನೀಡಿದರೆ, ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಬೀನ್ಸ್ ಅನ್ನು 133 ರಿಂದ 182 ರೂಪಾಯಿಗಳ ನಡುವೆ ಮಾರಾಟ ಮಾಡುತ್ತಿದ್ದಾರೆ.
ಕೆಆರ್ ಮಾರುಕಟ್ಟೆಯಲ್ಲಿ ಬೀನ್ಸ್ ಸಗಟು ಬೆಲೆ 200 ರೂ., ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳಿಗೆ 160 ರಿಂದ 180 ರೂ. ಇದೆ. ಕಲಾಸಿಪಾಳ್ಯದ ಮಾರಾಟಗಾರೊಬ್ಬರು ಮಾತನಾಡಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪೂರೈಕೆ ಗಣನೀಯವಾಗಿ ಕಡಿಮೆಯಾಗಿದೆ. ಬೆಲೆ ಏರಿಕೆ ಬೇಸಿಗೆಯಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಅವರು ನಂಬಿದ್ದರು ಎಂದು ತಿಳಿಸಿದರು.
"ನೀರಾವರಿ ಸಮಸ್ಯೆಯಿಂದಾಗಿ ಹಲವರು ತರಕಾರಿ ಕೃಷಿಯನ್ನು ಕೈಬಿಡುತ್ತಿದ್ದಾರೆ. ಆದರೆ ಈ ವರ್ಷ ಹವಾಮಾನ ವೈಪರೀತ್ಯದಿಂದ ಬಹುತೇಕ ಅರಳಿದ ಹೂಗಳು ಜಮೀನಿನಲ್ಲಿ ಬಾಡಿ ಹೋಗಿವೆ. ಬೀನ್ಸ್ ಅನ್ನು 40 ರಿಂದ 60 ರೂ.ವರೆಗೆ ಮಾರಾಟ ಮಾಡುತ್ತಾರೆ ಎಂದು ಹೇಳಿದರು.


Click it and Unblock the Notifications