ಭಾರತೀಯ ಷೇರುಪೇಟೆಯಲ್ಲಿ ಐಪಿಒಗಳ ಭರಾಟೆ ಜೋರಾಗಿದ್ದು,ಉತ್ತಮವಾಗಿ ಚಂದಾದಾರಿಕೆ ಪಡೆದ ಬೆನ್ನಲ್ಲೇ ವಿಶಾಲ್ ಮೆಗಾ ಮಾರ್ಟ್ ಷೇರುಪೇಟೆಯಲ್ಲಿ ಲಾಭದ ಲಿಸ್ಟಿಂಗ್ ಆಗಿದೆ. ಹೌದು,ಇಂದು ಷೇರು ಮಾರುಕಟ್ಟೆಗೆ ವಿಶಾಲ್ ಮೆಗಾ ಮಾರ್ಟ್ ಎಂಟ್ರಿ ಕೊಟ್ಟಿದೆ.ಹಾಗಿದ್ರೆ ಇಂದು ಮಾರುಕಟ್ಟೆಯಲ್ಲಿ ಷೇರು ಸಿಕ್ಕವರಿಗೆ ಎಷ್ಟ ಲಾಭ ಸಿಗುತ್ತೆ..?ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಬಿಎಸ್‌ಇ ಮತ್ತು ಎನ್‌ಎಸ್‌ಇ ನಲ್ಲಿ ಪಟ್ಟಿಯಾಗಿರುವ ವಿಶಾಲ್ ಮೆಗಾ ಮಾರ್ಟ್ ಶೇ.33.33 ಲಾಭದಲ್ಲಿ ಷೇರುಪೇಟೆಯನ್ನು ಪ್ರವೇಶಿಸಿದೆ.ಅಪ್ಪರ್ ಪ್ರೈಸ್ ಬ್ಯಾಂಡ್ 78 ರೂಪಾಯಿಗೆ ವಿರುದ್ಧವಾಗಿ ಷೇರುಗಳು 104 ರೂಪಾಯಿಗೆ ಪಟ್ಟಿಯಾಗಿದೆ. ಈ ಮೂಲಕ ಹೂಡಿಕೆದಾರರಿಗೆ ರಿಟರ್ನ್ ಕೊಟ್ಟಿದೆ.

ಗುರುಗಾವ್ ಮೂಲದ ವಿಶಾಲ್ ಮೆಗಾಮಾರ್ಟ್ ರಿಟೇಲ್ ಕಂಪನಿಯ ಮಾರುಕಟ್ಟೆ ಕ್ಯಾಪ್ 49,352 ಕೋಟಿಯಷ್ಟಿದೆ. 10 ರೂಪಾಯಿ ಮುಖಬೆಲೆಯ ವಿಶಾಲ್ ಮೆಗಾ ಮಾರ್ಟ್ 104 ರೂಪಾಯಿಗೆ ಪಟ್ಟಿಯಾದ ಬಳಿಕ ತನ್ನ ಲಾಭವನ್ನು ಮುಂದುವರೆಸಿದ್ದು ಎನ್‌ಎಸ್‌ಇ ನಲ್ಲಿ 42 ಪರ್ಸೆಂಟ್ ಹೆಚ್ಚಾಗಿ 111.19 ರೂಪಾಯಿಗೆ ತಲುಪಿತು.
ಪ್ರೈಸ್ ಬ್ಯಾಂಡ್ 74 ರಿಂದ 78 ಪ್ರೈಸ್ ಬ್ಯಾಂಡ್ ಹೊಂದಿದ್ದ ವಿಶಾಲ್ ಮೆಗಾ ಮಾರ್ಟ್ ಐಪಿಒ ಮೂಲಕ 8,000 ಕೋಟಿ ರೂಪಾಯಿ ನಿಧಿಯನ್ನು ಸಂಗ್ರಹಿಸಿದೆ.
ಐಪಿಒ 1,025,641,025 ಷೇರುಗಳನ್ನು ಆಫರ್ ಫಾರ್ ಸೇಲ್ ಅಂದರೆ OFS ಮೂಲಕ ಮಾರಾಟ ಮಾಡಿದೆ. ಡಿಸೆಂಬರ್ 11ರಂದು ಬೆಳಿಗ್ಗೆ 10 ಗಂಟೆಗೆ ಬಿಡ್‌ಗೆ ತೆರೆದುಕೊಳ್ಳಲಿರುವ ಐಪಿಒ ಶುಕ್ರವಾರ ಡಿಸೆಂಬರ್ 13ರವರೆಗೆ ಬಿಡ್‌ಗೆ ತೆರೆದಿದ್ದ ವಿಶಾಲ್ ಮೆಗಾ ಮಾರ್ಟ್, ಕನಿಷ್ಠ 190 ಷೇರುಗಳಿಗೆ ಬಿಡ್ ಮಾಡಬೇಕಿತ್ತು.
ಇನ್ನೂ ಚಿಲ್ಲರೆ ಹೂಡಿಕೆದಾರರು ಗರಿಷ್ಠ 13 ಲಾಟ್‌ಗಳಿಗೆ ಅಂದರೆ 2470 ಷೇರುಗಳಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ಹೂಡಿಕೆದಾರರು ಮೇಲಿನ ಬೆಲೆಯ ಬ್ಯಾಂಡ್ ಪ್ರಕಾರ 192,660 ರೂಪಾಯಿಯಾಗಿದೆ ಹೂಡಿಕೆ ಮಾಡಬೇಕಾಗುತ್ತದೆ.
ವಿಶಾಲ್ ಮೆಗಾ ಮಾರ್ಟ್
ವಿಶಾಲ್ ಮೆಗಾ ಮಾರ್ಟ್ ಅನ್ನು 2001 ರಲ್ಲಿ ಸ್ಥಾಪನೆಯಾಗಿತು.ಇದು ಹೈಪರ್ಮಾರ್ಕೆಟ್ ಸರಪಳಿಯಾಗಿದ್ದು,ಉಡುಪುಗಳು, ದಿನಸಿ, ಎಲೆಕ್ಟ್ರಾನಿಕ್ಸ್ ಮತ್ತು ಮನೆಯ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತದೆ. ಸೆಪ್ಟೆಂಬರ್ 30, 2024 ರಂತೆ, ಕಂಪನಿಯು ದೇಶದ 391 ನಗರಗಳಲ್ಲಿ 600 ಕ್ಕೂ ಹೆಚ್ಚು ಮಳಿಗೆಗಳನ್ನು ಮತ್ತು 16,537 ಉದ್ಯೋಗಿಗಳನ್ನು ಹೊಂದಿದೆ.


Click it and Unblock the Notifications