ವೊಡಾಫೋನ್ ಐಡಿಯಾ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.
ವೊಡಾಫೋನ್ ಐಡಿಯಾದ ನಷ್ಟವು ಹಿಂದಿನ ವರ್ಷದ ಈ ಅವಧಿಯಲ್ಲಿ ಸುಮಾರು 4,874 ಕೋಟಿ ರೂ ಆಗಿತ್ತು. ಇನ್ನು ಹಣಕಾಸು ವರ್ಷ2021 ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 10,659.3 ಕೋಟಿ ರೂ.ಗೆ ತಲುಪಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 11,269.9 ಕೋಟಿ ರೂ. ಆಗಿತ್ತು.
ಎಜಿಆರ್ ಜೂನ್ ತ್ರೈಮಾಸಿಕದಲ್ಲಿ ಹೆಚ್ಚುವರಿ ಶುಲ್ಕ 19,440.5 ಕೋಟಿ ರೂ. ಒಳಗೊಂಡಿದೆ. ಒಟ್ಟು ಅಂದಾಜು ಎಜಿಆರ್ 194.4 ಬಿಲಿಯನ್ ರೂ.ಗಳ ಬಾಕಿ ಶುಲ್ಕವನ್ನು ಗುರುತಿಸಿದ್ದೇವೆ. ಜೊತೆಗೆ ಮಾರ್ಚ್ 31, 2020 ರ ವೇಳೆಗೆ 460.0 ಬಿಲಿಯನ್ ರೂ.ಗಳ ಬಾಕಿ ಹೊಣೆಗಾರಿಜೆ ಇದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ .

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂಗಡಿಗಳ ಲಾಕ್ ಡೌನ್ ಆಗಿ ರೀಚಾರ್ಜ್ಗಳ ಲಭ್ಯತೆ ಕಡಿಮೆಯಾಗಿತ್ತು. ಆರ್ಥಿಕ ಕುಸಿತದ ಕಾರಣದಿಂದಾಗಿ ಗ್ರಾಹಕರ ರೀಚಾರ್ಜ್ ಮಾಡುವ ಸಾಮರ್ಥ್ಯದ ಮೇಲೆ ಸಹ ಪರಿಣಾಮ ಬೀರಿತ್ತು ಎಂದು ವೊಡಾಫೋನ್ ಐಡಿಯಾದ ಎಂಡಿ ಮತ್ತು ಸಿಇಒ ರವೀಂದರ್ ಟಕ್ಕರ್ ಹೇಳಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications