ಬ್ರಾಂಡ್ ಮೌಲ್ಯ: ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ, ಶಾರುಕ್ , ಸಲ್ಮಾನ್ , ಕತ್ರಿನಾಗೆ ಯಾವ ಸ್ಥಾನ?

ಬೆಂಗಳೂರು, ಜೂನ್‌ 19: ಭಾರತ ಕ್ರಿಕೆಟಿಗ ವಿರಾಟ್ ಕೊಹ್ಲಿ 2023ರ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸುಮಾರು ಯುಎಸ್ $ 227.9 (ಅಂದಾಜು ₹1900 ಕೋಟಿ) ಬ್ರ್ಯಾಂಡ್‌ ಮೌಲ್ಯ ಹೊಂದಿರುವ ಅವರು ಭಾರತದ ಸೆಲೆಬ್ರಿಟಿಗಳಲ್ಲಿ ಮೌಲ್ಯಯುತ ಸೆಲೆಬ್ರಿಟಿಯಾಗಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕ್ರೋಲ್ ಸಂಸ್ಥೆ ಬಿಡುಗಡೆ ಮಾಡಿದ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ 2023 ವರದಿ ಹೇಳಿದೆ.

ಇದು 2022 ರಲ್ಲಿ USD 176.9 ಮಿಲಿಯನ್ ಮೌಲ್ಯಕ್ಕಿಂದ ಗಮನಾರ್ಹ ಏರಿಕೆ ಕಂಡಿದ್ದರೂ, 2020 ರಲ್ಲಿ ಇದ್ದ USD 237.7 ಮಿಲಿಯನ್ ಗಿಂತ ಕಡಿಮೆಯಾಗಿದೆ. ಕೊಹ್ಲಿ ಅವರ ಬ್ರ್ಯಾಂಡ್‌ ಮೌಲ್ಯ ಏರಿಕೆಯು ನಟ ರಣವೀರ್ ಸಿಂಗ್ ಅವರನ್ನು ಮೀರಿಸಿದೆ.

ಬ್ರಾಂಡ್ ಮೌಲ್ಯ: ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ

ಇನ್ನು ಈ ರ್‍ಯಾಂಕಿಂಗ್‌ನ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ಶಾರುಕ್ ಖಾನ್ ಇದ್ಧಾರೆ. ಟಾಪ್ ೫ ಪ್ರಮುಖ ಖ್ಯಾತನಾಮರಲ್ಲಿ, ಕೊಹ್ಲಿ ಏಕೈಕ ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಯಾಗಿದ್ದಾರೆ. ಇನ್ನುಳಿದ ನಾಲ್ವರು ಕೂಡಾ ಚಲನಚಿತ್ರ ತಾರೆಯರಾಗಿದ್ದಾರೆ.

ಕ್ರೋಲ್ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ 2023 ಕೊಹ್ಲಿಯ ಒಟ್ಟಾ ರೆ ಬ್ರ್ಯಾಂಡ್ ಮೌಲ್ಯದಲ್ಲಿ ಸುಮಾರು 29% ಹೆಚ್ಚಳವಾಗಿದ್ದು, ಈ ಮೂಲಕ ಅವರು ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಈ ನಡುವೆ 58 ವರ್ಷದ ಬಾಲಿವುಡ್ ಬಾದ್ ಶಾ ಖ್ಯಾತಿಯ ಶಾರುಖ್ ಖಾನ್ ಅವರು ಏಕಾಏಕಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

ಅವರ ಬ್ರ್ಯಾಂ ಡ್ ಮೌಲ್ಯ ವು 2022 ರಲ್ಲಿ USD 55.7 ಮಿಲಿಯನ್ ನಿಂದ 2023 ರಲ್ಲಿ USD 120.7 ಮಿಲಿಯನ್ ಗೆ ಏರಿಕೆ ಕಂಡಿದೆ. ಅವರ "ಜವಾನ್" ಮತ್ತು "ಪಠಾನ್" ಚಿತ್ರ ಗಳ ಯಶಸ್ಸಿನಿಂದ ಈ ಉತ್ತೇಜನ ಸಿಕ್ಕಿದ್ದು ಹತ್ತನೇ ಸ್ಥಾನದಲ್ಲಿದ್ದ ಶಾರುಕ್ ಅವರನ್ನು ನೇರವಾಗಿ ಮೂರನೇ ಸ್ಥಾನಕ್ಕೆ ಏರಿಸಿದ್ದು, 2020 ರಿಂದ ಬಳಿಕ ಮೊದಲ ಬಾರಿಗೆ ಅವರು ಅಗ್ರ ಟಾಪ್ ೫ ಸ್ಥಾನದಲ್ಲಿ ಕಂಡುಬಂದಿದ್ದಾರೆ.

ಇನ್ನು ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು ಅವರ , USD 111.7 ಮಿಲಿಯನ್ ಬ್ರಾಂಡ್ ಮೌಲ್ಯವಾಗಿದೆ. USD 101.1 ಮೌಲ್ಯದೊಂದಿಗೆ ನಟಿ ಆಲಿಯಾ ಭಟ್ ಐದನೇ ಸ್ಥಾನಕ್ಕೆ ಕುಸಿದಿದ್ದು, USD 96 ಬ್ರಾಂಡ್ ಮೌಲ್ಯ ದೊಂದಿಗೆ ನಟಿ ದೀಪಿಕಾ ಪಡುಕೋಣೆ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕ್ರಿಕೆಟ್ ನ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿಯಾಗಿ ನಂತರ ಒಂದು ಸ್ಥಾನ ಮೇಲೆಕ್ಕೇರಿದ್ದು ಅವರ ಬ್ರ್ಯಾಂಡ್ ಮೌಲ್ಯ USD 95.8 ಮಿಲಿಯನ್ ಆಗಿದೆ. ಇನ್ನು ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕ ರ್ 91.3 ಮಿಲಿಯನ್ ಡಾಲರ್ ಬ್ರಾಂ ಡ್ ಮೌಲ್ಯ ದೊಂದಿಗೆ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ.

ನಿವೃತ್ತ ಕ್ರಿ ಕೆಟಿಗ ಸಚಿನ್ ತೆಂಡೂಲ್ಕ ರ್ 91.3 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಇದಾದ ಬಳಿಕ ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರು ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

ಟಾಪ್ 25 ಸೆಲೆಬ್ರಿ ಟಿ ಬ್ರ್ಯಾಂಡ್ ಗಳ ಒಟ್ಟಾರೆ ಮೌಲ್ಯ ಮಾಪನವು 2023 ರಲ್ಲಿ USD 1.9 ಶತಕೋಟಿಗೆ ಏರಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 15.5% ಹೆಚ್ಚ ಳವಾಗಿದೆ. ಇನ್ನು ಗಮನಾರ್ಹವಾಗಿ, ಕಿಯಾರಾ ಅಡ್ವಾಣಿ 16 ನೇ ಸ್ಥಾನದಿಂದ 12 ನೇ ಸ್ಥಾನಕ್ಕೆ ಗಮನಾರ್ಹ ಏರಿಕೆ ಕಂಡಿದ್ದಾರೆ. ಕತ್ರಿನಾ ಕೈಫ್ 25 ನೇ ಸ್ಥಾನದಲ್ಲಿದ್ದಾರೆ. ಕೈಫ್ ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ $27.1 ಮಿಲಿಯನ್ ಮೌಲ್ಯದೊಂದಿಗೆ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಬ್ರಾಂಡ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+