ಈ ವರ್ಷದ ಮಧ್ಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳ ತಮ್ಮ ರಿಚಾರ್ಜ್ ಪ್ಲ್ಯಾನ್ ದರವನ್ನು ಹೆಚ್ಚಿಸಿದವು. ಇದರಿಂದ ಕಂಗೆಟ್ಟ ಗ್ರಾಹಕ ಸರ್ಕಾರಿ ಸೌಮ್ಯದ ಬಿಎಸ್ಎನ್ಎಲ್ ಕಂಪನಿಯತ್ತ ವಾಲಿದರು. ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತಿದ್ದು, ಪ್ರಸಕ್ತ ವರ್ಷ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ.
ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ವೋಡಾಫೋನ್ ಹಾಗೂ ಐಡಿಯಾ ಕಂಪನಿ ಕಡಿಮೆ ಬೆಲೆಯ ರಿಚಾರ್ಜ್ ಬಿಡುಗಡೆ ಮಾಡಿದೆ. ಪ್ರಿಪೇಡ್ ಗ್ರಾಹಕರಿಗೆ ವಿಐ 175 ರೂಪಾಯಿಗಳ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್ ಸಿನೆಮಾ ಹಾಗೂ ಮನೋರಂಜನೆಯನ್ನು ಇಷ್ಟ ಪಡುವ ಗ್ರಾಹಕರನ್ನು ಟಾರ್ಗೆಟ್ ಮಾಡಲಾಗಿದೆ. ಈ ಪ್ಲ್ಯಾನ್‌ನಲ್ಲಿ 15 ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳು ಲಭ್ಯವಾಗುತ್ತವೆ.

ಗ್ರಾಹಕರನ್ನು ಆಕರ್ಷಿಸಲು, ಟೆಲಿಕಾಂ ಕಂಪನಿಗಳು ಈಗ ಉಚಿತ ಕರೆ, SMS ಮತ್ತು ಡೇಟಾದೊಂದಿಗೆ OTT ಅನ್ನು ನೀಡುತ್ತಿವೆ. ವೊಡಾಫೋನ್ ಅನೇಕ ಯೋಜನೆಗಳಲ್ಲಿ OTT ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಸೇರಿಸಿದೆ.
ಕಡಿಮೆ ಬೆಲೆ ಭರ್ಜರಿ ಆಫರ್
ಪ್ರಸಕ್ತ ವರ್ಷದ ಆರಂಭದಲ್ಲಿ ವಿಐ ಆಪ್‌ನ್ನು ಲಾಂಛ್ ಮಾಡಿತ್ತು. ಈ ಆಪ್‌ನಲ್ಲಿ ಹಲವು ಮನೋರಂಜನೆ ಮಾಧ್ಯಗಳು ಲಭ್ಯ. ಇದರಲ್ಲಿ ಹಲವು ಒಟಿಟಿ ಆಪ್‌ಗಳ ಲಾಭ ಪಡೆಯಬಹುದು. ಇನ್ನು 350 ಲೈವ್ ಟಿವಿ ಚಾನೆಲ್ಸ್, ಹಾಗೂ ಕಥೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಈ ಪ್ಲ್ಯಾನ್‌ನ ಲಾಭವನ್ನು ಪೋಸ್ಟ್‌ಪೇಡ್ ಹಾಗೂ ಪ್ರೀ ಪೇಡ್ ಗ್ರಾಹಕರು ಬಳಸಬಹುದಾಗಿದೆ.
