ಏರ್‌ಟೆಲ್, ವೊಡಾಫೋನ್-ಐಡಿಯಾ, ಜಿಯೊ ಗ್ರಾಹಕರಿಗೆ ಯೋಜನೆಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಎಲ್ಲಾ ನೆಟ್‌ವರ್ಕ್‌ಗಳಂತೆ ವೊಡಾಫೋನ್-ಐಡಿಯಾ ಕಂಪನಿಯು ಯೋಜನೆಗಳ ದರಗಳಲ್ಲಿ ಬದಲಾವಣೆ ತಂದಿದೆ. ಜೊತೆಗೆ ಹೊಸ ಯೋಜನೆಗಳನ್ನು ಡಿಸೆಂಬರ್ 3 ರಿಂದ ಅನ್ವಯವಾಗುವಂತೆ ಜಾರಿಗೊಳಿಸಿದೆ.
ವೊಡಾಫೋನ್-ಐಡಿಯಾ ಪ್ರಿಪೇಯ್ಡ್ ಗ್ರಾಹಕರು ಡಿಸೆಂಬರ್ 3ರಿಂದ ಹೊಸ ಯೋಜನೆಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಅನ್‌ಲಿಮಿಟೆಡ್ ಯೋಜನೆಗಳ ಜೊತೆಗೆ ಹೊಸ ಪ್ರಿಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಲಭ್ಯವಿದೆ.
149, 249, 299 ಹಾಗೂ 399 ರುಪಾಯಿಗಳ ಪ್ರಿಪೇಯ್ಡ್ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಹಾಗಿದ್ದರೆ ಈ ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ
149 ರುಪಾಯಿ ರೀಚಾರ್ಜ್
28 ದಿನಗಳ ವ್ಯಾಲಿಡಿಟಿ ಹೊಂದಿರುವ 149 ರುಪಾಯಿ ಯೋಜನೆಯು ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು), ಒಟ್ಟಾರೆ ತಿಂಗಳಿಗೆ 2 ಜಿಬಿ ಡೇಟಾ, ಹಾಗೂ 300 ಎಸ್‌ಎಂಎಸ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತದೆ.
249 ರುಪಾಯಿ ರೀಚಾರ್ಜ್
249 ರುಪಾಯಿ ರೀಚಾರ್ಜ್ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದ್ದು ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು),ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ಸೇವೆಯನ್ನು ಹೊಂದಿದೆ.
299 ರುಪಾಯಿ ರೀಚಾರ್ಜ್
28 ದಿನಗಳ ವ್ಯಾಲಿಡಿಟಿ ಹೊಂದಿರುವ 299 ರುಪಾಯಿ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು) ಜೊತೆಗೆ ಪ್ರತಿದಿನ 2 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ಸೇವೆಯನ್ನು ಒಳಗೊಂಡಿದೆ.
399 ರುಪಾಯಿ ರೀಚಾರ್ಜ್
ಹೆಚ್ಚು ಡೇಟಾ ಬಳಸುವವರಿಗೆ ಈ ಯೋಜನೆಯು ಸೂಕ್ತವಾಗಿದೆ. ಈ ಮೇಲಿನ ಯೋಜನೆಗಳಂತೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 399 ರುಪಾಯಿ ರೀಚಾರ್ಜ್ ಮಾಡಿಸಿದ್ದಲ್ಲಿ ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು), ಪ್ರತಿದಿನ 3 ಜಿಬಿ ಡೇಟಾ ಸಿಗಲಿದೆ. ಹಾಗೂ 100 ಎಸ್‌ಎಂಎಸ್ ಕಳುಹಿಸಬಹುದು.
84 ದಿನಗಳ ಅನ್‌ಲಿಮಿಟೆಡ್ ಯೋಜನೆಗಳು
379 ರುಪಾಯಿ : ಅನ್‌ಲಿಮಿಟೆಡ್ ಕರೆಗಳು (3000 ನಿಮಿಷಗಳು), ತಿಂಗಳಿಗೆ 6 ಜಿಬಿ ಡೇಟಾ ಹಾಗೂ 1000 ಎಸ್‌ಎಂಎಸ್
599 ರುಪಾಯಿ: ಅನ್‌ಲಿಮಿಟೆಡ್ ಕರೆಗಳು (3000 ನಿಮಿಷಗಳು), ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್
699 ರುಪಾಯಿ: ಅನ್‌ಲಿಮಿಟೆಡ್ ಕರೆಗಳು (3000 ನಿಮಿಷಗಳು), ಪ್ರತಿದಿನ 2 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್
ವಾರ್ಷಿಕ ಅನ್‌ಲಿಮಿಟೆಡ್ ಯೋಜನೆಗಳು
1499 ರುಪಾಯಿ : ಅನ್‌ಲಿಮಿಟೆಡ್ ಕರೆಗಳು (12,000 ನಿಮಿಷಗಳು), ವಾರ್ಷಿಕ ಎಲ್ಲಾ ತಿಂಗಳಿಗೆ ಒಟ್ಟಾರೆ 24 ಜಿಬಿ ಡೇಟಾ ಹಾಗೂ 3600 ಎಸ್‌ಎಂಎಸ್
2399 ರುಪಾಯಿ : ಅನ್‌ಲಿಮಿಟೆಡ್ ಕರೆಗಳು (12,000 ನಿಮಿಷಗಳು), ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್ ಲಭ್ಯವಿದೆ.


Click it and Unblock the Notifications