ವಿಐ (Vi) ಸದ್ದಿಲ್ಲದೆ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ತಂದಿದೆ. ಇದರಲ್ಲಿ ಡೇಟಾ ಜೊತೆಗೆ ಉಚಿತ ಕರೆ ಪ್ರಯೋಜನ ಸಿಗುತ್ತದೆ. ಹೌದು, ದೇಶದ 3ನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಯೋಜನೆಯಾಗಿದೆ. ಈ ಮೂಲಕ ಕಂಪನಿಯು, ಈ ಹೊಸ ಯೋಜನೆಯನ್ನು ತನ್ನ ಪೋರ್ಟ್‌ಫೋಲಿಯೊಗೆ ಸೇರಿಸಿದೆ. ಈ ರೀಚಾರ್ಜ್ ಯೋಜನೆಯ ಬೆಲೆ ಎಷ್ಟು? ವ್ಯಾಲಿಡಿಟಿ ಮತ್ತು ಪ್ರಯೋಜನಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.
ಕಂಪನಿಯು ನಿತ್ಯ ಬಳಕೆಗಾಗಿ ಅಗ್ಗದ ರೀಚಾರ್ಜ್ ಪ್ಯಾಕ್ ಬಯಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಯೋಜನೆಯನ್ನು (Vodafone Idea Rs 340 Prepaid Plan Launched) ಪರಿಚಯಿಸಿದೆ. ಈ ಯೋಜನೆಯ ಬೆಲೆ 340 ರೂ. ಆಗಿದೆ. ವಿಶೇಷವೆಂದರೆ, ಈ ಪ್ಲಾನ್ ಪ್ರಸ್ತು, ದೇಶಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿದೆ. ಅಲ್ಲದೆ, ವಿಐನ ಈ ಹೊಸ ಯೋಜನೆಯು ಸೀಮಿತ ಡೇಟಾ ಅಗತ್ಯವಿರುವ ಬಳಕೆದಾರರಿಗೆ, ಹೆಚ್ಚು ಕರೆ ಮತ್ತು ಎಸ್‌ಎಂಎಸ್ ಸೌಲಭ್ಯಗಳ ಅಗತ್ಯವಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಯಾವ ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ

ಬೆಲೆ : 340 ರೂ.
ವ್ಯಾಲಿಡಿಟಿ: 28 ದಿನಗಳು
ದೈನಂದಿನ ಡೇಟಾ: ನಿತ್ಯ 1GB + 1GB ಹೆಚ್ಚುವರಿ ಡೇಟಾ
ಎಸ್‌ಎಂಎಸ್: ನಿತ್ಯ 100 ಎಸ್‌ಎಂಎಸ್
ವಾಯ್ಸ್ ಕಾಲ್ : ಅನ್‌ಲಿಮಿಟೆಡ್ ಸ್ಥಳೀಯ ಮತ್ತು ಎಸ್‌ಟಿಡಿ ಕಾಲ್ಸ್
5G ಪ್ರಯೋಜನಗಳು: ಮುಂಬೈ ಭಾಗದ ಗ್ರಾಹಕರಿಗೆ ಅನ್‌ಲಿಮಿಟೆಡ್ 5G ಡೇಟಾ ಪ್ರವೇಶ.
ವಿಐ 340 ರೂ. ರೀಚಾರ್ಜ್ ಯೋಜನೆಯ ಪ್ರಯೋಜನಗಳು
ವಿಐ 340 ರೂ.ಗಳ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಈ ಪ್ಲಾನ್ ಮೂಲಕ ಬಳಕೆದಾರರು ಪ್ರತಿದಿನ 1GB ಡೇಟಾ (ದಿನಕ್ಕೆ 1GB + 1GB ಹೆಚ್ಚುವರಿ ಡೇಟಾ) ಪಡೆಯಬಹುದು. ಹಾಗೆಯೇ ನಿತ್ಯ 100 ಎಸ್‌ಎಂಎಸ್ (SMS) ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕಾಲ್ (ಧ್ವನಿ ಕರೆ) ಸೌಲಭ್ಯವನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಕಂಪನಿಯು 1GB ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ವಿಶೇಷವೆಂದರೆ, ಮುಂಬೈ ಭಾಗದ ಬಳಕೆದಾರರು ಮಾತ್ರ ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ಪಡೆಯುತ್ತಿದ್ದಾರೆ.