ವಿಐ ವಿನೂತನವಾಗಿ ಬಿಡುಗಡೆ ಮಾಡಿರುವ ಪ್ಲ್ಯಾನ್ 175 ರೂಪಾಯಿಗಳ ರಿಚಾರ್ಜ್ ಹೊಂದಿದೆ. ಈ ರಿಚಾರ್ಜ್ ಪ್ಲ್ಯಾನ್ ಅಡಿಯಲ್ಲಿ ಗ್ರಾಹಕ ತನ್ನ ಕೈಯಲ್ಲಿ ಹಲವು ಮನೋರಂಜನಾ ಸಾಧನಗಳನ್ನು ಬಳಸಬಹುದಾಗಿದೆ. ಇದರಲ್ಲಿ ಸೋನಿ ಲಿವ್, ಜಿ5, ಮನೋರಮಾ ಮ್ಯಾಕ್ಸ್, ಫ್ಯಾನ್‌ಕೋಡ್, ಪ್ಲೇ ಫ್ಲಿಕ್ಸ್, ಪ್ಲಸ್ ಆಪ್‌ಗಳ ಆನಂದವನ್ನು ಪಡೆಯಬಹುದು. ಅಲ್ಲದೆ 10 ಜಿಬಿ ಡಾಟಾದ ಲಾಭವನ್ನು ಪಡೆಯಬಹುದು. ಈ ಮೂಲಕ ಗ್ರಾಹಕ ತನ್ನ ಇಷ್ಟದ ಮನೋರಂಜನೆಯನ್ನು ಆನಂದಿಸಬಹುದಾಗಿದೆ.
ಈ ರಿಚಾರ್ಜ್ ಪ್ಲ್ಯಾನ್ ಹಲವು ಮನೋರಂಜನಾ ಆಪ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ. ಈ ಪ್ಲ್ಯಾನ್‌ನ್ನು ಜಿಯೋ ಪ್ಲ್ಯಾನ್ ಜೊತೆ ಕಂಪೇರ್ ಮಾಡಿದರೆ, ಜಿಯೋ 175 ರೂಪಾಯಿಗಳ ರಿಚಾರ್ಜ್‌ನಲ್ಲಿ ಕೇವಲ 10 ಆಪ್‌ಗಳನ್ನು ನೀಡುತ್ತದೆ.
ಜಿಯೋ ಬಜೆಟ್ ಫ್ರೆಂಡ್ಲಿ ಪ್ಲ್ಯಾನ್
ಜಿಯೋ ಸಹ ಬಜೆಟ್ ಫ್ರೆಂಡ್ಲಿ ಮೊಬೈಲ್ ಪ್ಲ್ಯಾನ್ ಲಾಂಚ್ ಮಾಡಿದೆ. ಈ ಪ್ಲ್ಯಾನ್ ಜಸ್ಟ್ 749 ರೂಪಾಯಿಗಳಿಗೆ ಲಭ್ಯ. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಗ್ರಾಹಕ 72 ದಿನಗಳ ವ್ಯಾಲಿಡಿಟಿ ಪಡೆಯಬಹುದಾಗಿದೆ. ಈ ರಿಚಾರ್ಜ್ ಅಡಿ ಜಿಯೋ 100 ಎಸ್‌ಎಂಎಸ್ ಸೇವೆಗಳನ್ನು ದಿನ ನಿತ್ಯ ನೀಡುತ್ತಿದೆ. ಒಂದು ವೇಳೆ ನೀವು ಸಿನೇಮಾ ಹಾಗೂ ವೆಬ್ ಸೀರಿಸ್ ನೋಡುವವರು ಆಗಿದ್ದರೆ, ಈ ಪ್ಲ್ಯಾನ್ ನಿಮಗೆ ಪರ್ಫೆಕ್ಟ್ ಆಗುತ್ತದೆ. ಈ ರಿಚಾರ್ಜ್‌ನಡಿ ಗ್ರಾಹಕ ದಿನಂಪ್ರತಿ 2 ಜಿಬಿ ಡೇಟಾವನ್ನು ಬಳಸಬಹುದು.
ಇಜಿಯೋ 999 ರಿಚಾರ್ಜ್ ಪ್ಲ್ಯಾನ್ ಸಹ ಬಿಟ್ಟಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 98 ದಿನಗಳ ವ್ಯಾಲಿಡಿಟಿ ಲಭ್ಯ. ಈ ರಿಚಾರ್ಜ್ ಮಾಡಿಸಿಕೊಂಡರೂ ಸಹ ಹತ್ತು ಹಲವು ಲಾಭಗಳು ಸಿಗಲಿವೆ.


Click it and Unblock the Notifications