ವೊಡಾಫೋನ್ ಐಡಿಯಾ ಕಂಪನಿಯು ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಪಾವತಿಗಳ ಹೊಸ ವೇಳಾಪಟ್ಟಿಯನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ, ಕಂಪನಿಯ ಷೇರುಗಳು 14 ಪರ್ಸೆಂಟ್‌ನಷ್ಟು ಕುಸಿತ ಕಂಡಿವೆ
ಟೆಲಿಕಾಂ ಕಂಪನಿಗಳು ಎಜಿಆರ್ ಬಾಕಿ ಹಣವನ್ನು ಮಾರ್ಚ್ 17, 2020 ರೊಳಗೆ ಪಾವತಿಸಬೇಕೆಂದು ಅಪೆಕ್ಸ್ ಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿ ಷೇರುಗ ತೀವ್ರ ಹಿನ್ನಡೆ ಅನುಭವಿಸಿವೆ.

ಕಂಪನಿಯು ಹಣ ಮರುಪಾವತಿ ಮಾಡಲು ವಿಫಲವಾದ ಕಾರಣ ಟೆಲಿಕಾಂ ಕಂಪನಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದ ಕಾರಣ ದೂರಸಂಪರ್ಕ ಇಲಾಖೆಯ (ಡಿಒಟಿ) ಮೇಲೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ವಿರುದ್ಧ ತಿರಸ್ಕಾರ ಕ್ರಮಕ್ಕೆ ಆದೇಶಿಸಿದೆ. ವೊಡಾಫೋನ್ ಐಡಿಯಾದ ಷೇರುಗಳು ಕೊನೆಯದಾಗಿ 14 ಪರ್ಸೆಂಟ್ ರಷ್ಟು ಇಳಿಕೆ ಕಂಡು ಪ್ರತಿ ಷೇರಿಗೆ 3.95 ರುಪಾಯಿ ಇಳಿಕೆಗೊಂಡರೆ ಭಾರ್ತಿ ಏರ್‌ಟೆಲ್ ಷೇರುಗಳು 3 ಪರ್ಸೆಂಟ್‌ಕ್ಕಿಂತ ಹೆಚ್ಚು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದವು.
ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟವು 6,438.8 ಕೋಟಿ ಮುಟ್ಟಿದ ಬಳಿಕ ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಷೇರುಗಳು ಶುಕ್ರವಾರ ಆರಂಭದಿಂದಲೇ ಇಳಿಕೆಯತ್ತ ಮುಖಮಾಡಿದ್ದವು. ಜುಲೈ-ಸೆಪ್ಟೆಂಬರ್‌ನಲ್ಲಿ ತ್ರೈಮಾಸಿಕದಲ್ಲಿ 50,922 ಕೋಟಿ ನಷ್ಟದ ಬಳಿಕ ಮೂರನೇ ತ್ರೈಮಾಸಿಕದಲ್ಲೂ ಕಂಪನಿಯು ನಷ್ಟವನ್ನು ವರದಿ ಮಾಡಿದೆ.
ಹೊಂದಾಣಿಕೆಯ ಒಟ್ಟು ಆದಾಯ(AGR) ಆಧಾರದ ಮೇಲೆ ಪರವಾನಗಿ ಶುಲ್ಕ ಹಾಗೂ ಸ್ಪೆಕ್ಟ್ರಮ್ ಬಳಕೆಯ ಶುಲ್ಕವನ್ನು ಹಾಕಲಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ವೊಡಾಫೋನ್ , ಐಡಿಯಾ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು.


Click it and Unblock the Notifications