ಇನ್ಮುಂದೆ ರಾಜಧಾನಿಯಲ್ಲೇ ಸಿಗುತ್ತೆ ವೀಸಾ! ಅಮೆರಿಕಾ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ ಆರಂಭ; ಯಾವಾಗ?

ಬೆಂಗಳೂರು: ಹೊಸ ವರ್ಷಕ್ಕೆ ರಾಜಧಾನಿ ಬೆಂಗಳೂರಿಗೆ ಹೊಸ ಹುರುಪು ಸಿಗಲಿದೆ. ಹೌದು, 2025ರ ಜನವರಿಯಲ್ಲಿ ಅಮೇರಿಕಾ ಕಾನ್ಸುಲೇಟ್ ತನ್ನ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದ್ದು,ಇನ್ಮುಂದೆ ರಾಜಧಾನಿಯಲ್ಲೇ ವೀಸಾ ಸಿಗುತ್ತೆ.ಇದರಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತಷ್ಟು ಸಹಾಯವಾಗುತ್ತದೆ.

ಇದೇ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯ ಅಮೆರಿಕ ರಾಯಭಾರಿ ಎರಿಕ್ ಗರ್ಸೆಟ್ಟಿ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಜನರಲ್ ಕಚೇರಿ ಆರಂಭಿಸುವಂತೆ ಕೋರಿದ್ದರು. ಒಪ್ಪಿಗೆ ಒಪ್ಪಿ ಈಗಲೇ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯನಿರತವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಾಹಿತಿ ತಿಳಿಸಿದ್ದಾರೆ.

ಅಮೆರಿಕಾ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ ಶುರು; ಯಾವಾಗ?

ಅಮೆರಿಕ ಮತ್ತು ಭಾರತ ಬಿಸಿನೆಸ್‌ ಕೌನ್ಸಿಲ್ (ಯುಎಸ್‌ಐಬಿಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಿಕವಾಗಿತ್ತು, ಆದರೆ ಈಗ ಕಚೇರಿ ಸ್ಥಾಪನೆಗೆ ನಾವು ಈ ಬಗ್ಗೆ ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿಗಳನ್ನು ಘೋಷಿಸುತ್ತೇವೆ ಎಂದರು.

ಈಗಾಗಲೇ ನಾವು ಬೆಂಗಳೂರಿನಲ್ಲಿ ಹಲವಾರು ವಿದೇಶಿ ವಾಣಿಜ್ಯವನ್ನು ಹೊಂದಿದ್ದೇವೆ. ನಮ್ಮ ಬದ್ಧತೆಯಂತೆ ಜನವರಿಯಲ್ಲಿ ಬೆಂಗಳೂರಿನಲ್ಲಿ ಕಾನ್ಸುಲೇಟ್‌ ಕಚೇರಿಯನ್ನು ತೆರೆಯುವುದನ್ನು ಎದುರು ನೋಡುತ್ತಿದ್ದೇವೆ ಎಂದೂ ಅವರು ಮಾತನಾಡಿದ್ದಾರೆ.

ಇನ್ಮುಂದೆ ರಾಜಧಾನಿಯಲ್ಲೇ ಸಿಗುತ್ತೆ ವೀಸಾ

2025ರ ಜನವರಿಯಲ್ಲಿ ಅಮೇರಿಕಾ ಕಾನ್ಸುಲೇಟ್ ತನ್ನ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಬಿಸಲಿದೆ. ಇನ್ಮುಂದೆ ರಾಜಧಾನಿಯಲ್ಲೇ ವೀಸಾ ಸಿಗುತ್ತೆ. ಇದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತಷ್ಟು ಸಹಾಯಕವಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದೆ.

US ಕಾನ್ಸುಲೇಟ್ ಸ್ಥಾಪನೆಗೆ ದಿನಾಂಕ ನಿಗದಿ: ಸಂಸದ ತೇಜಸ್ವಿ ಸೂರ್ಯ

ನಮ್ಮ ಊರಿನಲ್ಲಿ US ಕಾನ್ಸುಲೇಟ್ ಸ್ಥಾಪನೆಗೆ ಜನವರಿಯಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ದಿನಾಂಕವನ್ನು ನಿಗದಿಪಡಿಸಲಾಗಿದೆ.ಭಾರತಕ್ಕೆ ಐಟಿ ಆದಾಯದಲ್ಲಿ ಶೇ.40ರಷ್ಟು ಕೊಡುಗೆ ನೀಡುವ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕೊರತೆಯಿಂದಾಗಿ ನಿವಾಸಿಗಳು ವೀಸಾ ಕೆಲಸಕ್ಕಾಗಿ ಚೆನ್ನೈ ಅಥವಾ ಹೈದರಾಬಾದ್‌ಗೆ ಪ್ರಯಾಣಿಸಲು ಒತ್ತಾಯಿಸಿದರು.ಇದನ್ನು ನಾನು ಸಂಸದನಾಗಿ ಪೂರೈಸುವುದು ನನ್ನ ಧ್ಯೇಯವಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಈಗಲೇ ನವೆಂಬರ್ 2019 ರಲ್ಲಿ ಎಂಟರ್‌ಪ್ರೈಸ್ ಅಸೆಟ್ ಮ್ಯಾನೇಜ್‌ಮೆಂಟ್ ( EAM )ನ ಡಾ ಎಸ್ ಜೈಶಂಕರ್ ಅವರಿಗೆ ಯುಎಸ್ ಕಾನ್ಸುಲೇಟ್ ಸ್ಥಾಪನೆಗೆ ಬಗ್ಗೆ ಹೇಳಿದೆ, ಅವರು ಅದನ್ನು "ಬುದ್ಧಿಯಿಲ್ಲದ ಮತ್ತು ಬಲವಂತದ ಪ್ರಶ್ನೆ" ಎಂದು ಕರೆದರು ಮತ್ತು ಮಾರ್ಚ್ 2023 ರಲ್ಲಿ ಅವರ ಬೆಂಗಳೂರು ಭೇಟಿಯ ಸಮಯದಲ್ಲಿ ಕ್ರಮವನ್ನು ಜಾರಿಗೊಳಿಸುವ ಭರವಸೆ ನೀಡಿದರು.

2020 ರಲ್ಲಿ ಆಗಿನ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ, ಭಾರತ-ಯುಎಸ್ ಸಂಬಂಧಗಳಲ್ಲಿ ಬೆಂಗಳೂರಿನ ಪಾತ್ರವನ್ನು ಒತ್ತಿಹೇಳಿದೆ. ಸತತ ಪ್ರಯತ್ನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 2023 ರ ಯುಎಸ್ ಭೇಟಿಯ ಸಮಯದಲ್ಲಿ ಅವರ ನಿರ್ಣಾಯವನ್ನು ಅವರು ಮುಂದಿಟ್ಟು ಕಾನ್ಸುಲೇಟ್ ಸ್ಥಾಪನೆಗೆ ಪರಸ್ಪರ ಆಧಾರದ ಮೇಲೆ ಅಂತಿಮಗೊಳಿಸಿದ್ದರು. ಎಂದು ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+