ದಿನಂ ಪ್ರತಿ ಮಾರುಕಟ್ಟೆಗೆ ಹೊಸ ಹೊಸ ವಿನ್ಯಾಸದ ಫೋನ್‌ಗಳು ಲಗ್ಗೆ ಇಡುತ್ತಿವೆ. ಈ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಅದರಲ್ಲೂ ಚೀನಿ ಕಂಪನಿಗಳು ಮೊಬೈಲ್‌ಗಳ ರೇಟ್ ಸಹ ಕಡಿಮೆ ಹಾಗೂ ಆಕರ್ಷಕವಾಗಿರುತ್ತವೆ. ಚೀನಾದ ಒಂದು ಕಂಪನಿ ಮಾರ್ಚ್ ಏಳರಂದು ಮತ್ತೊಂದು ಮೊಬೈಲ್ ಭಾರತದ ಮಾರುಕಟ್ಟೆಗೆ ಬಿಡಲಿದೆ.
ಚೀನಾದ ಟೆಕ್ ಕಂಪನಿ Vivo ಮಾರ್ಚ್ 7 ರಂದು ಭಾರತದಲ್ಲಿ Vivo V30 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ Vivo V30 ಮತ್ತು Vivo V30 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ವಿವೋ ತನ್ನ ವೆಬ್‌ಸೈಟ್ ಮತ್ತು ಸಾಮಾಜಿಕತಾಣಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ.

ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 80W ವೇಗದ ಚಾರ್ಜಿಂಗ್ ಹೊಂದಿರಲಿದೆ.
50MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. Vivo V30 ಮತ್ತು Vivo V30 Pro ಮೂರು ಬಣ್ಣಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅಂಡಮಾನ್ ಬ್ಲೂ, ಕ್ಲಾಸಿಕ್ ಬ್ಲಾಕ್ ಮತ್ತು ಪೀಕಾಕ್ ಗ್ರೀನ್. ಇಲ್ಲಿ ಭಾರತದಲ್ಲಿ ಇದರ ಆರಂಭಿಕ ಬೆಲೆ ರೂ 33,990 ಆಗಿರಬಹುದು.
ವಿವೋ ವಿ30 ಸ್ಮಾರ್ಟ್ ಫೋನ್ ವಿಶೇಷತೆ
- ವಿವೋ ವಿ30 ಸ್ಮಾರ್ಟ್ ಫೋನ್ 120Hz ರಿಫ್ರೆಶ್ ದೊಂದಿಗೆ 3D ಕರ್ವಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ ಗಾತ್ರವು 6.78 ಇಂಚುಗಳಷ್ಟು ಇರಬಹುದು.
- ಸ್ಮಾರ್ಟ್‌ಫೋನ್‌ಗಳ ಹಿಂದೆ 50MP+50MP+2MPಯ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸಲಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 50MP ಹೊಂದಿರುತ್ತದೆ.
- ವಿವೋ ವಿ30 ಸರಣಿಯ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಹೊಂದಿದ್ದು, 5000mAh ಬ್ಯಾಟರಿಯನ್ನು ಹೊಂದಿರುತ್ತದೆ.
- ಈ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್ ಬಗ್ಗೆ ಕಂಪನಿಯು ಇನ್ನೂ ಮಾಹಿತಿಯನ್ನು ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, Qualcomm Snapdragon 7 Gen3 ಪ್ರೊಸೆಸರ್ ಅನ್ನು ಇದರಲ್ಲಿ ಕಾಣಬಹುದು.
- ಸ್ಮಾರ್ಟ್ ಫೋನ್ 8GB ರ್ಯಾಮ್ ಜೊತೆಗೆ 128 ಜಿಬಿ ಇನ್‌ಬಿಲ್ಟಿ ಹೊಂದಿದೆ. ವಿವೋ ವಿ30 ಮತ್ತು ವಿವೋ ವಿ30 Proನ ರ್ಯಾಮ್ ಮತ್ತು ಸಂಗ್ರಹಣೆಯಲ್ಲಿ ವ್ಯತ್ಯಾಸವಿರಬಹುದು.


Click it and Unblock the Notifications