ನೀವು ಸ್ಮಾಲ್ ಕ್ಯಾಪ್ಸ್ ಮತ್ತು ಮಿಡ್-ಕ್ಯಾಪ್‌ಗಳಲ್ಲಿ ನಿಮ್ಮ ಭಾರೀ ಮೊತ್ತವನ್ನು ಹೂಡಿಕೆ ಮಾಡುವಾಗ ಅತೀ ಬುದ್ಧಿವಂತಿಕೆಯಿಂದ ಮತ್ತು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ. ಯಾಕೆಂದರೆ ಮಾರುಕಟ್ಟೆ ಎಂದಿಗೂ ಕೂಡ ಸ್ಥಿರವಾಗಿರದು. ಎಸ್‌ಎಂಟಿಯ ವಿಎಲ್‌ಎ ಅಂಬಾಲ ಶಿಫಾರಸಿನ ಪ್ರಕಾರ ನೀವು ಇಂದು ಈ ಪ್ರಮುಖ ಷೇರುಗಳನ್ನು ಖರೀದಿ ಮಾಡಬಹುದಾಗಿದೆ.
ಎಸ್‌ಎಂಟಿಯ ವಿಎಲ್‌ಎ ಅಂಬಾಲ ಶಿಫಾರಸು ಮಾಡಿದ ಷೇರುಗಳು ಕೇವಲ ಒಂದೆರಡು ತಿಂಗಳುಗಳಲ್ಲಿ ಬಹು-ಪಟ್ಟು ಆದಾಯವನ್ನು ನೀಡಿವೆ. ಸ್ಮಾಲ್ ಕ್ಯಾಪ್ಸ್ ಮತ್ತು ಮಿಡ್-ಕ್ಯಾಪ್‌ಗಳಲ್ಲಿ ಹಣವು ಹೂಡಿಕೆಯಾಗುತ್ತಿದೆ. ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ನಿಫ್ಟಿ 100 ಸ್ಮಾಲ್ ಮತ್ತು ನಿಫ್ಟಿ ಮಿಡ್‌ಕ್ಯಾಪ್ 50 ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಆಗಸ್ಟ್‌ನಲ್ಲಿ ಮಾರುಕಟ್ಟೆಯಲ್ಲಿ ಕರಡಿ ಕುಣಿತ ಕಂಡು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ತಿಂಗಳಿಗೆ ಗೂಳಿ ನುಗ್ಗುವ ಬಗ್ಗೆ ಸುಳಿವು ಇರುವುದರಿಂದ ನಾವು ಯಾವೆಲ್ಲ ಹೂಡಿಕೆ ಮಾಡಬಹುದು, ಸೆಪ್ಟೆಂಬರ್ 5, 2023 ರಂದು ನಮ್ಮ ಹೂಡಿಕೆ ಹೇಗಿರಬೇಕು ಎಂಬ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
"ಭಾರತೀಯ ಮಾರುಕಟ್ಟೆಯು ಸಕಾರಾತ್ಮಕ ಸುದ್ದಿಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದೆ. ಜಾಗತಿಕ ಆರ್ಥಿಕತೆಗಳು ಇಕ್ಕಟ್ಟಿನಲ್ಲಿದೆ. ಆದರೆ ಹೆಚ್ಚಿನ ಹಣದುಬ್ಬರದ ನಡುವೆ ಉತ್ತಮವಾಗಿ ಪರಿಸ್ಥಿತಿ ನಿಭಾಯಿಸುತ್ತಿದೆ. ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿನ ಹಿಂಜರಿತ ಕಾಣುತ್ತಿದೆ. ಈ ನಡುವೆ ಹೂಡಿಕೆ ವಿಚಾರದಲ್ಲಿ ಜಾಗರೂಕರಾಗಿರಿ ಎಂದು ನಾನು ಹೇಳಲೇಬೇಕು," ಎಂದು ವಿಎಲ್‌ಎ ಅಂಬಾಲಾ ಹೇಳಿದ್ದಾರೆ.
ಇಂದು ಈ ಸ್ಟಾಕ್ ಖರೀದಿಸಬೇಡಿ
ಬಲರಾಮ್‌ಚಿನ್, ಬೇಲ್, ಹಿಂಡ್‌ಕೋಪರ್, ಇಬುಲ್‌ಎಚ್‌ಎಸ್‌ಜಿಫಿನ್, ಇಂಡಿಯಾಸಿಮ್ ಇಂದು ಷೇರು ವಿನಿಮಯ ಕೇಂದ್ರದ F&O ನಿಷೇಧ ಪಟ್ಟಿಯ ಭಾಗವಾಗಿದೆ.
ಇಂದು ಖರೀದಿಸಬಹುದಾದ 10 ಷೇರುಗಳು
ಧಮ್ಪುರ್ ಶುಗರ್ ಮಿಲ್ಸ್, ಎಂಎಸ್‌ಟಿಸಿ, ನವೀನ್ ಫ್ಲೋರಿನ್ ಇಂಟರ್ನ್ಯಾಷನಲ್, ಜುಬಿಲೆಂಟ್ ಫುಡ್ ವರ್ಕ್ಸ್, ಕ್ರಾಂಪ್ಟನ್ ಗ್ರೀವ್ಸ್, ಬಂಧನ್ ಬ್ಯಾಂಕ್, ಎಸಿಸಿ, ಇಂಡಸ್ ಟವರ್ಸ್, ಎನ್‌ಟಿಪಿಸಿ, ಎಲ್‌ಟಿಐಮಿಂಡ್‌ಟ್ರೀ ಇಂದು ವಿಎಲ್‌ಎ ಅಂಬಾಲಾ ನೀಡಿರುವ ಖರೀದಿಸಬಹುದಾದ ಷೇರುಗಳಾಗಿದೆ.
ಇಲ್ಲಿ ಗಮನಿಸಿ: ಮೇಲೆ ನೀಡಿರುವ ಸಲಹೆಯು ಮಾರುಕಟ್ಟೆ ವಿಶ್ಲೇಷಕರು ನೀಡಿರುವ ಸಲಹೆಯಾಗಿದೆ. ಲೇಖಕರು ಅಥವಾ ಗ್ರೇನಿಯಮ್ ಈ ಷೇರು ಖರೀದಿ ಸಲಹೆ ನೀಡಿರುವುದಿಲ್ಲ. ಈ ಬರಹದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರದಿಂದಾಗಿ ಯಾವುದೇ ನಷ್ಟವಾದರೆ ಅದಕ್ಕೆ ಲೇಖಕರು, ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್ ಜವಾಬ್ದಾರರಾಗಿರುವುದಿಲ್ಲ. ಗುಡ್‌ರಿಟರ್ನ್ಸ್ ಪ್ರಮಾಣೀಕೃತ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆಯನ್ನು ಇಲ್ಲಿ ನೀಡಿದೆ.


Click it and Unblock the Notifications