ನೀವು ವಿಐ 340 ರೂ.ಗಳ ರೀಚಾರ್ಜ್ ಯೋಜನೆಗೆ ದಿನಕ್ಕೆ 12 ರೂ. ವೆಚ್ಚ ಮಾಡಬೇಕಾತ್ತದೆ. ಇದು ಕೆಲವು ಗ್ರಾಹಕರಿಗೆ ಸ್ವಲ್ಪ ದುಬಾರಿಯಾಗಿ ಕಾಣಿಸಬಹುದು. ಆದರೆ, ಸೀಮಿತ ಡೇಟಾ ಮತ್ತು ಆಗಾಗ ಕರೆ ಮಾಡುವ ಅಗತ್ಯವಿರುವ ಬಳಕೆದಾರರಿಗೆ, ಈ ಯೋಜನೆಯು ಉಪಯುಕ್ತ ಆಯ್ಕೆಯಾಗಿದೆ. ಈ 340 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಉಲ್ಲೇಖಿಸಿಲ್ಲ. ಆದರೆ, ಟೆಲಿಕಾಂಟಾಕ್ ವರದಿಯ ಪ್ರಕಾರ, ಈ ಯೋಜನೆಯೊಂದಿಗೆ ಕೆಲವು ಹೈಲೈಟ್ ಮಾಡದ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ.
ರಾತ್ರಿ ಬ್ರೌಸಿಂಗ್ ಅಥವಾ ಡೌನ್‌ಲೋಡ್‌ಗೆ ಬೆಸ್ಟ್
ವಿಐನ (VI) ಅಧಿಕೃತ ವೆಬ್‌ಸೈಟ್‌ನ ಪಟ್ಟಿಯ ಪ್ರಕಾರ, ಈ 340 ರೂ.ಗಳ ರೀಚಾರ್ಜ್ ಯೋಜನೆಯು ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಮಧ್ಯಾಹ್ನ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯ ರವರೆಗೆ ಅನಿಯಮಿತ ಡೇಟಾ ಸಿಗುತ್ತದೆ. ಬಳಕೆದಾರರು ಯಾವುದೇ ಡೇಟಾ ಕಡಿತವಿಲ್ಲದೆ ಇಂಟರ್ನೆಟ್ ಬಳಸಬಹುದು. ಇದು ರಾತ್ರಿ ಬ್ರೌಸಿಂಗ್ ಅಥವಾ ಡೌನ್‌ಲೋಡ್‌ಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಬಳಕೆದಾರರು ರೀಚಾರ್ಜ್ ಮಾಡುವ ಮೊದಲು MyVi ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಈ ಪ್ರಯೋಜನಗಳನ್ನು ದೃಢೀಕರಿಸಬೇಕು.
ನಿಮ್ಮ ಡೇಟಾ ವ್ಯರ್ಥವಾಗುವುದಿಲ್ಲ
ನೀವು ವಾರದಲ್ಲಿ ಬಳಸದ ಡೇಟಾವನ್ನು ವಾರಾಂತ್ಯಕ್ಕೆ ವರ್ಗಾಯಿಸಲಾಗುತ್ತದೆ (ವಾರಾಂತ್ಯದ ಡೇಟಾ ರೋಲ್‌ಓವರ್). ಹೀಗಾಗಿ, ನಿಮ್ಮ ಡೇಟಾ ವ್ಯರ್ಥವಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಡೇಟಾ ಡಿಲೈಟ್ ಬೆನಿಫಿಟ್. ಇದು ನಿಷ್ಠೆ ಆಧಾರಿತ ವೈಶಿಷ್ಟ್ಯವಾಗಿದ್ದು, ಬಳಕೆದಾರರಿಗೆ ಕಾಲಕಾಲಕ್ಕೆ ಉಚಿತ ಡೇಟಾ ಬಹುಮಾನಗಳನ್ನು ನೀಡಲಾಗುತ್ತದೆ. ವಿಶೇಷವಾಗಿ MyVi ಅಪ್ಲಿಕೇಶನ್ ಮೂಲಕ ಸಕ್ರಿಯವಾಗಿ ಉಳಿದರೆ, ಈ ಸಂಭಾವ್ಯ ಪ್ರಯೋಜನಗಳನ್ನು ಪರಿಗಣಿಸಲಾಗುವುದು. ಕಡಿಮೆ ಬೆಲೆಯಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳ ಜೊತೆಗೆ ಮೂಲಭೂತ ಅಗತ್ಯಗಳನ್ನು ಬಯಸುವ ಬಳಕೆದಾರರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications